ಭಾರತದ ಈ ಉದ್ಯಮಿ ಬಳಿಯಿರೋ ಕಾಸ್ಟ್ಲೀ ಕಾರ್ ಕಲೆಕ್ಷನ್‌ ಬಿಲಿಯನೇರ್‌ ಅಂಬಾನಿ, ಅದಾನಿ ಬಳಿಯೂ ಇಲ್ಲ!

By Vinutha Perla  |  First Published Nov 18, 2023, 9:42 AM IST

ಭಾರತದಲ್ಲಿ ಐಷಾರಾಮಿ ಕಾರುಗಳನ್ನು ಹೊಂದಿರುವ ಹಲವಾರು ಬಿಲಿಯನೇರ್‌ಗಳಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ, ಶಿವ ನಾಡಾರ್ ಮೊದಲಾದವರು ಹಲವು ಐಷಾರಾಮಿ ಕಾರುಗಳ ಒಡೆತನ ಹೊಂದಿದ್ದಾರೆ. ಆದರೆ ದೇಶದಲ್ಲಿ ಅತಿ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿರುವ ವ್ಯಕ್ತಿ ಇವರು ಯಾರೂ ಅಲ್ಲ.


ಭಾರತದಲ್ಲಿ ಐಷಾರಾಮಿ ಕಾರುಗಳನ್ನು ಹೊಂದಿರುವ ಹಲವಾರು ಬಿಲಿಯನೇರ್‌ಗಳಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ, ಶಿವ ನಾಡಾರ್ ಮೊದಲಾದವರು ಹಲವು ಐಷಾರಾಮಿ ಕಾರುಗಳ ಒಡೆತನ ಹೊಂದಿದ್ದಾರೆ. ಆದರೆ ದೇಶದಲ್ಲಿ ಅತಿ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿರುವ ವ್ಯಕ್ತಿ ಇವರು ಯಾರೂ ಅಲ್ಲ. ಬದಲಿಗೆ ಯೋಹಾನ್ ಪೂನಾವಾಲಾ 100 ಕೋಟಿ ರೂ. ಮೌಲ್ಯದ ಹಲವು ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ. ಯೋಹಾನ್ ಪೂನಾವಾಲಾ ನಿಸ್ಸಂದೇಹವಾಗಿ ಭಾರತದ ಅತಿದೊಡ್ಡ ಕಾರು ಸಂಗ್ರಾಹಕರಲ್ಲಿ ಒಬ್ಬರು. ಈ ಬಿಲಿಯನೇರ್ ಕಾರು ಸಂಗ್ರಹವು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ. 

ಇತ್ತೀಚೆಗೆ ದೋಹಾದಲ್ಲಿ ನಡೆದ ಜಿನೀವಾ ಮೋಟಾರ್ ಶೋನಲ್ಲಿ ಯೋಹಾನ್‌ ಎಲ್ಲರ ಗಮನ ಸೆಳೆದಿದ್ದಾರೆ. ಹೆಸರೇ ಸೂಚಿಸುವಂತೆ, ಯೋಹಾನ್ ಪೂನಾವಾಲಾ ಕುಟುಂಬದ ಸದಸ್ಯರಾಗಿದ್ದಾರೆ, ಇದು ಭಾರತದ ಶ್ರೀಮಂತ ಕುಟುಂಬಗಳಲ್ಲಿ (Richest Family) ಒಂದಾಗಿದೆ. ಪೂನಾವಾಲಾ ಕುಟುಂಬವು ಅಡಾರ್ ಪೂನವಾಲಾ ಅವರ ಹಿರಿಯ ಸೋದರಸಂಬಂಧಿ ಯೋಹಾನ್ ಪೂನಾವಾಲಾ ಅವರು ತಮ್ಮ ವಿದೇಶಿ ಖರೀದಿಗಳಿಂದ ಹಲವಾರು ಬಾರಿ ಸುದ್ದಿಯಾಗಿದ್ದಾರೆ. 1966 ರಲ್ಲಿ ತನ್ನ ಸಹೋದರ ಸೈರಸ್ ಪೂನವಾಲಾ ಜೊತೆಗೆ ಬಯೋಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸಹ-ಸ್ಥಾಪಿಸಿದ ಜವರಾಯ್ ಪೂನವಾಲಾ ಅವರ ಪುತ್ರ ಯೋಹಾನ್ ಪೂನಾವಲಾ. ಬಿಲಿಯನೇರ್ ಖಾಸಗಿ ಹೆಲಿಕಾಪ್ಟರ್‌ಗಳನ್ನು ಸಹ ಹೊಂದಿದ್ದಾರೆ.

Tap to resize

Latest Videos

ಬಿಲಿಯನೇರ್‌ ಆದ್ರೂ ಭಾರತದ ಅತೀ ದೊಡ್ಡ ದಾನಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಅಲ್ಲ..ಮತ್ಯಾರು?

ಯೋಹಾನ್ ಪೂನಾವಾಲಾಗೆ ಕಾಸ್ಟ್ಲೀ ಕಾರುಗಳ ಮೇಲೆ ಕ್ರೇಜ್
1931ರ ಚೇವಿಯೊಂದಿಗೆ ಯೋಹಾನ್ ಪೂನಾವಾಲಾ ಅವರಿಗೆ ಕಾರುಗಳ ಮೇಲೆ ಕ್ರೇಜ್ ಆರಂಭವಾಯಿತು.ಬಿಲಿಯನೇರ್ ಈಗ ವಿವಿಧ ರೀತಿಯ ಕಾರುಗಳನ್ನು ಹೊಂದಿದ್ದಾರೆ ಮತ್ತು ಅವುಗಳಲ್ಲಿ ಕೆಲವು ಭಾರತದಂತಹ ದೇಶದಲ್ಲಿ ಸಾಕಷ್ಟು ಅಪರೂಪವಾಗಿರುವ ಕಾರುಗಳಾಗಿವೆ. ಯೋಹಾನ್ ಪೂನಾವಾಲಾ ಒಡೆತನದ ಕಾಸ್ಟ್ಲೀ ಕಾರುಗಳಲ್ಲಿ ಬೆಂಟ್ಲಿ ಬೆಂಟೈಗಾ, ಲ್ಯಾಂಡ್ ರೋವರ್ ಡಿಫೆಂಡರ್, ಫೆರಾರಿ 488 ಪಿಸ್ತಾ ಸ್ಪೈಡರ್, ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಗಲ್ಲಾರ್ಡೊ ಸೇರಿವೆ.

ಯೋಹಾನ್ ಪೂನಾವಾಲಾ, ಪೂನಾವಾಲಾ ಇಂಜಿನಿಯರಿಂಗ್ ಗ್ರೂಪ್ ಮತ್ತು ಎಲ್-ಒ-ಮ್ಯಾಟಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್‌ನಲ್ಲಿ ಷೇರುದಾರರೂ (Share holder) ಆಗಿದ್ದಾರೆ. ಲಿಮಿಟೆಡ್ ಮತ್ತು ಪೂನಾವಾಲಾ ಫೈನಾನ್ಶಿಯಲ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರು. ಇದಲ್ಲದೆ, ಅವರು ಪೂನಾವಾಲಾ ಸ್ಟಡ್ ಫಾರ್ಮ್ಸ್ ಮತ್ತು ಪೂನಾವಾಲಾ ರೇಸಿಂಗ್ ಮತ್ತು ಬ್ರೀಡಿಂಗ್‌ನ ನಿರ್ದೇಶಕರೂ (Director) ಆಗಿದ್ದಾರೆ. ಕುದುರೆ ಓಟದ ಸಮುದಾಯದಲ್ಲಿ ಯೋಹಾನ್ ಹೆಸರು ಹೆಚ್ಚು ಕೇಳಿ ಬರುತ್ತದೆ. 

ಆಲೂಗಡ್ಡೆ ಚಿಪ್ಸ್ ಮಾಡಿ ಮಾರುತ್ತಿದ್ದ ವ್ಯಕ್ತಿಯೀಗ ಭರ್ತಿ 4,000 ಕೋಟಿ ಆಸ್ತಿಯ ಮಾಲೀಕ!

ಪೂನಾವಾಲಾ ಸ್ಟಡ್ ಫಾರ್ಮ್ಸ್ ಅನೇಕ ಚಾಂಪಿಯನ್ ಕುದುರೆಗಳನ್ನು ರಫ್ತು ಮಾಡಿದೆ.  USA, ಹಾಂಗ್ ಕಾಂಗ್, ಸಿಂಗಾಪುರ್, ದುಬೈ ಮತ್ತು ಮಲೇಷ್ಯಾದಂತಹ ಅನೇಕ ದೇಶಗಳಲ್ಲಿ ಗೆದ್ದಿದ್ದಾರೆ ಮತ್ತು ಮಾನದಂಡವನ್ನು ಸೃಷ್ಟಿಸಿದ್ದಾರೆ. ಪ್ರಸ್ತುತ, ಪೂನಾವಾಲಾ ಕುಟುಂಬದ ನಿವ್ವಳ ಮೌಲ್ಯವು 27 ಶತಕೋಟಿಗಿಂತ ಹೆಚ್ಚು ಎಂದು ನಂಬಲಾಗಿದೆ.

click me!