Personal Finance: ವ್ಯಾಪಾರಸ್ಥ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬೇಕು!

By Suvarna News  |  First Published Jun 24, 2022, 5:03 PM IST

ಅನೇಕ ಮಹಿಳೆಯರು ಹಗಲಿರುಳು ದುಡಿದಿರ್ತಾರೆ. ಆದ್ರೆ ಕೈನಲ್ಲಿ ಕಾಸಿರೋದಿಲ್ಲ. ವ್ಯವಹಾರವನ್ನು ಹೊಸ ಹಂತಕ್ಕೆ ತೆಗೆದುಕೊಂಡು ಹೋಗ್ಬೇಕೆಂದ್ರೂ ಪತಿ ಅಥವಾ ಕುಟುಂಬಸ್ಥರನ್ನು ಕೇಳ್ಬೇಕಾಗುತ್ತದೆ. ಆರ್ಥಿಕ ಅವಲಂಭನೆ ಭಾರತದಲ್ಲಿ ಹೆಚ್ಚು. ಮಹಿಳೆಯರು ವ್ಯಾಪಾರ ಶುರು ಮಾಡುವ ಜೊತೆಗೆ ಹಣಕಾಸಿನ ಜ್ಞಾನ ಹೊಂದಿರಬೇಕು.
 


ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆ (Woman) ಯರ ಜವಾಬ್ದಾರಿ (Responsibility) ಹೆಚ್ಚು. ಮಹಿಳೆಯರು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ. ಪ್ರತಿ ಪಾತ್ರವನ್ನು ಸಂಪೂರ್ಣ ಪ್ರಾಮಾಣಿಕವಾಗಿ ಮಾಡಲು ಪ್ರಯತ್ನಿಸುತ್ತಾರೆ. ಪ್ರತಿ ಪಾತ್ರದಲ್ಲಿ ಸಮತೋಲನ ಕಾಯ್ದುಕೊಳ್ಳುವುದನ್ನು ಅವರು ತಿಳಿದಿರುತ್ತಾರೆ. ಆದ್ರೆ ಕೆಲ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ (Financial literacy) ಯ ಕೊರತೆ ಇರುತ್ತದೆ. ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಅವರು ಆರ್ಥಿಕ ವಿಷ್ಯದಲ್ಲಿ ಸಂಗಾತಿ ಅಥವಾ ಪಾಲಕರ ನೆರವು ಕೇಳ್ತಾರೆ. ಇದು ತಪ್ಪು. ಆರ್ಥಿಕ ಸಾಕ್ಷರತೆಯ ಜ್ಞಾನವು ಪ್ರತಿಯೊಬ್ಬರಿಗೂ ಮುಖ್ಯ. ಮಹಿಳಾ ಉದ್ಯಮಿಗಳಿಗೆ ಹೆಚ್ಚು ಮುಖ್ಯ.  ಮಹಿಳಾ ಉದ್ಯಮಿಯಾದವಳು ಹಣಕಾಸಿನ ಬಗ್ಗೆ ಎಲ್ಲ ಮಾಹಿತಿಯನ್ನು ಹೊಂದಿರಬೇಕು. 
ಭಾರತದ ಮಹಿಳೆಯರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗಿದ್ದಾರೆ. ಅವರಲ್ಲಿ ಶಿಕ್ಷಣದ ಕೊರತೆಯಿದೆ. ಹಾಗೆಯೇ ಮಹಿಳೆಯರಿಗೆ ಆರ್ಥಿಕ ಯೋಜನೆಗಳ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಅವರಿಗೆ ಅಗತ್ಯವಿರುವಷ್ಟು ಹಣಕಾಸು ಸಿಗುವುದಿಲ್ಲ. ಇದೆಲ್ಲವೂ ಮಹಿಳೆಯರು ಆರ್ಥಿಕ ಸಾಕ್ಷರತೆಯಲ್ಲಿ ಹಿಂದುಳಿಯಲು ಕಾರಣವಾಗುತ್ತದೆ.

ಮಹಿಳೆ ಆರ್ಥಿಕವಾಗಿ ಸಾಕ್ಷರತೆ ಪಡೆಯಬೇಕೆಂದ್ರೆ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
  
ಜಾಗೃತಿ : ಮಹಿಳೆ ವ್ಯಾಪಾರದಲ್ಲಿ ಯಶಸ್ವಿಯಾಗಿದ್ದರೂ ಅಥವಾ ಸಣ್ಣ ಪ್ರಮಾಣದಲ್ಲಿ ಯಾವುದೇ ವ್ಯವಹಾರವನ್ನು ಮಾಡುತ್ತಿದ್ದರೂ ಸಹ ಹೊಸ ಯೋಜನೆಗಳು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಜ್ಞಾನ ಹೊಂದಿರಬೇಕು. ಅದರ ಬಗ್ಗೆ ಓದಿ ಅಥವಾ ಕೇಳಿ ತಿಳಿದಿರಬೇಕು. ಆಗ ವ್ಯವಹಾರವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸುಲಭವಾಗುತ್ತದೆ. ಹಾಗೆಯೇ ಹಣಕಾಸಿಗಾಗಿ ಬೇರೆಯವರನ್ನು ಅವಲಂಭಿಸುವುದು ತಪ್ಪುತ್ತದೆ. ಹಣಕಾಸಿನ ನಿರ್ವಹಣೆ ಸುಧಾರಿಸಲು ಸಾಮಾಜಿಕ ಜಾಲತಾಣದ ಉತ್ತಮ ಗುಂಪುಗಳಿಗೆ ಸೇರಬಹುದು. ಅಗತ್ಯವಿದ್ದರೆ ವೃತ್ತಿಪರರಿಂದ ಸಹಾಯ ಪಡೆಯಬೇಕು. ಯಾವುದೇ ಕಾರಣಕ್ಕೂ ಇದ್ರ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.

Tap to resize

Latest Videos

Business Ideas: ಕಡಿಮೆ ಹೂಡಿಕೆ ಮಾಡಿ ಹೆಚ್ಚು ಶ್ರಮ ವಹಿಸಿದ್ರೆ ಲಾಭ ನಿಶ್ಚಿತ

ಬದಲಾವಣೆಗೆ ಮೊದಲೇ ತಯಾರಿ : ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ತಮ್ಮ ಹಣಕಾಸಿನ ವ್ಯವಹಾರದ ಮೇಲೆ ಹಿಡಿತ ಹೊಂದಿದ್ದರೂ ಸಹ, ಕೆಲವರು ಇನ್ನೂ ಪುರುಷ ಮುಂದೆ ಆತ್ಮ ವಿಶ್ವಾಸ ಕಳೆದುಕೊಳ್ತಿದ್ದಾರೆ. ಇದಕ್ಕೆ ಮುಂಚಿತವಾಗಿ ಯೋಜನೆ ಮಾಡಬೇಕಾಗುತ್ತದೆ. ಮದುವೆಯ ನಂತರ ವರ್ಗಾವಣೆ, ಕುಟುಂಬದ ಆರಂಭ, ವೃತ್ತಿಜೀವನದಲ್ಲಿ ವಿರಾಮ, ವಿಚ್ಛೇದನ ಸೇರಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ್ಲೂ ಮೊದಲು ಸರಿಯಾಗಿ ಆಲೋಚನೆ ಮಾಡುವ ಅಗತ್ಯವಿದೆ. 

ಹೂಡಿಕೆ (Investment) ಪ್ರಾರಂಭಿಸಿ : ಮಹಿಳೆಯರು ಉಳಿತಾಯ ಮಾಡ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಉಳಿತಾಯ ದೀರ್ಘಾವಧಿಗೆ ಉತ್ತಮ ಮಾರ್ಗವಲ್ಲ. ಹಣದುಬ್ಬರ ನಿಮ್ಮ ಉಳಿತಾಐವನ್ನು ಬುಡಮೇಲು ಮಾಡ್ಬಹುದು. ಹಾಗಾಗಿ ಉಳಿತಾಯದ ಬದಲು ಹೂಡಿಕೆ ಮಾಡಿ. ಇದು ನಿಮಗೆ ಸ್ಥಿರತೆಯನ್ನು ಒದಗಿಸುತ್ತದೆ.   

ಬಜೆಟ್ (Budget) ಹೊಂದಿಸಿ : ಮೊದಲು ಬಜೆಟ್ ತಯಾರಿಸಿ. ಬಿಲ್‌ಗಳು, ದಿನಸಿ ಸಾಮಾನುಗಳು, ಕಚೇರಿ ಬಾಡಿಗೆ ಮತ್ತು ಇತರ ವೆಚ್ಚಗಳಿಗಾಗಿ ನಿಮಗೆ ಎಷ್ಟು ಬೇಕು ಎಂದು ಲೆಕ್ಕಾಚಾರ ಮಾಡುವುದು ಉತ್ತಮ ಮಾರ್ಗವಾಗಿದೆ. ಮಾಸಿಕ ಬಜೆಟ್ ತಯಾರಿಸಿದ ನಂತ್ರ ಅವಶ್ಯಕತೆಗಳಿಗೆ ಅನುಗುಣವಾಗಿ ತುರ್ತು ನಿಧಿ, ಪ್ರಯಾಣ ನಿಧಿ, ಉಳಿತಾಯ ಖಾತೆ ಇತ್ಯಾದಿಗಳಿಗಾಗಿ ಸ್ವಲ್ಪ ಹಣವನ್ನು ಇರಿಸಿ.

37 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ಅಮ್ಮ

ನಿವೃತ್ತಿಗೆ (Retirment) ಸಿದ್ಧರಾಗಿ : ಡಬ್ಲ್ಯುಎಚ್ ಒ (WHO) ವರದಿಗಳ ಪ್ರಕಾರ ಮಹಿಳೆಯರು ಪುರುಷರಿಗಿಂತ ಸರಾಸರಿ 8 ವರ್ಷ ಹೆಚ್ಚು ಕಾಲ ಬದುಕುತ್ತಾರೆ. ಆದ್ದರಿಂದ ನಿವೃತ್ತಿ ದಿನವನ್ನು ಆನಂದಿಸಲು ಅವರು ಮೊದಲೇ ಪ್ಲಾನ್ ಮಾಡ್ಬೇಕು. ಹಾಗೆ ಉತ್ತಮ ಯೋಜನೆ ಆಯ್ದುಕೊಳ್ಳಿ. ಜೀವನದಲ್ಲಿ ಪ್ಲಾನ್ ಬಿ ಇರಲಿ. ಈಗಿನ ಕಾಲದಲ್ಲಿ ಮಕ್ಕಳ ಕೈಗೆ ಸಂಪೂರ್ಣ ಹಣ ನೀಡುವುದು ಸೂಕ್ತವಲ್ಲ. ಮನೆ ಅಥವಾ ಯಾವುದೇ ಆಸ್ತಿಯನ್ನು ತಕ್ಷಣ ಮಕ್ಕಳಿಗೆ ನೀಡಬೇಡಿ. ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿವೃತ್ತಿ ದಿನಗಳನ್ನು ಭದ್ರಗೊಳಿಸಿಕೊಳ್ಳಿ. 
 

click me!