ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 63ನೇ ಸ್ಥಾನ!

By Web Desk  |  First Published Oct 24, 2019, 2:46 PM IST

ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 63ನೇ ಸ್ಥಾನ| ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ದೇಶಗಳ ಪಟ್ಟಿ|  ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ 14 ಸ್ಥಾನಗಳ ಏರಿಕೆ ಕಂಡ ಭಾರತ| ಮೋದಿ ಸರ್ಕಾರದ ಸುಧಾರಣಾ ಕ್ರಮಗಳಿಂದಾಗಿ ಉತ್ತಮ ಸ್ಥಾನದಲ್ಲಿ ಭಾರತ| ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ| ಭಾರತದ ಅರ್ಥ ವ್ಯವಸ್ಥೆ ಕುರಿತು ಮೂಡಿದ ಹೊಸ ಆಶಾವಾದ| 


ವಾಷಿಂಗ್ಟನ್(ಅ.24): ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನಗಳ ಏರಿಕೆ ಕಂಡು 63ನೇ ಸ್ಥಾನಕ್ಕೆ ಏರಿದೆ.

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. 

Tap to resize

Latest Videos

undefined

ಮೋದಿ ಆರ್ಥಿಕತೆಗೆ ವಿಶ್ವ ಬ್ಯಾಂಕ್ ಭೇಷ್

ಈ ಹಿನ್ನೆಲೆಯಲ್ಲಿ ಸುಲಭವಾಗಿ ಉದ್ಯಮ ನಡೆಸಬಹುದಾದ ದೇಶಗಳ  ಪ್ರಮುಖ 10 ದೇಶಗಳ ಪಟ್ಟಿಯಲ್ಲಿ ಕೂಡ ಸತತ ಮೂರನೇ ಬಾರಿಗೆ ಭಾರತ ಸ್ಥಾನ ಭದ್ರಪಡಿಸಿಕೊಂಡಿದೆ. 

2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಶ್ವದ ಉದ್ಯಮ ಸ್ನೇಹಿ 190 ದೇಶಗಳ ಪೈಕಿ ಭಾರತ 142ನೇ ಸ್ಥಾನದಲ್ಲಿತ್ತು.

ಕೇಂದ್ರದ ಮುಂದಿದೆ 200ಕ್ಕೂ ಹೆಚ್ಚು ಸುಧಾರಣಾ ಕ್ರಮಗಳ ಯೋಜನೆ

ಸರ್ಕಾರ ತೆಗೆದುಕೊಂಡ ಹಲವು ಸುಧಾರಣಾ ಕ್ರಮಗಳಿಂದಾಗಿ ಕಳೆದ ವರ್ಷ ಭಾರತ 100ನೇ ಸ್ಥಾನಕ್ಕೇರಿತ್ತು. ಇದೀಗ 63ನೇ ಸ್ಥಾನದಲ್ಲಿದ್ದು, ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ.

ಭಾರತ ದೇಶದ ಆರ್ಥಿಕತೆ ಕುಸಿಯುತ್ತಿರುವ ಆತಂಕದ ನಡುವೆಯೇ ವಿಶ್ವಬ್ಯಾಂಕ್  ರ್ಯಾಂಕಿಂಗ್ ಪಟ್ಟಿ ಹೊರಬಿದ್ದಿರುವುದು ಭಾರತದ ಅರ್ಥ ವ್ಯವಸ್ಥೆ ಕುರಿತು ಹೊಸ ಆಶಾವಾದ ಮೂಡಿಸಿದೆ.

'ಎಕಾನಮಿ ಡಬಲ್ ಮಾಡ್ತಿನಿ, ಮೋದಿ ಯಾರೆಂದು ತೋರಿಸ್ತಿನಿ'!

 ಅಕ್ಟೋಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!