ತಜ್ಞನ ಮಾತಿನಿಂದ ಖಾಸಗಿ ಕಂಪನಿ ಉದ್ಯೋಗಿಗಳಲ್ಲಿ ಆತಂಕ, ಕಾರಣ ನಿಮ್ಮ ವಯಸ್ಸು

Published : May 06, 2025, 03:02 PM IST
ತಜ್ಞನ ಮಾತಿನಿಂದ ಖಾಸಗಿ ಕಂಪನಿ ಉದ್ಯೋಗಿಗಳಲ್ಲಿ ಆತಂಕ, ಕಾರಣ ನಿಮ್ಮ ವಯಸ್ಸು

ಸಾರಾಂಶ

ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಸರಾಸರಿ 60. ಹಲವು ಪ್ರೈವೇಟ್ ಕಂಪನಿ ಉದ್ಯೋಗಿಗಳಿಗೂ ಇದೇ ನಿವೃತ್ತಿ ವಯಸ್ಸು. ಆದರೆ ಇದೀಗ ಕಾಲ ಬದಲಾಗಿದೆ. ಕಾರ್ಪೋರೇಟ್ ಸೇರಿದಂತೆ ಪ್ರೈವೇಟ್ ಕಂಪನಿಗಳ ಉದ್ಯೋಗಿಗಳ ನಿವೃತ್ತಿ ವಯಸ್ಸು ಎಷ್ಟು ಮಾಡಿದ್ದಾರೆ ಗೊತ್ತಾ? ಈ ವಯಸ್ಸು ದಾಟಿದರೆ ಬಳಿಕ ಯಾವ ಕಂಪನಿಗೂ ಬೇಡ.

ನವದೆಹಲಿ(ಮೇ.06) ಆರಂಭದಲ್ಲಿ ಫ್ರೆಶರ್ ಅನ್ನೋ ಕಾರಣಕ್ಕೆ ಕೆಲಸ ಹೆಚ್ಚು. ಬಳಿಕ ಸ್ಯಾಲರಿಗಾಗಿ ಒಂದೆರೆಡು ಕಂಪನಿ ಬದಲಾವಣೆ. ಅಷ್ಟರಲ್ಲೇ ಸೀನಿಯರ್ ಪೋಸ್ಟ್.  ಅಸಾಧ್ಯ ಟಾರ್ಗೆಟ್, ಹೆಚ್ಚುವರಿ ಜವಾಬ್ದಾರಿ, ಸ್ಯಾಲರಿ ಹೆಚ್ಚಾಯ್ತು ಅನ್ನೋ ಟ್ಯಾಗ್ ಲೈನ್ ಸೇರಿದಂತೆ ಹಲವು ಸವಾಲುಗಳು ಕಾರ್ಪೋರೇಟ್ ಜಗತ್ತಿನಲ್ಲಿ ಹೊಸದೇನಲ್ಲ. ಬಹುತೇಕರು ಹೇಗೋ ತಳ್ಳಿಕೊಂಡು ವಯಸ್ಸು 55 ದಾಟಿಸಿದರೆ ಸಾಕು. ಬಳಿಕ ನಿವೃತ್ತಿ ಅಥವಾ ವಿಶ್ರಾಂತಿ ಅನ್ನೋ ಲೆಕ್ಕಾಚಾರದಲ್ಲಿದ್ದರೆ, ಈ ಪ್ಲಾನ್ ಈಗಲೇ ಬಿಟ್ಟುಬಿಡಿ. ಕಾರಣ ಕಾರ್ಪೋರೇಟ್ ಜಗತ್ತಿನ ಭಾಷೆ ಬದಲಾಗಿದೆ. ಕಾರಣ ತಜ್ಞರು ಹೇಳುವ ಪ್ರಕಾರ ಇದೀಗ ಕಾರ್ಪೋರೇಟ್ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳು ನಿವೃತ್ತಿ ವಯಸ್ಸು ಕೇವಲ 40. ಇದರ ಮೇಲೆ ಇದ್ದರ ಆಪತ್ತು.

ಖಾಸಗಿ ಕಂಪನಿಗಳ ನಿವೃತ್ತಿ ವಯಸ್ಸು 40
ಖಾಸಗಿ ಅಥವಾ ಕಾರ್ಪೋರೇಟ್ ಕಂಪನಿಗಳಲ್ಲಿ ನಿವೃತ್ತಿ ವಯಸ್ಸು 60 ರಿಂದ 55ಕ್ಕೆ ಇಳಿಸಲಾಗಿತ್ತು. ಬಳಿಕ 45 ಆಗಿತ್ತು. ಇದೀಗ 40. ಇದು ಲಿಖಿತ ನಿಯಮವಲ್ಲ. ಆದರೆ 40 ದಾಟಿದ ಬಳಿಕ ಅಥವಾ  ನಿವೃತ್ತಿಯಾಗುವವರೆಗೆ ಉದ್ಯೋಗಿಗಳು ಇರುವುದೇ ಇಲ್ಲ. ಅದಕ್ಕೂ ಮೊದಲೇ ರಾಜೀನಾಮೆ ಕೊಡುತ್ತಾರೆ, ಇಲ್ಲಾ ಬೇರೆ ಕಾರಣಗಳಿಂದ ಕಂಪನಿಯಿಂದ ಹೊರಬಂದಿರುತ್ತಾರೆ ಎಂದು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಸಾರ್ಖಕ್ ಅಹುಜಾ ಹೇಳಿದ್ದಾರೆ. 

40 ದಾಟಿದರೆ ಯಾವ ಕಂಪನಿಗೂ ಬೇಡ
40 ವಯಸ್ಸು ದಾಟಿದ ಬಳಿಕ ನೀವು ಖಾಸಗಿ ಕಂಪನಿಯಲ್ಲಿ ಮುಂದುವರಿಯಲು ಅಥವಾ ಇನ್ನೊಂದು ಖಾಸಗಿ, ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮುಂದುವರಿಸುವ ಯೋಚನೆ ಇದ್ದರೆ ಸದ್ಯ ಅಸಾಧ್ಯ. ಕಾರಣ 40 ವಯಸ್ಸು ದಾಟಿದ ಉದ್ಯೋಗಿಗಳು ಯಾವ ಖಾಸಗಿ ಕಂಪನಿಗಳಿಗೂ ಬೇಡ. ಪ್ರಮುಖವಾಗಿ ಇವರ ವೇತನ, ಹಿರಿತನ ಸೇರಿದಂತೆ ಇತರ ಕಾರಣಗಳಿವೆ. ಇದಕ್ಕಿಂತ ಕಡಿಮೆ ವೆಚ್ಚದಲ್ಲಿ, ಫ್ರೆಶ್ ಮೈಂಡೆಡ್ ಹೆಚ್ಚು ತಂತ್ರಜ್ಞಾನವನ್ನೇ ಮೈಗೂಡಿಸಿಕೊಂಡ ಹೊಸ ಜನರೇಶನ್, ಅಥವಾ ಫ್ರೆಶರ್ ಕಂಪನಿಗೆ ಲಭ್ಯವಾಗುತ್ತಾರೆ ಅನ್ನೋದು ಅನಧಿಕೃತ ನಿಯಮ. 

ಉತ್ತಮ ರಿಟರ್ನ್ಸ್‌ಗಾಗಿ ದುಬಾರಿಯಾಗಿರುವ ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಾ? ಸಿಎ ಎಚ್ಚರಿಕೆ

ಅನುಭವ ಹೆಚ್ಚಾದಂತೆ ಹೊರೆ
ವೈದ್ಯರು, ಲಾಯರ್ಸ್ ಸೇರಿದಂತೆ ಕೆಲ ವೃತ್ತಿಗಳಲ್ಲಿ ಅನುಭವ ಹೆಚ್ಚಾದಂತೆ ಬೆಲೆ ಹೆಚ್ಚು. ಅಂದರೆ ನುರಿತ, ತಜ್ಞ ವೈದ್ಯರಿಗೆ ಹೆಚ್ಚಿನ ಬೇಡಿಕೆ ಇದೆ. ವೃತ್ತಿಯಲ್ಲೂ ಇವರಿಗೆ ಹೆಚ್ಚಿನ ವೇತನವಿದೆ. ಇನ್ನು ವಕೀಲ ವೃತ್ತಿಯಲ್ಲೂ ಅನುಭವ ಹೆಚ್ಚಾದಂತೆ ಸ್ಯಾಲರಿ ಹೆಚ್ಚು, ಅಥವಾ ಬೇಡಿಕೆ ಹೆಚ್ಚು. ಆದರೆ ಮಾರ್ಕೆಟಿಂಗ್, ಸೇಲ್ಸ್, ಪ್ರೊಡಕ್ಷನ್, ಟೆಕ್, ಆಪರೇಶನ್, ಮ್ಯಾನೇಜ್ಮೆಂಟ್ ಸೇರಿದಂತೆ ಕಾರ್ಪೋರೇಟ್ ಕಂಪನಿಗಳು ಇದೀಗ ನಿವೃತ್ತಿ ವಯಸ್ಸನ್ನೇ 45ಕ್ಕೆ ಇಳಿಸಿದೆ. ಅಂದರೆ 40 ಬಳಿಕ ಈ ಕಂಪನಿಗಳಲ್ಲಿ ಕೆಲಸ ಮುಂದುವರಿಸುವುದೇ ದೊಡ್ಡ ಸವಾಲು. ಉದ್ಯೋಗಿಗಳು ಹೇಗೆ ನಿಭಾಸಿಕೊಂಡು ಮುಂದುವರಿಯಲು ಬಯಸಿದರೂ ಕಂಪನಿ ಬಯಸುವುದಿಲ್ಲ ಎಂದು ಸಾರ್ಥಕ್ ಅಹುಜಾ ಹೇಳಿದ್ದಾರೆ. 40 ದಾಟಿದ ಬಳಿಕ ಕಂಪನಿಗಳು ಸಂದರ್ಶನಕ್ಕೆ ಕರೆಯುವುದಿಲ್ಲ, ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡುವು ಸಾಧ್ಯೆತೆಗಳು ಕಡಿಮೆ. 

 

 

ಕೆಲಸ ಗಿಟ್ಟಿಸಿಕೊಂಡ ಬಳಿಕ ವೃತ್ತಿಯಲ್ಲಿ ನಿವೃತ್ತಿಯಾಗುವ ವರೆಗೆ ಅಂದರೆ 60 ವಯಸ್ಸಿನ ವರಗೆ ಕೆಲಸದಲ್ಲಿ ಮುಂದುವರಿಯುವ ಯೋಚನೆ ಇದ್ದರೆ, ಅಥವಾ ಇನ್ನು ಸಮಯವಿದೆ ಅನ್ನೋ ಭಾವನೆ ನಿಮ್ಮಲ್ಲಿದ್ದರೆ, ಈಗಲೇ ಬಿಟ್ಟು ಬಿಡಿ ಎನ್ನುತ್ತಾರೆ ಸಾರ್ಥಕ್ ಅಹುಜಾ. ಇದೀಗ 40 ವಯಸ್ಸಿಗೆ ನಿವೃತ್ತಿಯಾಗುವ ರೀತಿ ಪ್ಲಾನ್ ಮಾಡಿಕೊಳ್ಳಬೇಕು. 40 ಬಳಿಕ ಕಂಪನಿ ಇಟ್ಟುಕೊಂಡರೆ ಬೋನಸ್, ನಾವಿದ್ದರೂ ಬೋನಸ್. ಹೀಗಾಗಿ ಹೂಡಿಕೆ, ನಿವೃತ್ತಿಯಾಗುವ ವರ್ಷಗಳ ಕುರಿತು ಸ್ಪಷ್ಟ ಚಿತ್ರಣ ಇರಬೇಕು. ಇದಕ್ಕೆ ತಕ್ಕಂತೆ ಪ್ಲಾನ್ ಮಾಡಿಕೊಳ್ಳಬೇಕು ಎಂದು ಸಾರ್ಥಕ ಅಹುಜಾ ಹೇಳುತ್ತಾರೆ.

40ರ ಬಳಿಕ ಕಂಪನಿಯಲ್ಲಿ ಮುಂದುವರಿಯಲು ಕೆಲ ದಾರಿಗಳಿವೆ
ಸಾರ್ಥಕ್ ಪ್ರಕಾರ 40ರ ಬಳಿಕ ಯಾವುದೇ ಖಾಸಗಿ ಕಂಪನಿಯಲ್ಲಿ ಮುಂದುವರಿಯಲು ಕೆಲ ದಾರಿಗಳಿವೆ. ಈ ಪೈಕಿ ಪ್ರಮುಖವಾಗಿರುವುದು, ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬೇಕು. ಅಂದರೆ ಕಂಪನಿಗೆ ಸೇರಿಕೊಳ್ಳುವ ಹೊಸ ಜನರೇಶನ್ ಉದ್ಯೋಗಿಗಳನ್ನು ಮೀರಿಸುವಂತ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು.  ನಿಮ್ಮ ಸ್ಕಿಲ್, ಅನುಭವ, ಪರಿಸ್ಥಿತಿ ನಿಭಾಯಿಸುವ ರೀತಿ ಇನ್ಯಾರಿಗೂ ಸಾಧ್ಯವಿಲ್ಲ ಅನ್ನೋ ಮಟ್ಟಕೆ ಸಾಬೀತು ಮಾಡಿರಬೇಕು. ನೀವು ಕಂಪನಿಯಿಂದ ಹೊರಹೊದರೆ ಕಂಪನಿಗೆ ತೀವ್ರ ನಷ್ಟವಾಗಲಿದೆ, ಅಥವಾ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ ಅನ್ನೋದು ಕಂಪನಿಗೆ ಮನದಟ್ಟಾಗಿರಬೇಕು. ಈ ರೀತಿಯ ಕೌಶಲ್ಯಗಳು ನಿಮ್ಮಲ್ಲಿದ್ದರೆ ಮಾತ್ರ 40ರ ಬಳಿಕ ಖಾಸಗಿ ಕಂಪನಿಯಲ್ಲಿ ಮುಂದುವರಿಯಲು ಸಾಧ್ಯ ಎಂದು ಸಾರ್ಥಕ್ ಹೇಳಿದ್ದಾರೆ.

ಆರೋಗ್ಯ ಮೊದಲೋ, ಕೆಲಸ ಮೊದಲೋ? ಆಸ್ಪತ್ರೆ ಐಸಿಯುನಿಂದ ಬೆಂಗಳೂರಿನ ಸಿಇಒ ಸಂದೇಶ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!