ಭಾರತ ಕಂಡ ಕನಸು ನನಸಾಗೋ ಕಾಲ ಸನ್ನಿಹಿತ: ಕಾಂಗ್ರೆಸ್​ 11, ಬಿಜೆಪಿ 4- ಏನಿದು ಲೆಕ್ಕಾಚಾರ?

Published : Jan 17, 2025, 02:34 PM ISTUpdated : Jan 17, 2025, 03:26 PM IST
ಭಾರತ ಕಂಡ ಕನಸು ನನಸಾಗೋ ಕಾಲ ಸನ್ನಿಹಿತ:  ಕಾಂಗ್ರೆಸ್​ 11, ಬಿಜೆಪಿ 4- ಏನಿದು ಲೆಕ್ಕಾಚಾರ?

ಸಾರಾಂಶ

2026ರ ವೇಳೆಗೆ ಭಾರತ ಜಪಾನ್‌ನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6.4ಮತ್ತು 2024ರಲ್ಲಿ ಶೇ.7.7ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷಿಸಲಾಗಿದೆ. ಕೋವಿಡ್ ಸಂಕಷ್ಟದ ನಡುವೆಯೂ ಭಾರತ ಆರ್ಥಿಕತೆ ಸ್ಥಿರವಾಗಿ ಬೆಳೆದಿದೆ. ಆತ್ಮನಿರ್ಭರ ಭಾರತ ಯೋಜನೆ ಯಶಸ್ಸು ಮತ್ತು ರಫ್ತು ವೃದ್ಧಿ ಇದಕ್ಕೆ ಕಾರಣ.

2047ರ ವೇಳೆಗೆ, ಭಾರತ ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಭಾರತವು ಅಭಿವೃದ್ಧಿಶೀಲ ರಾಷ್ಟ್ರ (ವಿಕಸಿತ ಭಾರತ) ಆಗಬೇಕು ಎನ್ನುವ ಕನಸನ್ನು ಹೊತ್ತವರು ಪ್ರಧಾನಿ ನರೇಂದ್ರ ಮೋದಿಯವರು. 2014ರಲ್ಲಿ ಮೊದಲ ಬಾರಿಗೆ ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಆಡಿದ ಮಾತು ಕೂಡ ಇದೇ. ಆಗ ಭಾರತದ ಅರ್ಥವ್ಯವಸ್ಥೆ 11ನೇ ಸ್ಥಾನದಲ್ಲಿತ್ತು. ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ತನ್ನ ಅವಧಿಯನ್ನು ಮುಗಿಸಿದ ಸಂದರ್ಭದಲ್ಲಿ ಭಾರತದ ಅರ್ಥವ್ಯವಸ್ಥೆ ಪ್ರಪಂಚದಲ್ಲಿ 11ನೇ ಸ್ಥಾನದಲ್ಲಿತ್ತು. ಇದನ್ನು ಮೂರನೆಯ ಸ್ಥಾನಕ್ಕೆ ಏರಿಸುವುದೇ ತಮ್ಮ ಗುರಿ ಎಂದಿದ್ದರು ನರೇಂದ್ರ ಮೋದಿ. ಅವರ ಎರಡನೆಯ ಅಧಿಕಾರಾವಧಿಯಲ್ಲಿಯೇ ಭಾರತ ವಿಶ್ವದ 3ನೇ ಅರ್ಥವ್ಯವಸ್ಥೆ ದೇಶವಾಗಿ ಹೊರಹೊಮ್ಮಿದೆ. ಇನ್ನೇನಿದ್ದರೂ ಭಾರತದ ಗುರಿ ಜಪಾನ್​ ಮತ್ತು ಜರ್ಮನಿ. ಸದ್ಯ ಇವೆರಡು ಕ್ರಮವಾಗಿ ಮೂರು ಮತ್ತು ನಾಲ್ಕನೆಯ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿರುವ ಅಮೆರಿಕ ಮತ್ತು ಚೀನಾದ ಅರ್ಥವ್ಯವಸ್ಥೆ ಭಾರತದ ಹಲವಾರು ಪಟ್ಟುಗಳು ಹೆಚ್ಚು ಆಗಿರುವ ಹಿನ್ನೆಲೆಯಲ್ಲಿ, ಅದರ ಸಮೀಪ ಹೋಗುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿರುವ ಮಾತು. ಇದೇ ಕಾರಣದಿಂದ 3ನೇ ಅರ್ಥವ್ಯವಸ್ಥೆಯನ್ನಾಗಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾತು ಕೊಟ್ಟಿದ್ದರು.

ಅದೀಗ ನನಸಾಗುವ ಕಾಲ ಬಂದಿದೆ. ಯುಪಿಎ ಸರ್ಕಾರದ 11ನೇ ಸ್ಥಾನದಲ್ಲಿದ್ದ ಅರ್ಥವ್ಯವಸ್ಥೆ, ಇದೀಗ ಐದನೇ ಸ್ಥಾನಕ್ಕೆ ಏರಿದ್ದು, ಕೆಲವೇ ತಿಂಗಳುಗಳಲ್ಲಿ ಜರ್ಮನಿಯ ಅರ್ಥವ್ಯವಸ್ಥೆಯನ್ನು ಹಿಂದಕ್ಕೆ ಹಾಕಿ ನಾಲ್ಕನೇ ಸ್ಥಾನವನ್ನು ಏರುವ ಕನಸು ನನಸಾಗುತ್ತಿದೆ. ಭಾರತದ ಆರ್ಥಿಕತೆಯು 2026 ರ ವೇಳೆಗೆ ಜಪಾನ್ ಅನ್ನು ಮೀರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಂಸ್ಥೆ PHDCCI ಇಂದು ಅಂಕಿ ಅಂಶಗಳ ಮೂಲಕ ತಿಳಿಸಿದೆ. ಮಾರ್ಚ್‌ಗೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ GDP ಶೇ. 6.8 ಮತ್ತು  26 ರಲ್ಲಿ ಶೇ. 7.7 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅದು ಅಂದಾಜಿಸಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಸ್ಥಿರವಾಗಿ ಬೆಳೆಯುತ್ತಿರುವುದರಿಂದ, 2026 ರ ವೇಳೆಗೆ ಜಪಾನ್ ಅನ್ನು ಮೀರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು PHD ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಹೇಮಂತ್ ಜೈನ್ ಹೇಳಿದ್ದಾರೆ.

ಆಧಾರ್​ ಕಾರ್ಡ್​ನಿಂದ 50 ಸಾವಿರ ಶ್ಯೂರಿಟಿ ರಹಿತ ಸಾಲ- ಏನಿದು ಪಿಎಂ ಸ್ವನಿಧಿ ಯೋಜನೆ? ಡಿಟೇಲ್ಸ್​ ಇಲ್ಲಿದೆ


ಜಾಗತಿಕ ಏರಿಳಿತ ಮತ್ತು ಸವಾಲುಗಳ ಹಿನ್ನೆಲೆಯಲ್ಲಿ ಭಾರತೀಯ ಆರ್ಥಿಕತೆಯು ಸ್ಥಿತಿಸ್ಥಾಪಕತ್ವದ ಸಂಕೇತವಾಗಿ ನಿಂತಿದೆ.  ವಿಶ್ವದ ಹಲವು ಪ್ರಮುಖ ಆರ್ಥಿಕತೆಗಳು ನಿಧಾನಗತಿಯ ಬೆಳವಣಿಗೆಯೊಂದಿಗೆ ಹೋರಾಡುತ್ತಿರುವಾಗ, ಭಾರತವು ಗಮನಾರ್ಹ ಪ್ರಗತಿಯನ್ನು ಪ್ರದರ್ಶಿಸಿದೆ. ಕೋವಿಡ್​ ಸಮಯದಲ್ಲಿ ಇಡೀ ವಿಶ್ವವೇ ತಲ್ಲಣಗೊಂಡಿದ್ದರೂ, ವಿಶ್ವದ ಅರ್ಥವ್ಯವಸ್ಥೆ ಏರುಪೇರಾಗಿದ್ದರೂ ಅಂಥ ಭಯಾನಕ ಸ್ಥಿತಿಯಲ್ಲಿಯೂ ಭಾರತ ಸಮತೋಲನ ಕಾಪಾಡಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಹಿಮ್ಮೆಟ್ಟಿ, ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಈ ಕಾರ್ಯ ಸಾಧ್ಯವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಕ್ಷಣಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತವು ಆತ್ಮನಿರ್ಭರ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿರುವುದು ಇದಕ್ಕೆ ಪ್ರಮುಖ ಕಾರಣ. ವಿಭಿನ್ನ ಕ್ಷೇತ್ರಗಳಲ್ಲಿ ಆಮದು ಪ್ರಮಾಣವನ್ನು ಕಡಿಮೆ  ಮಾಡಿ ರಫ್ತು ಪ್ರಮಾಣ ಹೆಚ್ಚಿಸಲಾಗಿದೆ. ಮೊಬೈಲ್​ ಫೋನ್​ ಸೇರಿದಂತೆ ಹಲವು ವಿಭಾಗಗಳಲ್ಲಿ ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಸಾಮಗ್ರಿಗಳನ್ನು ರಫ್ತು ಮಾಡುವ ಮಟ್ಟಿಗೆ ಭಾರತ ಬೆಳೆದು ನಿಂತಿದೆ. ಈ ಎಲ್ಲಾ ಹಿನ್ನೆಲೆಗಳಲ್ಲಿ ಭಾರತದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ವಿಕಸಿತ ಭಾರತದ ಕನಸು ನನಸಾಗುವ ಜೊತೆಗೆ, ಸದ್ಯ ಭಾರತದ ಅರ್ಥವ್ಯವಸ್ಥೆಯಲ್ಲಿ ಏರುಗತಿ ಆಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ತರಿಗೆದಾರರಿಗೆ ಗುಡ್ ನ್ಯೂಸ್, ಆರೋಗ್ಯ ಕ್ಷೇತ್ರಕ್ಕೂ ಬಂಪರ್, ಫೆ.1ರ ಕೇಂದ್ರ ಬಜೆಟ್ ನಿರೀಕ್ಷೆ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

New year investment plan: ಈ ವರ್ಷ ಖರ್ಚು ಕಡಿಮೆ ಮಾಡಿ, ತಿಂಗಳಿಗೆ ಇಷ್ಟು ಹಣ ಉಳಿಸಿ, ಭವಿಷ್ಯದಲ್ಲಿ ಕೋಟಿ ನಿಧಿ ನಿಮ್ಮ ಕೈಗೆ!
2025ರಲ್ಲಿ ಸಂಪತ್ತು ಡಬಲ್‌ ಮಾಡಿದ ಟಾಪ್‌-10 ಷೇರುಗಳು, ಇದರಲ್ಲಿ ನಿಮ್ಮ ಹೂಡಿಕೆ ಇದ್ಯಾ?