ಇತ್ತೀಚಿನ ಹಲವು ಅಂತಾರಾಷ್ಟ್ರೀಯ ವರದಿಯಲ್ಲಿ ಭಾರತದ ಕಡು ಬಡನತ ಸಂಖ್ಯೆ ಇಳಿಕೆಯಾಗಿರುವುದು ಬಹಿರಂಗವಾಗಿದೆ. ಇದೀಗ ಮತ್ತೊಂದು ವರದಿಯಲ್ಲಿ ಭಾರತೀಯರು ಶ್ರೀಮಂತರಾಗುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ವಾರ್ಷಿಕ ಕೋಟಿ ಕೋಟಿ ಆದಾಯಗಳಿಸುತ್ತಿರುವರ ಸಂಖ್ಯೆ ಎಷ್ಟಾಗಿದೆ ಗೊತ್ತಾ?
ನವದೆಹಲಿ(ಸೆ.18) ದಾಳಿಕೋರರ ಆಗಮನದ ಬಳಿಕ ಭಾರತದಲ್ಲಿ ಬಡತನ ಸಮಸ್ಯೆಗಳು ತೀವ್ರಗೊಳ್ಳತೊಡಗಿತು ಅನ್ನೋದು ದಾಖಲೆಗಳು ಹೇಳುತ್ತದೆ. ಬ್ರಿಟಿಷರ ಆಗಮನ ಬಳಿಕ ಭಾರತ ಮತ್ತಷ್ಟು ಬಡವಾಯಿತು. ಸ್ವಾತಂತ್ರ್ಯ ಬಳಿಕ ಪ್ರತಿ ಸರ್ಕಾರಗಳು ಬಡತನ ನಿರ್ಮೂಲನೆಗೆ ಹಲವು ಯೋಜನೆ ಜಾರಿಗೊಳಿಸಿದೆ. ಇತ್ತೀಚಿನ ಅಂಕಿ ಅಂಶಗಳು ಭಾರತ ಕಡು ಬಡತನ ರೇಖೆಯಲ್ಲಿ ಇಳಿಕೆಯನ್ನು ದೃಢೀಕರಿಸಿತ್ತು. ಇದೀಗ ಶ್ರೀಮಂತರ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಕೆಲ ಅಚ್ಚರಿ ಅಂಶಗಳು ಹೊರಬಂದಿದೆ. ಕಳೆದ 5 ವರ್ಷದಲ್ಲಿ ಭಾರತೀಯರ ಶ್ರೀಮಂತಿಕೆ ಹೆಚ್ಚಾಗಿದೆ ಎನ್ನುತ್ತಿದೆ ವರದಿ. ವಿಶೇಷ ಅಂದರೆ ವಾರ್ಷಿಕ 10 ಕೋಟಿ ರೂಪಾಯಿಗಿಂತ ಹೆಚ್ಚು ಆದಾಯಗಳಿಸುತ್ತಿರುವವರ ಸಂಖ್ಯೆ ಶೇಕಡಾ 63 ರಷ್ಟು ಹೆಚ್ಚಾಗಿದೆ.
ಸೆಂಟ್ರಮ್ ಇನ್ಸಿಸ್ಟಿಟ್ಯೂಶನಲ್ ರೀಸರ್ಚ್ ನಡೆಸಿದ ಅಧ್ಯಯನ ವರದಿ ಪ್ರಕಾರ, ಕಳೆದ 5 ವರ್ಷದಲ್ಲಿ ವಾರ್ಷಿಕ ಕೋಟಿ ರೂಪಾಯಿ ಆದಾಯಗಳಿಸುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನತ್ತಿದೆ. ವಾರ್ಷಿಕ 10 ಕೋಟಿ ರೂಪಾಯಿಗೂ ಅದಿಕ ಆದಾಯ ಗಳಿಸುತ್ತಿರುವ ಸಂಖ್ಯೆ ಶೇಕಡಾ 63 ರಷ್ಟು ಅಂದರೆ 31,800 ಮಂದಿ. ಇದು ಶ್ರೀಮಂತ ವ್ಯಕ್ತಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ತೋರಿಸುತ್ತಿದೆ. ಇನ್ನು ವಾರ್ಷಿಕ 50 ಲಕ್ಷ ರೂಪಾಯಿಗೂ ಅದಿಕ ಆದಾಗಳಿಸುತ್ತಿರುವ ಸಂಖ್ಯೆ ಕಳೆದ 5 ವರ್ಷದಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ.ಅಂದರೆ ಭಾರತದ 10 ಲಕ್ಷಕ್ಕೂ ಮಂದಿ ವಾರ್ಷಿಕ 50 ಲಕ್ಷ ರೂಪಾಯಿಗೂ ಆದಾಯ ಗಳಿಸುತ್ತಿದ್ದಾರೆ.
undefined
ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ನಂ.1, ಇಲ್ಲಿದೆ ಅತೀ ಹೆಚ್ಚು ಗಳಿಕೆ ಹೊಂದಿರುವ ಟಾಪ್ 5 ರೈಲು!
ಇನ್ನು ವಾರ್ಷಿಕ 5 ಕೋಟಿ ರೂಪಾಯಿಗೂ ಅಧಿಕ ಆದಾಯಗಳಿಸುತ್ತಿರುವ ಸಂಖ್ಯೆ ಶೇಕಡಾ 49 ರಷ್ಟು ಹೆಚ್ಚಾಗಿದೆ. ಈ ಸಂಖ್ಯೆ 58,200 ಮಂದಿ ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆರ್ಥಿಕ ವರ್ಷ 19 ಹಾಗೂ ಆರ್ಥಿಕ ವರ್ಷ 24ರಲ್ಲಿ ಶ್ರೀಮಂತರ ಸಂಖ್ಯೆ ಹೋಲಿಕೆ ಮಾಡಿದರೆ ಗಣನೀಯ ಏರಿಕೆಯನ್ನು ಕಾಣುತ್ತಿದೆ ಎಂದು ವರದಿ ಹೇಳುತ್ತಿದೆ.
ಇನ್ನು ಒಟ್ಟು ಆದಾಯಗಳಿಕೆ 50 ಲಕ್ಷ ರೂಪಾಯಿ ಮೀರಿದವರ ಸಂಖ್ಯೆ 49 ಲಕ್ಷ ಮಂದಿ. ಅಂದರೆ ಕಳೆದ 5 ವರ್ಷದಲ್ಲಿ ಈ ಸಂಖ್ಯೆ ಶೇಕಡಾ 64ರಷ್ಟು ಹೆಚ್ಚಳವಾಗಿದೆ. ಒಟ್ಟು 10 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದವರ ಸಂಖ್ಯೆ 38 ಲಕ್ಷ ಮಂದಿಗೆ ಏರಿಕೆಯಾಗಿದೆ. ಅಂದರೆ ಶೇಕಡಾ 121.
ಪೋಸ್ಟ್ ಆಫೀಸ್ ಮೂಲಕ ತಿಂಗಳಿಗೆ 500 ರೂಪಾಯಿ ಸೇವಿಂಗ್ಸ್ ಮಾಡಿ 35,000 ರೂ ಗಳಿಸಿ!