ಪೆಟ್ರೋಲ್ ಮೂಲ ಬೆಲೆ 18 ರೂ, ಕೇಂದ್ರ ಹಾಗೂ ರಾಜ್ಯದ ಸುಂಕ ಶೇ. 275; ವಿಶ್ವದ ದುಬಾರಿ ಟ್ಯಾಕ್ಸ್!

By Suvarna News  |  First Published Jun 9, 2020, 8:27 PM IST

ಪೆಟ್ರೋಲ್, ಡೀಸೆಲ್‌ಗೆ ಭಾರತೀಯರು ಗರಿಷ್ಠ ಅಂದರೆ ವಿಶ್ವದಲ್ಲಿ ಯಾರೂ ನೀಡದಷ್ಟು ತೆರಿಗೆ ನೀಡುತ್ತಿದ್ದಾರೆ. ಕಳೆದ ತಿಂಗಳು ಕೇಂದ್ರ ಸರ್ಕಾರ ಮತ್ತೆ ಸುಂಕ ಹೆಚ್ಚಿಸಿತ್ತು. ಪೆಟ್ರೋಲ್ ಮೂಲ ಬೆಲೆ ಹಾಗು ಸುಂಕದ ಬಳಿಕ ನಾವು ಬಂಕ್‌ಗಳಲ್ಲಿ ಖರೀದಿ ಬೆಲೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಈ ಕುರಿತ ವರದಿ ಇಲ್ಲಿದೆ.


ನವದೆಹಲಿ(ಜೂ.09): ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದುಬಾರಿ. ಇದೀಗ ಪೆಟ್ರೋಲ್ ಬೆಲೆ ಸರಿಸುಮಾರು 75 ರೂಪಾಯಿ. ಇದರಲ್ಲಿ ಪೆಟ್ರೋಲ್ ಮೂಲ ಬೆಲೆ ಕೇವಲ 18 ರೂಪಾಯಿ ಮಾತ್ರ, ಮಿಕ್ಕಿದ್ದು ಸುಂಕ. ಆಶ್ಚರ್ಯವಾದರೂ ಇದು ಸತ್ಯ. ಭಾರತ ಶೇಕಡ 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ತಿಂಗಳು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 10 ಹಾಗೂ ಡೀಸೆಲ್ ಮೇಲೆ 13 ರೂಪಾಯಿ ಸುಂಕ ಹೆಚ್ಚಿಸಿತ್ತು.

80 ದಿನ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

Latest Videos

undefined

ಭಾರತೀಯರು ಪೆಟ್ರೋಲ್ ಮೇಲೆ ನೀಡುವ ಸುಂಕ ಬರೋಬ್ಬರಿ ಶೇಕಡಾ  275. ಇದು ವಿಶ್ವದಲ್ಲೇ ಅತ್ಯಂತ ದುಬಾರಿ ಟ್ಯಾಕ್ಸ್. 18 ರೂಪಾಯಿ ಮೂಲ ಬೆಲೆಯ ಪೆಟ್ರೋಲ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಧಿಸುವ ಸುಂಕ  50 ರೂಪಾಯಿ. 

ಪೆಟ್ರೋಲ್, ಡೀಸೆಲ್ ಮೇಲಿನ ಸೀಮಾ ಸುಂಕ ಹೆಚ್ಚಳ; ಗ್ರಾಹಕರಿಗಿಲ್ಲ ಹೊರೆ!

ಪೆಟ್ರೋಲ್ ಹಾಗೂ ಡೀಸೆಲ್ ಎಕ್ಸೈಸ್ ಡ್ಯೂಟಿ 33 ಹಾಗೂ 32 ರೂಪಾಯಿ. ಇನ್ನು ವ್ಯಾಟ್(ವಾಲ್ಯೂ ಆಡೆಡೆ ಟ್ಯಾಕ್ಸ್) ಪೆಟ್ರೋಲ್‌ಗೆ 16.44 ರೂಪಾಯಿ ಹಾಗೂ ಡೀಸೆಲ್‌ಗೆ 16.22 ರೂಪಾಯಿ. ಒಟ್ಟು ಸುಂಕ 49 ರೂಪಾಯಿ. ಇನ್ನು ಪೆಟ್ರೋಲ್ ಬಂಕಗಳಲ್ಲಿ ಪೆಟ್ರೋಲ್ ಬೆಲೆ ಸರಾಸರಿ 75 ರೂಪಾಯಿ.

ಇಂಧನಕ್ಕೆ ಗರಿಷ್ಠ ತೆರಿಗೆ ನೀಡುವ ದೇಶ ಭಾರತ. ಇನ್ನುಳಿದ ರಾಷ್ಟ್ರಗಳಲ್ಲಿ ಇಷ್ಟು ತೆರಿಗೆ ಇಲ್ಲ. ಅಮೆರಿಕಗಲ್ಲಿ ಶೇಕಡಾ 17, ಜಪಾನ್‌ನಲ್ಲಿ ಶೇಕಡಾ 47, ಇಂಗ್ಲೆಂಡ್‌ನಲ್ಲಿ ಶೇಕಡಾ 62 ಹಾಗೂ ಫ್ರಾನ್ಸ್ನಲ್ಲಿ 63 ಶಕೇಡಾ ತೆರಿಗೆ ಇದೆ. ಆದರೆ ಭಾರತದಲ್ಲಿ ಬರೋಬ್ಬರಿ 275%.

click me!