JJ Irani Passes Away: ಭಾರತದ ಉಕ್ಕಿನ ಮನುಷ್ಯ, ಟಾಟಾ ಸ್ಟೀಲ್ಸ್‌ನ ಜಮ್ಶೆಡ್‌ ಜೆ ಇರಾನಿ ನಿಧನ

By Sharath Sharma KalagaruFirst Published Nov 1, 2022, 11:54 AM IST
Highlights

Jamshed J Irani no more: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಜಮ್ಶೆಡ್‌ ಜೆ ಇರಾನಿ ನಿಧನರಾಗಿದ್ದಾರೆ. ಟಾಟಾ ಸ್ಟೀಲ್‌ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು ಬೇಸರ ವ್ಯಕ್ತಪಡಿಸಿದೆ. 

ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿದ್ದ ಟಾಟಾ ಸ್ಟೀಲ್ಸ್‌ನ ಮಾಜಿ ನಿರ್ದೇಶಕ ಜಮ್ಶೆಡ್‌ ಜೆ ಇರಾನಿ ನಿಧನರಾಗಿದ್ದಾರೆ. ಸೋಮವಾರ ಮಧ್ಯರಾತ್ರಿ ಅವರು ಮೃತಪಟ್ಟಿದ್ದು ಅವರಿಗೆ 86 ವರ್ಷ ವಯಸ್ಸಾಗಿತ್ತು. ಟಾಟಾ ಸ್ಟೀಲ್ಸ್‌ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, "ಭಾರತದ ಉಕ್ಕಿನ ಮನುಷ್ಯ ನಿಧನರಾಗಿದ್ದಾರೆ. ಅತ್ಯಂತ ಬೇಸರದಿಂದ ಟಾಟಾ ಸ್ಟೀಲ್ಸ್‌ ಈ ಮಾಹಿತಿಯನ್ನು ನೀಡುತ್ತಿದೆ. ಪದ್ಮಭೂಷಣ ಡಾ. ಜಮ್ಶೆಡ್‌ ಜೆ ಇರಾನಿ ಅವರು ನಮ್ಮನ್ನು ಅಗಲಿದ್ದಾರೆ," ಎಂದು ಹೇಳಿದೆ. ಟಾಟಾ ಆಸ್ಪತ್ರೆಯಲ್ಲಿ ಅಕ್ಟೋಬರ್‌ 31 ರಂದು ಜಮ್ಶೆಡ್‌ ಜೆ ಇರಾನಿ ಸಾವನ್ನಪ್ಪಿದ್ದಾರೆ. 

2011ರಂದು ಜಮ್ಶೆಡ್‌ ಇರಾನಿ ಟಾಟಾ ಸ್ಟೀಲ್‌ನ ಆಡಳಿತ ಮಂಡಳಿಯಿಂದ ನಿವೃತ್ತಿ ಪಡೆದರು. 43 ವರ್ಷಗಳ ಕಾಲ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಂತರಾವರು ನಿವೃತ್ತಿ ಘೋಷಿಸಿದ್ದರು. ನಾಗ್ಪುರದಲ್ಲಿ ಅವರು ಬಿಎಸ್‌ಸಿ ಮತ್ತು ಎಮ್‌ಎಸ್‌ಸಿ ವ್ಯಾಸಂಗ ಮಾಡಿದ್ದರು. ಅದಾದ ನಂತರ ಅವರು ಇಂಗ್ಲೆಂಡಿನ ಶೆಫ್ಫೀಲ್ಡ್‌ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್‌ ಆಫ್‌ ಮೆಟಲರ್ಜಿ ಪದವಿ ಪಡೆದರು. ಅದಾದ ನಂತರ ಅವರು ಮೆಟಲರ್ಜಿಯಲ್ಲಿ ಪಿಎಚ್‌ಡಿ ಕೂಡ ಮಾಡಿದರು. 

Latest Videos

ಇದನ್ನೂ ಓದಿ: ವಿಶ್ವದ ಟಾಪ್ 100 ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿ ಇದೇ ನೋಡಿ!

ನಂತರ ಶೆಫ್ಫೀಲ್ಡ್‌ನಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬ್ರಿಟಿಶ್‌ ಐರನ್‌ ಮತ್ತು ಸ್ಟೀಲ್‌ ರಿಸರ್ಚ್‌ ಅಸೋಸಿಯೇಷನ್‌ನಲ್ಲಿ ಅವರು ಕೆಲಸ ಆರಂಭಿಸಿದರು. ಅದಾದ ಬಳಿಕ ಭಾರತಕ್ಕೆ ವಾಪಸಾದ ಅವರು ಟಾಟಾ ಐರನ್‌ ಮತ್ತು ಸ್ಟೀಲ್‌ ಸಂಸ್ಥೆಯನ್ನು ಸೇರಿದರು. ಈಗ ಇದೇ ಸಂಸ್ಥೆ ಟಾಟಾ ಸ್ಟೀಲ್‌ ಆಗಿದೆ. ನಿರ್ದೇಶಕರಿಗೆ ಸಹಾಯಕರಾಗಿ ಅವರು ಕೆಲಸ ಆರಂಭಿಸಿದರು. 

ಇದನ್ನೂ ಓದಿ: ರೇಂಜ್‌ ರೋವರ್‌ನಿಂದ ಜಾಗ್ವಾರ್‌: ಭಾರತೀಯ ಉದ್ಯಮಿಗಳ ಒಡೆತನದ ಪ್ರಸಿದ್ಧ ವಿದೇಶಿ ಬ್ರ್ಯಾಂಡ್‌ಗಳು!

1978ರಲ್ಲಿ ಅವರು ಟಾಟಾ ಸ್ಟೀಲ್‌ನ ಜನರಲ್‌ ಸೂಪರಿಂಟೆಂಡೆಂಟ್‌ ಆಗಿ ಬಡ್ತಿ ಪಡೆದರು ನಂತರ 1979ರಲ್ಲಿ ಜನರಲ್‌ ಮ್ಯಾನೇಜರ್‌ ಆದರು. 1985ರಲ್ಲಿ ಟಾಟಾ ಸ್ಟೀಲ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದರು. 1988ರಲ್ಲಿ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾದರು. 1992ರಲ್ಲಿ ಮತ್ತೆ ಕಾರ್ಯನಿರ್ವಾಹಕ ನಿರ್ದೇಶಕರಾದ ಅವರು ನಿವೃತ್ತಿಯವರೆಗೂ ಇದೇ ಹುದ್ದೆಯನ್ನು ಅಲಂಕರಿಸಿದರು. 

click me!