
ಬೆಂಗಳೂರು(ನ.9): ಇನ್ಫೋಸಿಸ್ ತನ್ನ ಉನ್ನತ ಮಟ್ಟದ ಅಧಿಕಾರಿಗಳ ವೇತನದಲ್ಲಿ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದು, ಮುಂಬರುವ ಜನವರಿಯಲ್ಲಿ ಸಿನಿಯರ್ ಎಕ್ಸಿಕ್ಯೂಟಿವ್‌ಗಳ ವೇತನದಲ್ಲಿ ಶೇ.3 ರಿಂದ ಶೇ.5 ರಷ್ಟು ಹೆಚ್ಚಳ ಮಾಡಲಿದೆ.
ಕಳೆದ ಏಪ್ರೀಲ್ ನಲ್ಲೇ ಇನ್ಫೋಸಿಸ್ ಎಲ್ಲಾ ಉದ್ಯೋಗಿಗಳ ವೇತನದಲ್ಲಿ ಗಮನಾರ್ಹ ಹೆಚ್ಚಳ ಮಾಡಿತ್ತು. ಅದರಂತೆ ಉನ್ನತ ದರ್ಜೆ ಅಧಿಕಾರಿಗಳ ವೇತನ ಕಳೆದ ಜುಲೈನಲ್ಲೇ ಏರಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿತ್ತು.
ಇದೀಗ ಸಿನಿಯರ್ ಎಕ್ಸಿಕ್ಯೂಟಿವ್‌ಗಳ ವೇತನ ಹೆಚ್ಚಿಸುವ ನಿರ್ಧಾರಕ್ಕೆ ಬಂದಿರುವ ಇನ್ಫೋಸಿಸ್ ಶೇ.3 ರಿಂದ ಶೇ.5ರಷ್ಟು ವೇತನ ಹೆಚ್ಚಳವಾಗಲಿದೆ ಎಂದು ಘೋಷಿಸಿದೆ.
ಈಗಾಗಲೇ ಈ ಕುರಿತು ಬಜೆಟ್ ಸಿದ್ಧಪಡಿಸಲಾಗಿದ್ದು, ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್, ಸಿನಿಯರ್ ವೈಸ್ ಪ್ರೆಸಿಡೆಂಟ್ ಹಾಗೂ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಮಟ್ಟದ ಅಧಿಕಾರಿಗಳ ವೇತನದಲ್ಲಿ ಹೆಚ್ಚಳವಾಗಲಿದೆ ಎಂದು ಇನ್ಫೋಸಿಸ್ ತಿಳಿಸಿದೆ.
ಒಟ್ಟು 500 ಜನ ಉನ್ನತ ಅಧಿಕಾರಿಗಳು ಹೆಚ್ಚಿನ ವೇತನ ಪಡೆಯಲಿದ್ದು, ಕಳೆದ ತ್ರೈಮಾಸಿಕ ಲಾಭದ ಸಂತಸದಲ್ಲಿರುವ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ ಎಂದೇ ಹೇಳಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.