ಮುಂದಿನ ವರ್ಷ ದೇಶದ ಆರ್ಥಿಕತೆ ಭಾರೀ ಚೇತರಿಕೆ: ಫಿಚ್‌ ರೇಟಿಂಗ್‌ ಸಂಸ್ಥೆ ಭವಿಷ್ಯ!

By Suvarna NewsFirst Published Jun 11, 2020, 7:24 AM IST
Highlights

ಮುಂದಿನ ವರ್ಷ ದೇಶದ ಆರ್ಥಿಕತೆ ಭಾರೀ ಚೇತರಿಕೆ| ಜಿಡಿಪಿ ಶೇ.9.5 ಅಭಿವೃದ್ಧಿ: ಫಿಚ್‌ ರೇಟಿಂಗ್‌ ಸಂಸ್ಥೆ ಭವಿಷ್ಯ| 2021ರಲ್ಲಿ ಸುಸ್ಥಿರ ಅಭಿವೃದ್ಧಿ: ಎಸ್‌-ಪಿ ಸಂಸ್ಥೆ ಅಂದಾಜು

ನವದೆಹಲಿ(ಜೂ.11): ಆರ್ಥಿಕ ಹಿಂಜರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೊಂದು ಸಿಹಿ ಸುದ್ದಿ. ಮುಂದಿನ ವರ್ಷ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದಾಖಲೆಯ ಶೇ.9.5ರ ದರದಲ್ಲಿ ಅಭಿವೃದ್ಧಿ ಹೊಂದಲಿದೆ ಎಂದು ಅಂತಾರಾಷ್ಟ್ರೀಯ ರೇಟಿಂಗ್‌ ಏಜೆನ್ಸಿ ಫಿಚ್‌ ಭವಿಷ್ಯ ನುಡಿದಿದೆ. ಆದರೆ, ಈ ವರ್ಷ ಆರ್ಥಿಕತೆ ಇನ್ನಷ್ಟುಕುಸಿಯದಂತೆ ನೋಡಿಕೊಂಡರೆ ಮಾತ್ರ ಇದು ಸಾಧ್ಯ ಎಂದೂ ಎಚ್ಚರಿಕೆ ನೀಡಿದೆ.

ಇದೇ ವೇಳೆ, ಎಸ್‌ ಆ್ಯಂಡ್‌ ಪಿ ರೇಟಿಂಗ್‌ ಏಜೆನ್ಸಿ ಕೂಡ 2021ನೇ ಸಾಲಿನಲ್ಲಿ ಭಾರತದ ಜಿಡಿಪಿ ಉತ್ತಮ ಬೆಳವಣಿಗೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದು, ದೇಶದ ಆರ್ಥಿಕತೆಗೆ ‘ಬಿಬಿಬಿ ಸುಸ್ಥಿರ ರೇಟಿಂಗ್‌’ ನೀಡಿದೆ.

ಭಾರತೀಯ ವಸ್ತುಗಳ ಬಳಕೆಗೆ ಪ್ರತಿಜ್ಞೆ ಮಾಡಿ: ಅಮಿತ್ ಶಾ ಕರೆ!

2020-21ನೇ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ.5ರಷ್ಟುಕುಸಿಯಲಿದೆ ಎಂದು ಈ ಹಿಂದೆ ಫಿಚ್‌ ಹೇಳಿತ್ತು. ಈಗ ಲಾಕ್‌ಡೌನ್‌ ನಂತರ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿರುವುದರಿಂದ, ಆರ್ಥಿಕತೆ ಇನ್ನಷ್ಟುಕುಸಿಯದಂತೆ ನೋಡಿಕೊಂಡರೆ ಮುಂದಿನ ವರ್ಷ, ಅಂದರೆ 2021-22ನೇ ಸಾಲಿನಲ್ಲಿ ಜಿಡಿಪಿ ಶೇ.9.5ರಷ್ಟುಬೆಳವಣಿಗೆ ಹೊಂದಲಿದೆ ಎಂದು ಹೇಳಿದೆ. ಬುಧವಾರ ಬಿಡುಗಡೆ ಮಾಡಿದ ಎಪಿಎಸಿ ವರದಿಯಲ್ಲಿ ಈ ಕುರಿತು ಫಿಚ್‌ ಮಾಹಿತಿ ನೀಡಿದೆ.

‘ಕೊರೋನಾ ಜಾಗತಿಕ ಬಿಕ್ಕಟ್ಟಿನ ನಂತರ ಭಾರತವು ಆರ್ಥಿಕ ಕ್ಷೇತ್ರದ ಆರೋಗ್ಯವನ್ನು ಕಾಪಾಡಿಕೊಂಡರೆ ದೇಶದ ಜಿಡಿಪಿ ಭಾರಿ ಅಭಿವೃದ್ಧಿ ಕಾಣಲಿದೆ. ಭಾರತ ಸರ್ಕಾರ ಈಗಾಗಲೇ ಜಿಡಿಪಿಯ ಶೇ.10ರಷ್ಟುಮೊತ್ತದ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ ಪ್ರಕಟಿಸಿದೆ. ಆದರೂ ದೇಶದ ಸಾಲ ಮತ್ತು ವಿತ್ತೀಯ ಕೊರತೆ ಹೆಚ್ಚಿನ ಪ್ರಮಾಣದಲ್ಲೇ ಇದೆ. ಇದನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ ಆರ್ಥಿಕತೆ ಇನ್ನಷ್ಟುಕುಸಿಯದಂತೆ ನೋಡಿಕೊಂಡರೆ ಮುಂದಿನ ವರ್ಷ ಉತ್ತಮ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ಸಾಕಷ್ಟು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಬಂಡವಾಳ ಹೂಡಿಕೆ ಉತ್ತಮ ದರದಲ್ಲೇ ಮುಂದುವರೆಯಲಿದೆ. ಆದರೆ ವಿತ್ತೀಯ ಕೊರತೆ ಹೆಚ್ಚಳವಾಗುತ್ತಿದೆ. ಸಾಲ ಮತ್ತು ಜಿಡಿಪಿಯ ಅನುಪಾತ ಕೂಡ ಹೆಚ್ಚುತ್ತಿದೆ. ಇದನ್ನು ಸರಿಪಡಿಸಿಕೊಂಡು ಸಮತೋಲನ ಸಾಧಿಸಿದರೆ ಆರ್ಥಿಕತೆಯನ್ನು ರಕ್ಷಿಸಿಕೊಂಡು ಬಲವಾಗಿ ಪುನರ್‌ನಿರ್ಮಾಣ ಮಾಡಬಹುದು ಎಂದು ವರದಿ ತಿಳಿಸಿದೆ.

'ಆರ್ಥಿಕ ದಿವಾಳಿಯೇ ಮೋದಿ ಸಾಧನೆ: ಕೊರೋನಾ ಹರಡಲು ಕೇಂದ್ರವೇ ಹೊಣೆ'

ಫಿಚ್‌ ಹೇಳಿದ್ದೇನು?

ಲಾಕ್‌ಡೌನ್‌ ನಂತರ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿದೆ. ಭಾರತ ಸರ್ಕಾರ ಜಿಡಿಪಿಯ ಶೇ.10 ಮೊತ್ತದ (.20 ಲಕ್ಷ ಕೋಟಿ) ಆರ್ಥಿಕ ಉತ್ತೇಜನಾ ಪ್ಯಾಕೇಜ್‌ ಪ್ರಕಟಿಸಿದೆ. ಆರ್ಥಿಕತೆ ಇನ್ನಷ್ಟುಕುಸಿಯದಂತೆ ನೋಡಿಕೊಂಡರೆ 2021-22ನೇ ಸಾಲಿನಲ್ಲಿ ಜಿಡಿಪಿ ಶೇ.9.5 ಬೆಳವಣಿಗೆ ಹೊಂದಲಿದೆ.

click me!