ಕೊರೋನಾ ವೈರಸ್; ಹಲಸಿನ ಹಣ್ಣಿಗೆ ಬೇಡಿಕೆ, ಕೋಳಿ ಬೆಲೆ ಪಾತಾಳಕ್ಕೆ!

By Suvarna News  |  First Published Mar 12, 2020, 3:27 PM IST

ಕೊರೋನಾ ವೈರಸ್ ಹರಡುತ್ತಿರುವ ಕಾರಣ  ಬಹುತೇಕ ವ್ಯವಹಾರಗಳು ಬಂದ್  ಆಗಿವೆ. ಇನ್ನು ಕೋಳಿ ಮಾಂಸದಿಂದ ಕೊರೋನಾ ಹರಡುತ್ತಿದೆ ಅನ್ನೋ ವದಂತಿ ಬೆನ್ನಲ್ಲೋ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಜನರು ಕೋಳಿ ಮಾಂಸ ತ್ಯಜಿಸಿ ಸಸ್ಯಾಹಾರಿಗಳಾಗಿದ್ದಾರೆ. ಇತ್ತ ಹಲಸಿನ ಹಣ್ಣಿಗೆ ಭಾರಿ ಬೇಡಿಕೆ ನಿರ್ಮಾಣವಾಗಿದೆ.


ಮುಂಬೈ(ಮಾ.12): ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಹೆಚ್ಚಿನ ಮುತುವರ್ಜಿವಹಿಸಲಾಗಿದೆ. ಆರೋಗ್ಯ ಇಲಾಖೆ ಕೊರೋನಾ ಹರಡದಂತೆ ಶ್ರಮವಹಿಸುತ್ತಿದೆ. ಇತ್ತ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದೆ. ಕೋಳಿ ಮಾಂಸದಿಂದ ಕೊರೋನಾ ವೈರಸ್ ಹರಡುತ್ತಿದೆ ಅನ್ನೋ ವದಂತಿ ಬೆನ್ನಲ್ಲೇ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು,  ಜನರು ಕೋಳಿ ಮಾಂಸದತ್ತ ತಿರುಗಿ ನೋಡುತ್ತಿಲ್ಲ.

ವಿಶ್ವದ 500 ಸಿರಿವಂತರ 15 ಲಕ್ಷ ರೂ. ಕೋಟಿ ಮಾಯ!

Tap to resize

Latest Videos

undefined

ಕೋಳಿ ಮಾಂಸ ಕೇಜಿಗೆ 8 ರೂಪಾಯಿ, 10 ರೂಪಾಯಿ, 15 ರೂಪಾಯಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೂ ಕೋಳಿ ಮಾಂಸಕ್ಕೆ ಬೇಡಿಕೆ ಇಲ್ಲದಾಗಿದೆ. ಪೌಲ್ಟ್ರಿ ಉದ್ಯಮ ತೀವ್ರ ನಷ್ಟಕ್ಕೆ ಸಿಲುಕಿದೆ. ಪೌಲ್ಟ್ರಿ ನಡೆಸುತ್ತಿರುವ ರೈತರು ಪ್ರತಿ ಕೋಳಿಯಿಂದ 100 ರಿಂದ 130 ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.

ಕೊರೋನಾ ಭೀತಿ: ‘ಅಭಿ ಬಸ್‌'ನಿಂದ ಗ್ರಾಹಕರಿಗೆ ಫ್ರೀ ಮಾಸ್ಕ್‌ ವಿತರಣೆ!...

ಕೋಳಿ ಮಾಂಸ  ತಿನ್ನದೆ ಇರಲು ಸಾಧ್ಯವಾಗದವರು ಇದಕ್ಕೆ ಪರ್ಯಾಯ ಎಂದೇ ಕರೆಸಿಕೊಂಡಿರುವ ಹಲಸಿನ ಕಾಯಿ ಮೊರೆ ಹೋಗುತ್ತಿದ್ದಾರೆ. ಕೋಳಿ ಪ್ರೀಯರು ಇದೀಗ ಹಲಸಿನ ಕಾಯಿಗೆ ಶಿಫ್ಟ್ ಆಗಿರುವ ಕಾರಣ ಹಲಸಿನ ಕಾಯಿ ಹಾಗೂ ಹಲಸಿನ ಹಣ್ಣಿಗೆ ಭಾರಿ ಬೇಡಿಕೆ ಬರುತ್ತಿದೆ. ಸಾಮಾನ್ಯವಾಗಿ ಕೆಜಿಗೆ 50 ರಿಂದ 80 ರೂಪಾಯಿ ಇದ್ದ ಹಲಸಿನ ಹಣ್ಣು ಇದೀಗ  180 ರಿಂದ 200 ರೂಪಾಯಿಗೆ ಏರಿಕೆಯಾಗಿದೆ.

ಮಾರ್ಚ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!