ಡೆಡ್‌ಲೈನ್‌ ನಂತರ ರಿಟರ್ನ್‌ ಫೈಲ್‌ ಮಾಡಿದ್ರೂ ಇನ್ನು ಸಿಗುತ್ತೆ ಐಟಿ ರೀಫಂಡ್‌, ಬದಲಾವಣೆಗೆ ಮುಂದಾದ ಕೇಂದ್ರ!

Published : Jun 16, 2025, 03:34 PM IST
IT Returns

ಸಾರಾಂಶ

ಡೆಡ್‌ಲೈನ್‌ ನಂತರ ತೆರಿಗೆದಾರರು ತಮ್ಮ ರಿಟರ್ನ್ಸ್ ಸಲ್ಲಿಸಿದರೆ ಮರುಪಾವತಿಯನ್ನು ನಿರಾಕರಿಸುವ ವಿವಾದಾತ್ಮಕ ನಿಬಂಧನೆ ಈವರೆಗೂ ಜಾರಿಯಲ್ಲಿದೆ ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ನವದೆಹಲಿ (ಜೂ.16): ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆ 2025 ರಲ್ಲಿ ಮರುಪಾವತಿ ನಿಬಂಧನೆಯನ್ನು ತಿದ್ದುಪಡಿ ಮಾಡಲು ಸಜ್ಜಾಗಿದ್ದು, ಇದು ತೆರಿಗೆದಾರರಿಗೆ ದೊಡ್ಡ ಮಟ್ಟದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಈ ಬಗ್ಗೆ ಬ್ಯುಸಿನೆಸ್‌ ಸ್ಟ್ಯಾಂಡರ್ಡ್‌ ವೆಬ್‌ಸೈಟ್‌ ವರದಿ ಮಾಡಿದೆ. ಡೆಡ್‌ಲೈನ್‌ ನಂತರ ತೆರಿಗೆದಾರರು ತಮ್ಮ ರಿಟರ್ನ್ಸ್ ಸಲ್ಲಿಸಿದರೆ ಮರುಪಾವತಿಯನ್ನು ನಿರಾಕರಿಸುವ ವಿವಾದಾತ್ಮಕ ನಿಬಂಧನೆ ಈವರೆಗೂ ಜಾರಿಯಲ್ಲಿದೆ ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೆ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೊಸ ಐಟಿ ಮಸೂದೆಯ ಸೆಕ್ಷನ್ 433 ರ ಪ್ರಕಾರ, ತಡವಾಗಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ರಿಟರ್ನ್ ಸಲ್ಲಿಸುವ ಮೂಲಕ ಮರುಪಾವತಿಯನ್ನು ಪಡೆಯಬಹುದು. ಆದರೆ, ಈಗಿರುವ ಮಸೂದೆಯ ಸೆಕ್ಷನ್ 263 (1)(a)(ix) ಮೇಲೆ ತಿಳಿಸಿದ ನಿಬಂಧನೆಗೆ ವಿರುದ್ಧವಾಗಿದ್ದು, ಗಡುವಿನ ದಿನ ಅಥವಾ ಮೊದಲು ರಿಟರ್ನ್ ಸಲ್ಲಿಸಬೇಕು. ಅಂಥ ಅರ್ಜಿಗಳನ್ನು ಮಾತ್ರವೇ ರಿಟರ್ನ್ಸ್‌ಗೆ ಪರಿಗಣಿಸಲಾಗುವುದು ಎಂದಿದೆ.

ಹೊಸ ಐಟಿ ಮಸೂದೆ 2025 ಅನ್ನು ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದರು. ಮಸೂದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸಲಾಗಿದೆ. ಮುಂಗಾರು ಅಧಿವೇಶನದ ಮೊದಲ ದಿನದಂದು ಸಮಿತಿಯು ತನ್ನ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಹೊಸ ಐಟಿ ಕಾಯ್ದೆಯಲ್ಲಿ "ಭಾಷೆಯ ಸರಳೀಕರಣ" ಹೊರತುಪಡಿಸಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಸಮಿತಿ ಸೂಚಿಸದಿರಬಹುದು ಎಂದು ವರದಿ ಮಾಡಿತ್ತು. ಉನ್ನತ ಮೂಲವನ್ನು ಉಲ್ಲೇಖಿಸಿ ವರದಿಯು, ಸಮಿತಿಯ ಶಿಫಾರಸುಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ ಎಂದು ಹೇಳಿದೆ.ಈ ಮಸೂದೆಯು 1961 ರ ಆದಾಯ ತೆರಿಗೆ ಕಾಯ್ದೆಯನ್ನು ರದ್ದುಗೊಳಿಸಿ ಅದನ್ನು ಸರಳೀಕೃತ ಆವೃತ್ತಿಯೊಂದಿಗೆ ಬದಲಾಯಿಸಲು ಪ್ರಯತ್ನಿಸುತ್ತದೆ. ಹೊಸ ಕಾನೂನು ಅಂಗೀಕಾರವಾದರೆ, ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!