ಮೊಬೈಲ್‌, ಪಾದರಕ್ಷೆ, ಉಡುಪಿಗೆ ಏಕರೂಪದ ಜಿಎಸ್‌ಟಿ?

By Kannadaprabha NewsFirst Published Mar 12, 2020, 7:54 AM IST
Highlights

ಮೊಬೈಲ್‌, ಪಾದರಕ್ಷೆ, ಉಡುಪಿಗೆ ಏಕರೂಪದ ಜಿಎಸ್‌ಟಿ?| ಮಾರ್ಚ್ 14ರಂದು ಮಂಡಳಿಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ

ನವದೆಹಲಿ[ಮಾ.12]: ಮೊಬೈಲ್‌ ಫೋನ್‌, ಪಾದರಕ್ಷೆ, ಉಡುಪು ಸೇರಿದಂತೆ 5 ಉತ್ಪನ್ನಗಳ ಜಿಎಸ್‌ಟಿ (ಸರಕು-ಸೇವಾ ತೆರಿಗೆ) ದರಗಳನ್ನು ಜಿಎಸ್‌ಟಿ ಮಂಡಳಿ ಏಕರೂಪಗೊಳಿಸುವ ಸಾಧ್ಯತೆ ಇದೆ.

ಮಾರ್ಚ್ 14ರಂದು ಮಂಡಳಿಯ ಸಭೆ ನಡೆಯಲಿದ್ದು, ಅಲ್ಲಿ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈಗ ಕೆಲವು ಮೊಬೈಲ್‌ಗಳಿಗೆ ಶೇ.12 ಹಾಗೂ ಮೊಬೈಲ್‌ನ ಕೆಲವು ಸಲಕರಣೆಗಳಿಗೆ ಶೇ.18 ಜಿಎಸ್‌ಟಿ ಇದೆ. ಇನ್ನು 1000 ರು.ವರೆಗಿನ ಪಾದರಕ್ಷೆಗೆ ಶೇ.18ರಷ್ಟು ಜಿಎಸ್‌ಟಿ ಇದ್ದರೆ, ಪಾದರಕ್ಷೆ ತಯಾರಿಕಾ ಸಲಕರಣೆಗಳಿಗೆ ಶೇ.5ರಿಂದ ಶೇ.18ರವರೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ.

ಉಡುಪು ಉತ್ಪನ್ನಗಳ ಜಿಎಸ್‌ಟಿ ಶೇ.5, ಶೇ.12 ಹಾಗೂ ಶೇ.18ರ 3 ಸ್ತರದಲ್ಲಿದೆ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಗೊಂದಲವಾಗುತ್ತಿದೆ.

click me!