ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದಿನಲ್ಲಿ 50 ಪಟ್ಟು ಹೆಚ್ಚಳ; ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ

Published : Jun 24, 2022, 10:14 PM IST
ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದಿನಲ್ಲಿ 50 ಪಟ್ಟು ಹೆಚ್ಚಳ; ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ

ಸಾರಾಂಶ

*ಭಾರತದ ಒಟ್ಟು ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ಪಾಲು ಶೇ.10. *ಈ ಹಿಂದೆ ರಷ್ಯಾದ ಪಾಲು ಒಟ್ಟು ಕಚ್ಚಾ ತೈಲದ ಆಮದಿನ ಶೇ. 0.2ರಷ್ಟಿತ್ತು. *ಭಾರತದ ಟಾಪ್ 10 ಕಚ್ಚಾ ತೈಲ ಪೂರೈಕೆ ರಾಷ್ಟ್ರಗಳಲ್ಲಿ ಸ್ಥಾನ ಪಡೆದ ರಷ್ಯಾ.

ನವದೆಹಲಿ (ಜೂ.24): ಏಪ್ರಿಲ್ ನಿಂದ ಈ ತನಕ ಭಾರತವು (India) ರಷ್ಯಾದಿಂದ (Russia) ಆಮದು (Import) ಮಾಡಿಕೊಂಡಿರುವ ಕಚ್ಚಾ ತೈಲದ (Crude oil) ಪ್ರಮಾಣದಲ್ಲಿ 50 ಪಟ್ಟು ಹೆಚ್ಚಳವಾಗಿದೆ. ಅಲ್ಲದೆ, ಇದು ವಿದೇಶದಿಂದ ಆಮದು ಮಾಡಿಕೊಂಡಿರುವ ಒಟ್ಟು ಕಚ್ಚಾ ತೈಲದ ಶೇ.10ರಷ್ಟಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಉಕ್ರೇನ್ (Ukraine) ಯುದ್ಧಕ್ಕೂ ಮುನ್ನ ಭಾರತ (India) ರಷ್ಯಾದಿಂದ (Russia) ಆಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಒಟ್ಟು ಕಚ್ಚಾ ತೈಲದ ಕೇವಲ ಶೇ. 0.2ರಷ್ಟಿತ್ತು. 

'ಏಪ್ರಿಲ್ ನಲ್ಲಿ ರಷ್ಯಾದಿಂದ ಬಂದಿರುವ ತೈಲವು ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಶೇ.10ರಷ್ಟಿದೆ. ರಷ್ಯಾವೀಗ ಭಾರತದ ಟಾಪ್ 10 ಪೂರೈಕೆದಾರರಲ್ಲಿ ಒಂದಾಗಿದೆ' ಎಂದು ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ರಷ್ಯಾದಿಂದ ಶೇ.40ರಷ್ಟು ಕಚ್ಚಾ ತೈಲವನ್ನು ಖಾಸಗಿ ರಿಫೈನರ್ಸ್ (Private Refiners) ಖರೀದಿಸಿದ್ದಾರೆ. ಕಳೆದ ತಿಂಗಳು ರಷ್ಯಾವು ಸೌದಿ ಅರೇಬಿಯಾವನ್ನು (Saudi Arabia) ಹಿಂದಿಕ್ಕಿ ಭಾರತದ ಎರಡನೇ ಅತೀದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಇರಾಕ್ (Iraq) ಭಾರತದ ನಂ.1 ಕಚ್ಚಾ ತೈಲ ಪೂರೈಕೆ ರಾಷ್ಟ್ರವಾಗಿದೆ. ಉಕ್ರೇನ್ ಜೊತೆಗಿನ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಕಚ್ಚಾ ತೈಲ ಅತ್ಯಂತ ಹೆಚ್ಚಿನ ಡಿಸ್ಕೌಂಟ್ (Discount) ಮೂಲಕ ಸಿಗುತ್ತಿರುವ ಕಾರಣ ರಿಫೈನರಿಗಳು ಅತ್ತ ಮುಖ ಮಾಡಿವೆ. ಮೇನಲ್ಲಿ ಭಾರತದ ರಿಫೈನರಿಗಳು 25 ಮಿಲಿಯನ್ ಬ್ಯಾರೆಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿವೆ.

Digital Lending: ನಿಮಗೆ ಹಣದ ತುರ್ತು ಅಗತ್ಯವಿದೆಯಾ? ಮನೆಯಲ್ಲೇ ಕುಳಿತು ಡಿಜಿಟಲ್ ಸಾಲ ಪಡೆಯೋದು ಹೇಗೆ?

ಭಾರತವು ಜಗತ್ತಿನ ಮೂರನೇ ಅತೀದೊಡ್ಡ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಹಾಗೂ ಬಳಸುತ್ತಿರುವ ರಾಷ್ಟ್ರವಾಗಿದೆ. 'ಭಾರತದ ಒಟ್ಟು ಕಚ್ಚಾ ತೈಲ ಬಳಕೆ ಪ್ರಮಾಣಕ್ಕೆ ಹೋಲಿಸಿದ್ರೆ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣ ಅತ್ಯಂತ ಕಡಿಮೆ' ಎಂದು ಪೆಟ್ರೋಲಿಯಂ ಸಚಿವಾಲಯ ಕಳೆದ ತಿಂಗಳು ತಿಳಿಸಿತ್ತು.

ಮೇನಲ್ಲಿ ಇರಾಕ್ ಭಾರತದ ನಂ.1 ಕಚ್ಚಾ ತೈಲ ಪೂರೈಕೆ ರಾಷ್ಟ್ರವಾಗಿದ್ದರೆ, ಸೌದಿ ಅರೇಬಿಯಾ ಎರಡನೇ ಅತೀದೊಡ್ಡ ಪೂರೈಕೆದಾರ ದೇಶವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾದ ಸಂದರ್ಭದಲ್ಲಿ ಭಾರತ ರಷ್ಯಾದಿಂದ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲ ಖರೀದಿಸಲು ಪ್ರಾರಂಭಿಸಿತ್ತು.
ಅಮೆರಿಕ (US) ಹಾಗೂ ಚೀನಾದ (China) ಬಳಿಕ ಭಾರತ ಜಗತ್ತಿನ ಮೂರನೇ ಅತೀದೊಡ್ಡ ಕಚ್ಚಾ ತೈಲ ಬಳಕೆ ರಾಷ್ಟ್ರವಾಗಿದೆ. ಒಟ್ಟು ಕಚ್ಚಾ ತೈಲ ಬಳಕೆಯಲ್ಲಿ ಶೇ.85ಕ್ಕಿಂತ ಹೆಚ್ಚಿನದ್ದನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

Personal Finance: ವ್ಯಾಪಾರಸ್ಥ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬೇಕು!

ಉಕ್ರೇನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ರಷ್ಯಾದಿಂದ ಕಚ್ಚಾ ತೈಲ ಖರೀದಿಸೋದನ್ನು ಕೆಲವು ರಾಷ್ಟ್ರಗಳು ನಿಲ್ಲಿಸಿದವು.  ಪರಿಣಾಮ ರಷ್ಯಾದ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಯ್ತು. ಭಾರತದ ರಿಫೈನರಿಗಳು ಈ ಪರಿಸ್ಥಿತಿಯ ಲಾಭ ಪಡೆದು ರಷ್ಯಾದಿಂದ ಡಿಸ್ಕೌಂಟ್ ಬೆಲೆಯಲ್ಲಿ ಒಂದು ಬ್ಯಾರೆಲ್ ಗೆ 30 ಯುಎಸ್ ಡಾಲರ್ ನೀಡಿ ಖರೀದಿಸಿದವು.

ರಷ್ಯಾದಿಂದ ಭಾರತ ಖರೀದಿ ಮಾಡುವ ಕಚ್ಚಾ ತೈಲ ಆಮದಿನ (crude oil ) ಪಾಲು ಒಟ್ಟು ಖರೀದಿಗಿಂತ ಎರಡು ಪ್ರತಿಶತಕ್ಕಿಂತ ಹೆಚ್ಚಿಲ್ಲದೆ ಇದ್ದ ನಡುವೆಯೂ, ರಷ್ಯಾದಿಂದ ಹೆಚ್ಚಿನ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ಅಮೆರಿಕ (USA) ಸೇರಿದಂತೆ ಪಾಶ್ಚಿಮಾತ್ಯ ದೇಶಗಳೊಂದಿಗಿನ ಅದರ ಸಂಬಂಧದ ಮೇಲೆ ಪರಿಣಾಮ ಬೀರಿದೆ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದಿಂದ ತೈಲ ಖರೀದಿ ನಿರ್ಧಾರವನ್ನು ಭಾರತವೂ ಸಮರ್ಥಿಸಿಕೊಂಡಿದೆ. ನಿರ್ಬಂಧಗಳ ಹೊರತಾಗಿಯೂ ಯುರೋಪ್ (Europe) ರಷ್ಯಾದಿಂದ ತೈಲ ಮತ್ತು ಅನಿಲವನ್ನುಆಮದು ಮಾಡಿಕೊಳ್ಳುತ್ತಿದೆ ಎಂದು ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉತ್ತರ ನೀಡಿತ್ತು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌