
ನವದೆಹಲಿ(ಡಿ.15): ಏನಾದರಾಗಲಿ, ರೈಲು ಸೇವೆಯೊಂದಿದ್ದರೆ ಸಾಕು ಎಂತದ್ದೇ ಸಮಯದಲ್ಲೂ ನಮ್ಮವರನ್ನು ಕೂಡಿಕೊಳ್ಳುವ ಧೈರ್ಯವಾದರೂ ಇರುತ್ತದೆ.
ಆದರೆ ಹವಾಮಾನದ ಕಾರಣ ನೀಡಿ ರೈಲ್ವೇ ಇಲಾಖೆ ರೈಲು ಸಂಚಾರ ರದ್ದುಗೊಳಿಸಿದರೆ ಅದು ನಿಜಕ್ಕೂ ಸಾಮಾನ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಹವಾಮಾನ ಇಲಾಖೆಯ ಕೈಯನ್ನೂ ಕಟ್ಟಿ ಹಾಕುತ್ತದೆ ಎಂಬುದು ಸತ್ಯ.
ಅದರಂತೆ ಅತಿ ಮಂಜಿನ ಚಳಿಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ರೈಲ್ವೇ ವಲಯ ಬರೋಬ್ಬರಿ 2 ತಿಂಗಳುಗಳ ಕಾಲ ಸುಮಾರು 130 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ಉತ್ತರ ಭಾರತದಲ್ಲಿ ಅತಿ ಮಂಜಿನ ಚಳಿಗಾಲ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ರೈಲ್ವೇ ವಲಯದ ಸುಮಾರು 104 ಮತ್ತು ಉತ್ತರ ಮಧ್ಯ ರೈಲ್ವೇಯ ಸುಮಾರು 21 ರೈಲುಗಳ ಸಂಚರವನ್ನು ರದ್ದುಗೊಳಿಸಲಾಗಿದೆ.
ಡಿ.13 ರಿಂದ 15 ಫೆಬ್ರವರಿ 2019ರ ವರೆಗೆ ಇಲಾಖೆ ಪಟ್ಟಿ ಮಾಡಿರುವ ಮಾರ್ಗದಲ್ಲಿ ರೈಲು ಸಂಚಾರ ಇರಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಇನ್ನು ರದ್ದುಗೊಂಡ ರೈಲುಗಳ ಮಾಹಿತಿ ಕುರಿತು ರೈಲ್ವೇ ಇಲಾಖೆ ವೆಬ್ ಸೈಟ್ ನಲ್ಲಿ ಮಾಹಿತಿ ಇದ್ದು, ಆಸಕ್ತರು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಇನ್ನು ದಕ್ಷಿಣ ಭಾರತದಿಮದ ಉತ್ತರ ಭಾರತದತ್ತ ಪ್ರವಾಸ ಕೈಗೊಳ್ಳುವ ಪ್ರಯಾಣಿಕರು, ಈ ಮಾಹಿತಿ ಆಧರಿಸಿಯೇ ತಮ್ಮ ಪ್ರವಾಸ ಯೋಜನೆ ಸಿದ್ಧಪಡಿಸಿಕೊಳ್ಳುವುದು ಒಳಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.