
ಸಿಲಿಕಾನ್ ಸಿಟಿ ಬೆಂಗ್ಳೂರಿನ ಮುಕುಟಕ್ಕೆ ಮತ್ತೊಂದು ಚಿನ್ನದ ಗರಿ ಬಂದಿದೆ. ಪರಿಶುದ್ಧ ಚಿನ್ನ, ಮನಮೋಹಕ ವಿನ್ಯಾಸ, ಸರಿಸಾಟಿಯಿಲ್ಲದ ಗುಣಮಟ್ಟ ಹಾಗೂ ಅಸಮಾನ್ಯ ಸೇವೆಗೆ ಮತ್ತೊಂದು ಹೆಸರಾಗಿರುವ 'ಆಭರಣ' ಜ್ಯುವೆಲ್ಲರ್ಸ್‌ನ ನೂತನ ಶಾಖೆ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದೆ. ಅತ್ಯಾಧುನಿಕ ಹಾಗೂ ಟ್ರೆಂಡಿಂಗ್ ವಿನ್ಯಾಸ, ಶುದ್ಧತೆಯ ಖಾತ್ರಿಯೊಂದಿಗೆ ತಯಾರಾದ ಚಿನ್ನ, ಬೆಳ್ಳಿ, ಹವಳ ಹಾಗೂ ವಜ್ರಾಭರಣಗಳೊಂದಿಗೆ, ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ಒದಗಿಸಲು ' ಆಭರಣ' ಮಳಿಗೆ ಜಯನಗರದಲ್ಲಿ ಸಜ್ಜಾಗಿದೆ.
ನಿಮ್ಮ 'ಚಿನ್ನದಂಥ' ಕನಸನ್ನು ನನಸಾಗಿಸುವ ಸ್ಥಳ ನಮ್ಮ ಹೊಸ 'ಆಭರಣ'! ಶ್ರೇಷ್ಠ ಗುಣಮಟ್ಟದ ಬಂಗಾರ, ಬೆಳ್ಳಿ, ವಜ್ರ ಮತ್ತು ಹವಳ ಆಭರಣಗಳ ಕಲೆಕ್ಷನ್ ನಿಮಗೆ ವಿಶಿಷ್ಟ ಅನುಭವವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ! ಶೃಂಗಾರದ ನವ ಅಧ್ಯಾಯಕ್ಕೆ ನಿಮಗಿದೋ ಸ್ವಾಗತ!
'ಆಭರಣ'ಕ್ಕೆ ಸುಮಾರು ಒಂದು ಶತಮಾನದ ಇತಿಹಾಸವಿದೆ. ಮಲೆನಾಡು ಭಾಗದಲ್ಲಿ ಜನರಲ್ ಮರ್ಚೆಂಟಾಗಿ ಭೇಟಿಕೊಡುತ್ತಿದ್ದ ಕರಾವಳಿ ಭಾಗದ ಶ್ರೀ ಬುರ್ದೆ ಸದಾನಂದ ಕಾಮತ್‌ರು, ಅಲ್ಲಿ 'ಮೇಡ್ ಇನ್ ಉಡುಪಿ'ಯ ಸುಂದರ ಆಭರಣಗಳಿಗಿದ್ದ ಬೇಡಿಕೆ ಮನಗೊಂಡರು. ತಡ ಮಾಡದೇ ಸದಾನಂದ ಕಾಮತ್‌ರು ಜ್ಯೂಲ್ರಿ ವ್ಯಾಪಾರಕ್ಕೆ ಧುಮುಕಿಯೇಬಿಟ್ಟರು. ಉಡುಪಿಯ ಸ್ಥಳೀಯ ಅಕ್ಕಸಾಲಿಗರಿಂದ ಆಭರಣಗಳನ್ನು ಖರೀದಿಸಿ ಬೇರೆ ಪ್ರದೇಶಗಳಲ್ಲಿ ಮಾರಾಟ ಮಾಡಲು ಆರಂಭಿಸಿದರು. 1935ರಲ್ಲಿ, ಕಾಮತ್ರು ಉಡುಪಿಯಲ್ಲಿ ಮೊದಲ ಆಭರಣ ಅಂಗಡಿಯಾದ 'ನಿಯೋ ಜುವೆಲ್ಲರಿ ಮಾರ್ಟ್' ಅನ್ನು ಆರಂಭಿಸಿದ್ದರು.
ನೀತಿ-ನಿಯತ್ತು-ವಿಶ್ವಾಸಕ್ಕೆ ಹೆಸರುವಾಸಿಯಾಗಿದ್ದ ಕಾಮತರು ಶುದ್ಧವಾದ, ಗುಣಮಟ್ಟದ ಬಂಗಾರವನ್ನಷ್ಟೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆದರೆ 1962ರ ಗೋಲ್ಡ್ ಕಂಟ್ರೋಲ್ ಕಾಯ್ದೆವು, ಜುವೆಲ್ಲರ್‌ಗಳು 22 ಕ್ಯಾರಟ್ ಬಂಗಾರವನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಿ, ಕೇವಲ 14 ಕ್ಯಾರಟ್ ಬಂಗಾರವನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಿತು. ಇದರಿಂದ ಬಹಳ ಹತಾಶರಾದ ಕಾಮತ್ ಅಂಗಡಿಯನ್ನು ಮುಚ್ಚಬೇಕಾಯಿತು.
ಕೆಲವು ವರ್ಷಗಳ ನಂತರ ಸರ್ಕಾರ ತನ್ನ ನಿರ್ಬಂಧಗಳನ್ನು ಹಿಂಪಡೆಯಿತು. 1979ರಲ್ಲಿ ಸಂಸ್ಥಾಪಕರ ಪುತ್ರರಾದ ಶ್ರೀ ಮಧುಕರ್ ಎಸ್. ಕಾಮತ್ ಉಡುಪಿಯಲ್ಲಿ ಅಭರಣ ಜುವೆಲ್ಲರ್ಸ್ ಎಂಬ ಹೊಸ ಬಂಗಾರದ ಮಳಿಗೆಯನ್ನು ಆರಂಭಿಸಿದರು. ಬಳಿಕದ ವರ್ಷಗಳಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ 16 ಸ್ಥಳಗಳಲ್ಲಿ 19 ಶಾಖೆಗಳನ್ನು ಆರಂಭಿಸಿದರು. ಉಡುಪಿಯಲ್ಲಿ ಪ್ರತ್ಯೇಕವಾಗಿ ಬೆಳ್ಳಿಯ ಅಂಗಡಿ ಮತ್ತು ಡೈಮಂಡ್ ಬೂಟಿಕ್ ಅಂಗಡಿಯು ಸಹ ಇದೆ.
ಅಭರಣವು ISO 9001:2008 ಪ್ರಮಾಣಿತ ಜುವೆಲ್ಲರ್ ಆಗಿದ್ದು, 'ಹಾಲ್‌ಮಾರ್ಕ್' ಹೊಂದಿದ ಆಭರಣಗಳನ್ನು ಮಾರಾಟ ಮಾಡುತ್ತದೆ. ಭಾರತದಲ್ಲಿ ಕರೇಟೋಮೀಟರ್ ಪರಿಚಯಿಸಿದ ಮೊದಲ ಜುವೆಲ್ಲರ್ ಕೂಡಾ ಅಭರಣವೇ. ಗ್ರಾಹಕರು ಆನ್‌ಲೈನ್ ಮೂಲಕ ಆಭರಣವನ್ನು ಆರಿಸಿ ಖರೀದಿ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆಯೂ ಇದೆ. ಅತ್ಯುತ್ತಮ ಗುಣಮಟ್ಟ ಮತ್ತು ಗ್ರಾಹಕರ ಸಂತೋಷ ಹಾಗೂ ಸಂತೃಪ್ತಿಗೆ ಆದ್ಯತೆ ನೀಡುವ 'ಆಭರಣ' ಮಳಿಗೆಯು ಜಗತ್ತಿನಾದ್ಯಾಂತ ಗ್ರಾಹಕರ ವಿಶ್ವಾಸವನ್ನು ಗೆದ್ದಿದೆ.
ಪ್ರಸಿದ್ಧ ದೇವಾಲಯ ಟ್ರಸ್ಟ್‌ಗಳಿಗೆ ಆಭರಣ ಡಿಸೈನ್ ಮಾಡಿಕೊಡಲಾಗಿದೆ. ಈ ಆಭರಣಗಳನ್ನು ಅನೇಕ ತಾರೆಯರು ಧರಿಸಿದ್ದಾರೆ. ಹಲವಾರು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಆಭರಣ ಜ್ಯೂವೆಲರ್ಸ್ ಕಾಣಿಸಿಕೊಂಡಿದೆ.
ರಾಷ್ಟ್ರೀಯ ಆಭರಣ ವಿನ್ಯಾಸ ಪ್ರಶಸ್ತಿಗಳಿಂದ ಹಿಡಿದು ಕರಾವಳಿ ಕರ್ನಾಟಕದಲ್ಲಿ ಮನೆಮಾತಾಗಿರುವವರೆಗೆ, ಅಭರಣ ಜ್ಯೂವೆಲರ್ಸ್ (ಉಡುಪಿ) ಒಂದು ಪರಂಪರೆಯ ಬ್ರಾಂಡ್ ಆಗಿದೆ. ಸಾಂಸ್ಕೃತಿಕ, ದೇಸಿ ಶೈಲಿಯಿಂದ ಹಿಡಿದು ಮಾಡರ್ನ್‌ವರೆಗೂ ಇಲ್ಲಿ ಆಭರಣಗಳು ಲಭ್ಯವಿದೆ. ಇಲ್ಲಿನ ಪ್ರತಿ ಆಭರಣದಲ್ಲೂ ನಮ್ಮ ಸಂಸ್ಕೃತಿಯ ಸೊಗಡು ಎದ್ದು ಕಾಣುವುದು.
ಅದಕ್ಕಾಗಿಯೇ, 'ಚಿನ್ನ ಅಂದ್ರೆ ಅದು ಆಭರಣದ್ದು...' ಇದು ಉಡುಪಿ ಭಾಗದಲ್ಲಿ ಮನೆಮಾತಾಗಿದೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.