Cylinder Price Slashed: ಕನ್ನಡ ರಾಜ್ಯೋತ್ಸವದಂದು ಗುಡ್‌ ನ್ಯೂಸ್‌: ಅಡುಗೆ ಅನಿಲದ ಬೆಲೆ 115.50 ರೂ. ಕಡಿತ

By BK Ashwin  |  First Published Nov 1, 2022, 10:00 AM IST

19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ (Commercial Cylinder Price) ಈಗ ಕೋಲ್ಕತ್ತಾದಲ್ಲಿ 1,846 ರೂ., ಮುಂಬೈನಲ್ಲಿ 1,696 ರೂ. ಮತ್ತು ಚೆನ್ನೈನಲ್ಲಿ 1,893 ರೂ. ಆಗಿದೆ. ಈ ಹಿಂದೆ, ಅಕ್ಟೋಬರ್ 1 ರಂದು, 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಪ್ರತಿ ಯೂನಿಟ್ ವೆಚ್ಚವನ್ನು ₹ 25.50 ಕಡಿಮೆ ಮಾಡಲಾಗಿತ್ತು.


ನವದೆಹಲಿ (ನವೆಂಬರ್ 1, 2022) ಪ್ರತಿ ತಿಂಗಳು ಅಡುಗೆ ಅನಿಲದ ಬೆಲೆಯನ್ನು (Cooking Gas Price)  1ನೇ ತಾರೀಕಿನಂದು ಸಾಮಾನ್ಯವಾಗ ಪರಿಷ್ಕರಿಸಲಾಗುತ್ತದೆ. ಅದೇ ರೀತಿ, ಇಂಡಿಯನ್ ಆಯಿಲ್ (Indian Oil) ತಕ್ಷಣವೇ ಜಾರಿಗೆ ಬರುವಂತೆ 19-ಕೆಜಿ ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (Liquified Petroleum Gas) (LPG) ಸಿಲಿಂಡರ್‌ಗೆ (Cylinder) ರೂ.115.50 ರಷ್ಟು ಕಡಿತಗೊಳಿಸಿದೆ.  ಇತ್ತೀಚಿನ ಬೆಲೆ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ ₹ 1,859.50 ರ ಬದಲಾಗಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹ 1,744 ಆಗಲಿದೆ. ನಿಖರವಾಗಿ ಒಂದು ತಿಂಗಳ ನಂತರ ಬೆಲೆ ಕಡಿತವಾಗಿದ್ದು, ಮೇ 19, 2022 ರಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳಲ್ಲಿ ಸತತ 6ನೇ ಬಾರಿ ಇಳಿಕೆಯಾಗಿದೆ.

19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ (Commercial Cylinder Price) ಈಗ ಕೋಲ್ಕತ್ತಾದಲ್ಲಿ 1,846 ರೂ., ಮುಂಬೈನಲ್ಲಿ 1,696 ರೂ. ಮತ್ತು ಚೆನ್ನೈನಲ್ಲಿ 1,893 ರೂ. ಆಗಿದೆ. ಈ ಹಿಂದೆ, ಅಕ್ಟೋಬರ್ 1 ರಂದು, 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಪ್ರತಿ ಯೂನಿಟ್ ವೆಚ್ಚವನ್ನು ₹ 25.50 ಕಡಿಮೆ ಮಾಡಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ₹ 1,885 ರಿಂದ ₹ 1,859.50 ಕ್ಕೆ ಬೆಲೆ ಇಳಿಕೆಯಾಗಿತ್ತು. ಆದರೂ, ದೇಶೀಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಸ್ಥಿರವಾಗಿದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

Tap to resize

Latest Videos

ಇದನ್ನು ಓದಿ: Fuel Price: ಶೀಘ್ರದಲ್ಲೇ 2 ರೂ. ಇಳಿಕೆಯಾಗಲಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ..!

ದೆಹಲಿಯಲ್ಲಿ ಜೆಟ್ ಇಂಧನ ಬೆಲೆ ಪ್ರತಿ ಕಿಲೋ ಲೀಟರ್‌ಗೆ 1.2 ಲಕ್ಷ ರೂ. ಗೆ ಹೆಚ್ಚಳ
ಮಂಗಳವಾರ ಜೆಟ್ ಇಂಧನ (Jet Fuel) (ಎಟಿಎಫ್) (ATF) ಬೆಲೆಯನ್ನು ಶೇಕಡಾ 4.3 ರಷ್ಟು ಹೆಚ್ಚಿಸಲಾಗಿದೆ. ಜೆಟ್ ಇಂಧನ ಬೆಲೆಯನ್ನು ಪ್ರತಿ ಕಿಲೋ ಲೀಟರ್‌ಗೆ (kl) ಗೆ 1.2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಿಲೋ ಲೀಟರ್‌ಗೆ 1.1 ಲಕ್ಷ ರೂ. ನಿಂದ 1.2 ಲಕ್ಷ ರೂ. ಗೆ ಹೆಚ್ಚಳವಾಗಿದೆ. ಸ್ಥಳೀಯ ತೆರಿಗೆಗಳ ಸಂಭವವನ್ನು ಅವಲಂಬಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಪ್ರತಿ 15 ದಿನಗಳಿಗೊಮ್ಮೆ ಎಟಿಎಫ್ ಬೆಲೆಗಳು ಬದಲಾಗುತ್ತವೆ. ಅಕ್ಟೋಬರ್ 1 ರಂದು, ರಾಷ್ಟ್ರ ರಾಜಧಾನಿಯಲ್ಲಿ ಬೆಲೆ 5,521.17 ರಿಂದ 115,520.27 pr kl ಗೆ ಕಡಿತಗೊಳಿಸಲಾಯಿತು.

ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಕುಸಿದಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ನವೆಂಬರ್ 1, 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಲೀಟರ್‌ಗೆ 40 ಪೈಸೆಗಳಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಸೋಮವಾರ ವರದಿಯಾಗಿತ್ತು. ಪ್ರತಿದಿನ 40 ಪೈಸೆಯಷ್ಟು ಕಡಿತವು ಮುಂದಿನ ಐದು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಕಂತುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟು ರೂ 2 ಇಳಿಕೆಯಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿದ್ದವು. ಇಂದು ದರ ಇಳಿಕೆಯಾಗದಿದ್ದರೂ ಶೀಘ್ರದಲ್ಲೇ ಬೆಲೆ ಇಳಿಕೆಯಾಗಲಿದೆ. 

ಇದನ್ನೂ ಓದಿ: LPG Cylinder ವರ್ಷಕ್ಕೆ 15 ಸಿಲಿಂಡರ್ ಮಾತ್ರ, ಸಬ್ಸಿಡಿ ಸಂಖ್ಯೆ ಏರಿಕೆ, ಹೊಸ ನಿಯಮ ಜಾರಿ!

click me!