ಬೆಲೆ ಏರಿಕೆ ಮಾತ್ರವಲ್ಲ ಸಾಲದ ವಿಷ್ಯದಲ್ಲೂ ದಾಖಲೆ ಬರೆದ ಬಂಗಾರ !

Published : May 06, 2025, 01:51 PM ISTUpdated : May 06, 2025, 02:09 PM IST
ಬೆಲೆ ಏರಿಕೆ ಮಾತ್ರವಲ್ಲ ಸಾಲದ ವಿಷ್ಯದಲ್ಲೂ ದಾಖಲೆ ಬರೆದ ಬಂಗಾರ !

ಸಾರಾಂಶ

ಚಿನ್ನದ ಬೆಲೆ ಏರಿಕೆಯ ಹೊರತಾಗಿಯೂ, ಚಿನ್ನದ ಆಭರಣಗಳ ಬೇಡಿಕೆ ಕುಸಿದಿದೆ. ಆದರೆ, ಚಿನ್ನದ ಸಾಲಗಳು ದ್ವಿಗುಣಗೊಂಡು ₹2.09 ಲಕ್ಷ ಕೋಟಿ ದಾಟಿದೆ. ಬೆಲೆ ಏರಿಕೆ, ಅಸುರಕ್ಷಿತ ಸಾಲಗಳ ಮೇಲಿನ ಕ್ರಮ, ಕೃಷಿ ಸಾಲ ಪರಿವರ್ತನೆ ಹಾಗೂ ಕೋವಿಡ್ ಸಂದರ್ಭದ ಆರ್ಥಿಕ ಸಂಕಷ್ಟ ಇದಕ್ಕೆ ಕಾರಣ. ಒಟ್ಟಾರೆ ಚಿಲ್ಲರೆ ಸಾಲದಲ್ಲಿ ಚಿನ್ನದ ಸಾಲದ ಪಾಲು ಗಣನೀಯವಾಗಿ ಏರಿಕೆಯಾಗಿದೆ.

ಮನೆಯಲ್ಲಿ ಚಿನ್ನ (Gold)ವಿದ್ರೆ ಚಿಂತೆ ಏಕೆ? ಭಾರತ ಚಿನ್ನವನ್ನು ಪ್ರೀತಿಸುವ ದೇಶ. ಇಲ್ಲಿ ಚಿನ್ನವನ್ನು ಆಭರಣವಾಗಿ ಮಾತ್ರವಲ್ಲ ಹೂಡಿಕೆಯಾಗಿ ನೋಡ್ತಾರೆ. ಹಿಂದಿನ ಕಾಲದಿಂದಲೂ ಜನರು ಬಂಗಾರ, ಬಂಗಾರದ ಆಭರಣಗಳನ್ನು ಮಾಡಿ ಲಾಕರ್ ನಲ್ಲಿ ಇಡ್ತಿದ್ದಾರೆ. ಬಂಗಾರವನ್ನು ಆಪತ್ಕಾಲದ ಬಂಧು ಎಂದೇ ನಂಬಲಾಗಿದೆ. ಇದು ನೂರಕ್ಕೆ ನೂರು ಸತ್ಯ ಕೂಡ ಹೌದು. ಈ ಬಾರಿ ಬೆಲೆ ಏರಿಕೆ ವಿಷ್ಯದಲ್ಲಿ ಮಾತ್ರವಲ್ಲ ಸಾಲದಲ್ಲೂ ಬಂಗಾರ ಮುಂದಿದೆ. 

ಆಕಾಶಕ್ಕೇರಿದ್ದ ಚಿನ್ನದ ಬೆಲೆ (Gold price)  ನಿಧಾನವಾಗಿ ಇಳಿತಿದೆಯಾದ್ರೂ ಜನಸಾಮಾನ್ಯರಿಗೆ ಚಿನ್ನ ಗಗನಕುಸಮವೇ ಸರಿ. ಮದುವೆ ಋತುವಿನಲ್ಲಿ ಚಿನ್ನ ಖರೀದಿ ಅನಿವಾರ್ಯವಾದ್ರೂ ಈ ಬಾರಿ ಚಿನ್ನದ ಆಭರಣಕ್ಕೆ ಬೇಡಿಕೆ ಕಡಿಮೆ ಇದೆ. ಆದ್ರೆ ಸಾಲದ ವಿಷ್ಯದಲ್ಲಿ ಚಿನ್ನ ದಾಖಲೆ ಬರೆದಿದೆ. ಗೃಹ ಸಾಲ, ಕಾರು ಸಾಲ, ಕ್ರೆಡಿಟ್ ಕಾರ್ಡ್ಗಳು ಮತ್ತು ವೈಯಕ್ತಿಕ ಸಾಲಗಳನ್ನು ಚಿನ್ನದ ಸಾಲ ಬದಿಗಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಇತ್ತೀಚಿನ ಮಾಹಿತಿಯ ಪ್ರಕಾರ, ಈ ವರ್ಷ ಬ್ಯಾಂಕುಗಳು ಚಿನ್ನದ ಆಭರಣಗಳನ್ನು ಅಡವಿಟ್ಟು ನೀಡಿದ ಸಾಲ 2.09 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ಇದು ಒಂದು ವರ್ಷದ ಹಿಂದೆ ಪಡೆದ 1.03 ಲಕ್ಷ ಕೋಟಿ ರೂಪಾಯಿಗಳಿಗಿಂತ ಡಬಲ್.  

ಚಿನ್ನದ ಸಾಲ ಹೆಚ್ಚಳಕ್ಕೆ ಕಾರಣವೇನು? : ಬೆಲೆ ಏರಿಕೆ ಒಂದ್ಕಡೆಯಾದ್ರೆ ಇನ್ನೊಂದು ಕಡೆ ವೈಯಕ್ತಿಕ ಸಾಲಗಳಂತಹ ಅಸುರಕ್ಷಿತ ಸಾಲಗಳ ಮೇಲಿನ ಕ್ರಮದಿಂದಾಗಿ ಚಿನ್ನದ ಸಾಲಗಳಿಗೆ ಬೇಡಿಕೆ ಹೆಚ್ಚಾಗಿದೆ.  ಮೇ 2024 ರಲ್ಲಿ ಕೇಂದ್ರ ಬ್ಯಾಂಕಿನ ನಿರ್ದೇಶನವನ್ನು ಅನುಸರಿಸಿ ಕೆಲವು ಬ್ಯಾಂಕುಗಳು ಕೃಷಿ ಸಾಲಗಳನ್ನು ಚಿನ್ನದ ಸಾಲಗಳಾಗಿ ಪರಿವರ್ತಿಸಿವೆ. 

ಅಂಕಿಅಂಶಗಳು ಏನು ಹೇಳುತ್ತವೆ? :  ರಿಸರ್ವ್ ಬ್ಯಾಂಕ್ ಅಂಕಿ ಅಂಶದ ಪ್ರಕಾರ,  ಒಟ್ಟು ಚಿಲ್ಲರೆ ಸಾಲದಲ್ಲಿ ಬ್ಯಾಂಕ್ಗಳ ಚಿನ್ನದ ಸಾಲಗಳ ಪಾಲು ಮಾರ್ಚ್ 2020 ರಲ್ಲಿ ಶೇಕಡಾ 1.2 ರಷ್ಟಿತ್ತು. ಅದು  ಮಾರ್ಚ್ 2025 ರಲ್ಲಿ ಶೇಕಡಾ 3.5 ಕ್ಕೆ ಏರಿದೆ.  ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ (NBFC) ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ. ಮಾರ್ಚ್ 2020 ರಿಂದ ಮಾರ್ಚ್ 2025 ರ ನಡುವೆ ಚಿನ್ನದ ಬೆಲೆ ವಾರ್ಷಿಕವಾಗಿ ಶೇಕಡಾ 17 ರಷ್ಟು ಹೆಚ್ಚಾಗಿದೆ.

ಈ ಐದು ವರ್ಷಗಳಲ್ಲಿ ಚಿನ್ನದ ಬೆಲೆಗಳು ಒಟ್ಟು ಶೇಕಡಾ 122 ರಷ್ಟು ಹೆಚ್ಚಾಗಿದೆ. ಆರ್ಬಿಐ ದತ್ತಾಂಶದ ಪ್ರಕಾರ, ಚಿನ್ನದ ಸಾಲದ ಬಂಡವಾಳವು ಮಾರ್ಚ್ 2020 ರಲ್ಲಿ 33,257 ಕೋಟಿ ರೂಪಾಯಿಗಳಿಂದ ಮಾರ್ಚ್ 2025 ರಲ್ಲಿ 208,735 ಕೋಟಿ ರೂಪಾಯಿಗಳಿಗೆ ಏರಿದೆ. ಅದೇ ಅವಧಿಯಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 38,600 ರೂಪಾಯಿಗಳಿಂದ ಸುಮಾರು 85,800 ರೂಪಾಯಿಗಳಿಗೆ ಏರಿದೆ

ಇಷ್ಟೊಂದು ಬೇಡಿಕೆ ಬರಲು ಕಾರಣವೇನು? : ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಂದ್ರೆ 2021ರ ಸಮಯದಲ್ಲಿ ಚಿನ್ನದ ಬೆಲೆಗಳು ಕೇವಲ ಶೇಕಡಾ 3ರಷ್ಟು ಏರಿಕೆ ಕಂಡಿದ್ದವು. ಆದ್ರೆ  ಆ ಸಮಯದಲ್ಲಿ ಚಿನ್ನದ ಸಾಲಗಳು ಶೇಕಡಾ 128 ರಷ್ಟು ಹೆಚ್ಚಾಗಿದ್ದವು. ಇದಕ್ಕೆ ಕಾರಣ ಕೋವಿಡ್ ಸಮಯದಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದರು.  ಆಗ ಜನರಿಗೆ ಆಸರೆಯಾಗಿದ್ದು ಚಿನ್ನ.  ಚಿನ್ನದ ಆಭರಣಗಳಿಗೆ ಬೇಡಿಕೆ ಕಡಿಮೆ ಆಗ್ತಾನೇ ಇದೆ. ಈ ವರ್ಷ ಶೇಕಡಾ 25ರಷ್ಟು ಬೇಡಿಕೆ ಕಡಿಮೆ ಆಗಿದೆ. ಆದ್ರೆ ಚಿನ್ನದ ಸಾಲಗಳಿಗೆ ಬೇಡಿಕೆ ಹೆಚ್ಚುತ್ತಲೇ ಇತ್ತು. ಹಣದ ಅಗತ್ಯಕ್ಕೆ ತಕ್ಕಂತೆ ಜನರು  ತಮ್ಮ ಚಿನ್ನವನ್ನು ಅಡಮಾನ ಇಡ್ತಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!