ಡಾಲರ್ ಎದುರು ರೂಪಾಯಿ ಏರಿಕೆ: ಟ್ರಂಪ್ ಕನಸಲ್ಲೂ ಮೋದಿ ಕನವರಿಕೆ!

By Web DeskFirst Published Nov 9, 2018, 3:26 PM IST
Highlights

ಡಾಲರ್ ಎದುರು ಚೇತರಿಕೆ ಕಂಡ ರೂಪಾಯಿ ಮೌಲ್ಯ! ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 35 ಪೈಸೆಯಷ್ಟು ಏರಿಕೆ! ಅಮೆರಿಕ ಮಧ್ಯಂತರ ಚುನಾವಣೆ ಹಿನ್ನಲೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಏರಿಕೆ! ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲದರ ಇಳಿಕೆ

ನವದೆಹಲಿ(ನ.9): ಅತ್ತ ಪೆಟ್ರೋಲ್ ದರ ಇಳಿಕೆಯಾದ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಏರಿಕೆಯಾಗಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಡಾಲರ್ ಎದುರು ಇಂದು ರೂಪಾಯಿ ಮೌಲ್ಯದಲ್ಲಿ 35 ಪೈಸೆಯಷ್ಟು ಏರಿಕೆ ಕಂಡುಬಂದಿದೆ.

ಪ್ರಮುಖವಾಗಿ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲದರ ಇಳಿಕೆ ಮತ್ತು ಅಮೆರಿಕ ಮಧ್ಯಂತರ ಚುನಾವಣೆ ಹಿನ್ನಲೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ಮಾರುಕಟ್ಟೆಯಲ್ಲಿ ಅಮೆರಿಕ ಬ್ಯಾಕ್‌ಗಳ ವಹಿವಾಟುಗಳು ನಿರೀಕ್ಷಿತ ಮಟ್ಟ ತಲಪುದೇ ಇರುವುದೂ ಕೂಡ ರೂಪಾಯಿ ಮೌಲ್ಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

click me!