
ನವದೆಹಲಿ (ಆ.01) ವಿದ್ಯಾಭ್ಯಾಸ ಮುಗಿಸಿ ಉದ್ಯೋಗ, ಉದ್ಯಮ, ವ್ಯಾಪಾರ ಸೇರಿದಂತೆ ಯಾವುದೇ ವೃತ್ತಿ ಆರಂಭಿಸಿದರೂ ಸರಿಯಾಗಿ ಹೂಡಿಕೆ ಮಾಡಿದರೆ ಭವಿಷ್ಯದ ಜೀವನ ಉತ್ತಮವಾಗಿರುತ್ತದೆ. ನಿವೃತ್ತಿ ಜೀವನದಲ್ಲಿ ಯಾವುದೇ ಆತಂಕವಿಲ್ಲದೆ ಜೀವನ ಸಾಗಿಸಬಹುದು. ಸದ್ಯ ಹೆಚ್‌ಎಸ್‌ಬಿಸಿ ಅಧ್ಯಯನ ವರದಿಯೊಂದನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ ಭರಾತ, ಅಮೆರಿಕ, ಸಿಂಗಾಪುರ ಸೇರಿದಂತೆ ಇತರ ದೇಶಗಳಲ್ಲಿ ವಿಶ್ರಾಂತಿ ಜೀವನ ನಡೆಸಲು ಎಷ್ಟು ಹಣ ಉಳಿತಾಯ ಮಾಡಿರಬೇಕು ಅನ್ನೋದು ಬಹಿರಂಗಪಡಿಸಿದೆ.
ಆ್ಯಫ್ಲುಯೆಂಟ್ ಇನ್‌ವೆಸ್ಟರ್ ಸ್ನಾಪ್‌ಚಾಟ್ 2025ರ ಈ ಅಧ್ಯಯನ ವರದಿ, ವಿಶ್ರಾಂತಿ ಜೀವನದ ಮೊತ್ತವನ್ನು ಭಾರತದ ಆರ್ಥಿಕತೆ, ಅಗತ್ಯವಸ್ತಗಳ ಬೆಲೆ, ಆರೋಗ್ಯ, ಹಣದುಬ್ಬರ ಸೇರಿ ಎಲ್ಲಾ ಪರಿಗಣಿಸಿ ನಿರ್ಧರಿಸಲಾಗಿದೆ. ಪ್ರಮುಖ ಭಾರತ ಇದೀಗ ಅತೀ ಅಗ್ಗದ ದೇಶವಾಗಿ ಉಳಿದಿಲ್ಲ. ಭಾರತದಲ್ಲಿ ಪ್ರತಿಯೊಂದು ದುಬಾರಿಯಾಗಿದೆ. ಹೀಗಾಗಿ ಭಾರತದಲ್ಲಿ ನಿವೃತ್ತಿ ಜೀವನದ ಮೊತ್ತ ಕೂಡ ಹೆಚ್ಚಾಗಿದೆ ಎಂದು ಹೆಚ್‌ಎಸ್‌ಬಿಸಿ ವರದಿ ಹೇಳಿದೆ. ಈ ವರದಿ ಪ್ರಕಾರ ಇದೀಗ ಭಾರತೀಯನೊಬ್ಬ ನಿವೃತ್ತಿಯಾಗುವಾಗ ಆತನ ಹೂಡಿಕೆ, ಉಳಿತಾಯ ಎಲ್ಲಾ ಸೇರಿ ಒಟ್ಟು 3.2 ಕೋಟಿ ರೂಪಾಯಿ ಇರಬೇಕು ಎಂದು ವರದಿ ಹೇಳಿದೆ.
ಜೀವನ ನಿರ್ವಹಣೆ ವೆಚ್ಚ ಭಾರತದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ನಿವೃತ್ತಿ ಜೀವನದ ಮೊತ್ತವೂ ಏರಿಕೆಯಾಗಿದೆ ಎಂದು ವರದಿ ಹೇಳುತ್ತಿದೆ. ಭಾರತೀಯರು ಹೂಡಿಕೆ ವಿಚಾರದಲ್ಲೂ ಷೇರು, ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಕಳೆದ ವರ್ಷಗಳಲ್ಲಿ ಇತರ ಹೂಡಿಕೆ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಕಳೆದ 12 ತಿಂಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಿದೆ ಎಂದು ಹೆಚ್‌ಎಸ್‌ಬಿಸಿ ವರದಿ ಹೇಳಿದೆ.
ಹೆಚ್‌ಎಸ್‌ಬಿಸಿ ವರದಿ ಪ್ರಕಾರ ವೃತ್ತಿ ಆರಂಭಿಸಿದ ಬೆನ್ನಲ್ಲೇ ಹೂಡಿಕೆ ಮಾಡುವ ಜನ ತಮ್ಮ ಕರಿಯರ್ ಹಾಗೂ ವಿಶ್ರಾಂತಿ ಜೀವನದಲ್ಲಿ ಆರಾಮವಾಗಿರುತ್ತಾರೆ. ಇವರ ಮೇಲೆ ಆರ್ಥಿಕತೆ, ಅವಲಂಬನೆಯ ಒತ್ತಡ ಕಡಿಮೆ ಎಂದು ವರದಿ ಹೇಳುತ್ತಿದೆ. ಕನಿಷ್ಠ 30 ವರ್ಷದೊಳಗೆ ಹೂಡಿಕೆ ಆರಂಭಿಸಬೇಕು. ಹೀಗಾದಾಗ, ವೃತ್ತಿಪರ ಕರಿಯರ್ ಹಾಗೂ ನಿವೃತ್ತಿ ಬಳಿಕವೂ ಆರ್ಥಿಕವಾಗಿ ಸದೃಢವಾಗಿರುತ್ತದೆ.
ಅಮೆರಿಕದಲ್ಲಿ ನಿವೃತ್ತಿ ಜೀವನ ಮುನ್ನಡೆಸಲು ಸರಾಸರಿ 13.71 ಕೋಟಿ ರೂಪಾಯಿ ಕೈಯಲ್ಲಿರಬೇಕು ಎಂದು ಹೆಚ್‌ಎಸ್‌ಬಿಸಿ ವರದಿ ಹೇಳುತ್ತಿದೆ. ಇನ್ನು ಸಿಂಗಾಪುರದಲ್ಲಿ 12.14 ಕೋಟಿ ರೂಪಾಯಿ, ಚೀನಾದಲ್ಲಿ 9.52 ಕೋಟಿ ರೂಪಾಯಿ ಇರಬೇಕು. ಹಾಂಕಾಂಗ್‌ನಲ್ಲಿ ಸರಿಸುಮಾರು 12 ಕೋಟಿ ರೂಪಾಯಿ ಇರಬೇಕು. ಅಮೆರಿಕ ಹಾಗೂ ಹಾಂಕಾಂಗ್ ನಿವೃತ್ತಿ ಜೀವನಕ್ಕೂ ದುಬಾರಿ ಎಂದು ಪರಗಿಣಿಸಲ್ಪಟ್ಟಿದೆ.
ಹೂಡಿಕೆ ಮಾಡುವ ಮೊದಲು ತಜ್ಞರ ಸಂಪರ್ಕಿಸಿ ಚರ್ಚಿಸಿ. ಪೋಸ್ಟ್ ಆಫೀಸ್, ಖಾಸಗಿ ಬ್ಯಾಂಕ್, ಫಿಕ್ಸೆಡ್ ಡೆಪಾಸಿಟ್, ಷೇರು, ಮ್ಯೂಚ್ಯುವಲ್ ಫಂಡ್, ಎಸ್ಐಪಿ ಸೇರಿದಂತೆ ಹಲವು ಹೂಡಿಕೆ ಕ್ಷೇತ್ರಗಳಿವೆ. ಷೇರು, ಮ್ಯೂಚ್ಯುವಲ್ ಮಾರುಕಟ್ಟೆ ಏರಿಳಿತಗಳಿಗೆ ಒಳಪಟ್ಟಿದೆ. ಹೀಗಾಗಿ ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡುವಾಗ ಮೊದಲು ಹೂಡಿಕೆ ತಜ್ಞರು ಅಥವಾ ಹೂಡಿಕೆ ಮಾಡುವ ಕ್ಷೇತ್ರದ ಷರತ್ತು, ನಿಮಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡದುಕೊಳ್ಳಿ. ಹೂಡಿಕೆ ಹೆಸರಲ್ಲಿ ಮೋಸಹೋಗಬೇಡಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.