Jayshree Ullal: ಭಾರತೀಯ ಮೂಲದ ಜಯಶ್ರೀ ಉಲ್ಲಾಳ್ ಅಮೆರಿಕದ ಸೆಲ್ಫ್ ಮೇಡ್ ಶ್ರೀಮಂತ ಮಹಿಳೆ; ಇವರ ಆಸ್ತಿ ಎಷ್ಟು?

Published : Jul 07, 2022, 06:36 PM ISTUpdated : Aug 04, 2022, 05:09 PM IST
Jayshree Ullal: ಭಾರತೀಯ ಮೂಲದ ಜಯಶ್ರೀ ಉಲ್ಲಾಳ್ ಅಮೆರಿಕದ ಸೆಲ್ಫ್ ಮೇಡ್ ಶ್ರೀಮಂತ ಮಹಿಳೆ; ಇವರ ಆಸ್ತಿ ಎಷ್ಟು?

ಸಾರಾಂಶ

ಅಮೆರಿಕದ ಉದ್ಯಮ ಕ್ಷೇತ್ರದಲ್ಲಿ ಸ್ವ ಸಾಮರ್ಥ್ಯದಿಂದ ಉನ್ನತ ಸಾಧನೆ ಮಾಡಿದ ಮಹಿಳಾ ಉದ್ಯಮಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ.ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಈ ಪಟ್ಟಿಯಲ್ಲಿ ಭಾರತೀಯ ಮೂಲದ ಜಯಶ್ರೀ ಉಲ್ಲಾಳ್ 15ನೇ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಇವರ ಜೊತೆ ಭಾರತೀಯ ಮೂಲದ ಇನ್ನೂ ನಾಲ್ಕು ಮಹಿಳೆಯರು ಸ್ಥಾನ ಪಡೆದಿದ್ದಾರೆ. 

Business Desk: ಪ್ರಸಿದ್ಧ ನಿಯತಕಾಲಿಕ ಫೋರ್ಬ್ಸ್ (Forbes) ಬಿಡುಗಡೆ ಮಾಡಿದ ಅಮೆರಿಕದ (US) ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ (self made women) ಪಟ್ಟಿಯಲ್ಲಿ ಭಾರತೀಯ ಮೂಲದ ಜಯಶ್ರೀ ಉಲ್ಲಾಳ್ (Jayshree Ullal) ಅವರು 15ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇವರ ಜೊತೆಗೆ ಭಾರತೀಯ ಮೂಲದ ಇನ್ನೂ ನಾಲ್ವರು ಮಹಿಳೆಯರು ಈ ಪಟ್ಟಿಯಲ್ಲಿ ಸ್ಥಾನ ಪಡೆಯೋ ಮೂಲಕ ಗಮನ ಸೆಳೆದಿದ್ದಾರೆ. 

ತಮ್ಮ ಕ್ಷೇತ್ರದಲ್ಲಿ ಸ್ವ ಸಾಮರ್ಥ್ಯದಿಂದ ಉನ್ನತ ಸಾಧನೆ ಮಾಡಿದ ಮಹಿಳಾ ಉದ್ಯಮಿಗಳನ್ನು ಫೋರ್ಬ್ಸ್ ಈ ಪಟ್ಟಿಯಲ್ಲಿ ದಾಖಲಿಸಿದೆ. ಇದು ಫೋರ್ಬ್ಸ್ ಬಿಡುಗಡೆಗೊಳಿಸಿರುವ ಅಮೆರಿಕದ ಸೆಲ್ಫ್ ಮೇಡ್ ಮಹಿಳೆಯರ ಎಂಟನೇ ವಾರ್ಷಿಕ ಪಟ್ಟಿಯಾಗಿದೆ. ಕಳೆದ ಕೆಲವು ದಶಕಗಳಿಂದ ಭಾರತೀಯ ಮಹಿಳೆಯರು ಎಫ್ಎಂಸಿಜೆ, ರಕ್ಷಣಾ ಪಡೆ, ಐಟಿ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತೀಯ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸ್ಥಾನಮಾನಗಳಲ್ಲಿ ಪ್ರಗತಿಯಾಗಿದೆ. ಆದರೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಸ್ಥಾನಕ್ಕೇರಿ ಸೆಲ್ಫ್ ಮೇಡ್ ಬಿಲಿಯನೇರ್ ಆದವರ ಸಂಖ್ಯೆ ಬೆರಳೆಣಿಕೆಯಷ್ಟು. ಅಂಥವರಲ್ಲಿ ಜಯಶ್ರೀ ಉಲ್ಲಾಳ್ ಕೂಡ ಒಬ್ಬರು. 

LIC Policy: ಈ ಪಾಲಿಸಿಯಲ್ಲಿ ನೀವು ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ಕೋಟ್ಯಧಿಪತಿ ಆಗೋದು ಗ್ಯಾರಂಟಿ!

ಯಾರು ಈ ಜಯಶ್ರೀ ಉಲ್ಲಾಳ್?
ಅರಿಸ್ಟಾ ನೆಟ್ ವರ್ಕ್ ನಲ್ಲಿ ಶೇ.5ರಷ್ಟು ಪಾಲು ಹೊಂದಿರುವ ಜಯಶ್ರೀ ಉಲ್ಲಾಳ್ ಅವರ ಒಟ್ಟು ಸಂಪತ್ತು 190 ಕೋಟಿ ಅಮೆರಿಕನ್ ಡಾಲರ್. ಲಂಡನ್ ನಲ್ಲಿ ಹುಟ್ಟಿ ಭಾರತದಲ್ಲಿ ಬೆಳೆದ ಜಯಶ್ರೀ ಉಲ್ಲಾಳ್, ಸ್ಯಾನ್ ಫ್ರಾನ್ಸಿಕೋ ಸ್ಟೇಟ್ ಯುನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸಾಂತಾ ಕ್ಲಾರ ಯುನಿವರ್ಸಿಟಿಯಿಂದ ಇಂಜಿನಿಯರಿಂಗ್ ಮ್ಯಾನೇಜ್ ಮೆಂಟ್ ಪದವಿ ಪಡೆದಿದ್ದಾರೆ.ಒಂದು ದಶಕಕ್ಕೂ ಅಧಿಕ ಸಮಯದಿಂದ ಅರಿಸ್ಟಾ ಅಧ್ಯಕ್ಷೆ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಈ ಸಂಸ್ಥೆಯ ಉದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. 

2014ರ ಜೂನ್ ನಲ್ಲಿ ಇವರು ಕಂಪನಿಯ ಐತಿಹಾಸಿಕ ಹಾಗೂ ಯಶಸ್ವಿ ಐಪಿಒ ನಡೆಸುವ ಮೂಲಕ ಶೂನ್ಯದಿಂದ ಮಲ್ಟಿ ಬಿಲಿಯನ್ ಡಾಲರ್ ತನಕ ವ್ಯವಹಾರ ವಿಸ್ತರಿಸುವಂತೆ ಮಾಡಿದ್ದಾರೆ. ಅರಿಸ್ಟಾಕ್ಕೆ ಸೇರ್ಪಡೆಗೊಳ್ಳುವ ಮುನ್ನ ಜಯಶ್ರೀ ಉಲ್ಲಾಳ್ ಸಿಸ್ಕೋ ಕಂಪನಿಯ ಹಿರಿಯ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.  30 ವರ್ಷಗಳಿಗೂ ಅಧಿಕ ನೆಟ್ ವರ್ಕಿಂಗ್ ಅನುಭವ ಹೊಂದಿರುವ ಜಯಶ್ರೀ ಉಲ್ಲಾಳ್, 2015ರಲ್ಲಿ ಇ & ವೈ 'ಎಂಟರ್ ಪ್ರಿನರ್ ಆಫ್ ದಿ ಇಯರ್', 2018ರಲ್ಲಿ ಬ್ಯಾರ್ರನ್ಸ್ 'ಜಗತ್ತಿನ ಅತ್ಯುತ್ತಮ ಸಿಇಒ' ಹಾಗೂ 2019ರಲ್ಲಿ ಫಾರ್ಚೂನ್ 'ಅಗ್ರ 20 ಉದ್ಯಮ ವ್ಯಕ್ತಿಗಳು' ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

ಜಯಶ್ರೀ ಉಲ್ಲಾಳ್ ಜೊತೆಗೆ ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಮೂಲದ ಮಹಿಳೆಯರಲ್ಲಿ ಸಿಂಟೆಲ್ ಸಹಸಂಸ್ಥಾಪಕಿ ನೀರಜ್ ಸೇಥಿ (24ನೇ ಸ್ಥಾನ), ಕಾನ್ ಫ್ಲೂಯೆಂಟ್ ಸಹಸಂಸ್ಥಾಪಕಿ ನೇಹಾ ನರ್ಖೆಡೆ (57ನೇ ಸ್ಥಾನ), ಪೆಪ್ಸಿಕೋ ಮಾಜಿ ಸಿಇಒ ಇಂದ್ರಾ ನೂಯಿ (87ನೇ ಸ್ಥಾನ) ಹಾಗೂ ಜಿಂಗ್ಕೋ ಬಯೋವರ್ಕ್ಸ್ ಸಹಸಂಸ್ಥಾಪಕಿ ರೇಶ್ಮಾ ಶೆಟ್ಟಿ (97ನೇ ಸ್ಥಾನ) ಕೂಡ ಸೇರಿದ್ದಾರೆ. 

Senior Citizens Savings Scheme: 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಬೆಸ್ಟ್; ಅಧಿಕ ಬಡ್ಡಿ ಜೊತೆಗೆ ತೆರಿಗೆ ಉಳಿತಾಯ

ಮೀರಜ್ ಸೇಥಿ ಅವರ ಒಟ್ಟು ಆಸ್ತಿ ಮೌಲ್ಯ 100 ಕೋಟಿ ಅಮೆರಿಕನ್ ಡಾಲರ್. ನೇಹಾ ನರ್ಖೆಡೆ ಅವರ ಆಸ್ತಿ 49 ಕೋಟಿ ಅಮೆರಿಕನ್ ಡಾಲರ್. ಪೆಪ್ಸಿಕೋ ಮಾಜಿ ಸಿಇಒ ಇಂದ್ರಾ ನೂಯಿ ಅವರ ಒಟ್ಟು ಸಂಪತ್ತು 32 ಕೋಟಿ ಅಮೆರಿಕನ್ ಡಾಲರ್. ಇನ್ನು ರೇಶ್ಮಾ ಶೆಟ್ಟಿ ಅವರ ಒಟ್ಟು ಆಸ್ತಿ ಮೌಲ್ಯ 22 ಕೋಟಿ ಅಮೆರಿಕನ್ ಡಾಲರ್. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!