ಕಳೆದ 10 ವರ್ಷದಲ್ಲಿ ಜಿಡಿಪಿ ಡಬಲ್ IMF ವರದಿ, 3 ತಿಂಗಳಲ್ಲಿ ಜಪಾನ್ ಹಿಂದಿಕ್ಕಿಲಿದೆ ಭಾರತ

ಕಳೆದ 10 ವರ್ಷದಲ್ಲಿ ಭಾರತ ಆರ್ಥಿಕತೆ ಡಬಲ್ ಆಗಿದೆ. ಬರೋಬ್ಬರಿ ಶೇಕಜಾ 105ರಷ್ಟು ಏರಿಕೆ ಕಂಡಿದೆ. IMF ವರದಿ ಬಿಡುಗಡೆ ಮಾಡಿದ್ದು, ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದೆ. ಇನ್ನು 3 ತಿಂಗಳಲ್ಲಿ ಭಾರತದ ಆರ್ಥಿಕತೆ ಜಪಾನ್ ಹಿಂದಿಕ್ಕಲಿದೆ. ಇಷ್ಟೇ ಅಲ್ಲ 2027ರಲ್ಲಿ 3ನೇ ಸ್ಥಾನಕ್ಕೇರಲಿದೆ. IMF ನೀಡಿದ ವರದಿಯಲ್ಲಿ ಏನಿದೆ?

India GDP doubled in last 10 years surpass Japan by FY25 and 3rd largest by 2027 says IMF

ನವದೆಹಲಿ(ಮಾ.26) ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರಿಸುಮಾರು 11 ವರ್ಷದಿಂದ ಭಾರತದಲ್ಲಿ ಆಡಳಿತ ನಡೆಸುತ್ತಿದೆ. ಹಲವು ಬಾರಿ ಕೇಂದ್ರ ಸರ್ಕಾರ ಭಾರತದ 3ನೇ ಅತೀದೊಡ್ಡ ಆರ್ಥಿಕತೆಯಾಗಲಿದೆ ಎಂದಿದೆ. ಮೋದಿ ಸರ್ಕಾರದ ಗುರಿಯಂತೆ ಇದೀಗ ಭಾರತದ ಆರ್ಥಿಕತೆ ಹಲವು ದಾಖಲೆ ಬರೆಯಲು ಸಜ್ಜಾಗಿದೆ. ಇಂಟರ್ನ್ಯಾಷನಲ್ ಮಾನಿಟರ್ ಫಂಡ್(IMF) ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆಯ ಸ್ಪಷ್ಟ ಚಿತ್ರಣ ನೀಡಿದೆ. ಭಾರತದ ಜಿಡಿಪಿ ಕಳೆದ 10 ವರ್ಷದಲ್ಲಿ ಶೇಕಡಾ 105ರಷ್ಟು ಹೆಚ್ಚಾಗಿದೆ. ವಿಶ್ವದ 5ನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಭಾರತ ಇನ್ನೂ ಮೂರೇ ತಿಂಗಳಲ್ಲಿ ಜಪಾನ್ ಹಿಂದಿಕ್ಕಲಿದೆ ಎಂದು IMF ವರದಿ ನೀಡಿದೆ. 

IMF ವರದಿಯಲ್ಲಿ ಏನಿದೆ?
IMF ನೀಡಿದ ವರದಿ ಪ್ರಕಾರ ಭಾರತದ ಜಿಡಿಪಿ ಇದೀಗ 4.3 ಟ್ರಿಲಿಯನ್ ಅಮೆರಿಕನ್ ಡಾಲರ್. ಈ ಮೂಲಕ ಅಮೆರಿಕ, ಚೀನಾ, ಜರ್ಮನಿ ಹಾಗೂ ಜಪಾನ್ ನಂತರದ ಸ್ಥಾನದಲ್ಲಿದೆ. ಭಾರತದ ಜಿಡಿಪಿ ಬೆಳವಣಿಗೆ ಕುರಿತು IMF ಅತೀವ ವಿಶ್ವಾಸ ಹಾಗೂ ಭರವಸೆ ವ್ಯಕ್ತಪಡಿಸಿದೆ. 2025 ಆರ್ಥಿಕ ವರ್ಷದ ಮೂರನೇ ಕ್ವಾರ್ಟರ್ ಅಂದರೆ ಜೂನ್ ತಿಂಗಳ ವೇಳೆಗೆ ಭಾರತ ನಾಲ್ಕನೇ ಸ್ಥಾನದಲ್ಲಿರುವ ಜಪಾನ್ ಹಿಂದಿಕ್ಕಲಿದೆ ಎಂದು IMF ವರದಿ ಹೇಳಿದೆ.

Latest Videos

ಫೆಬ್ರವರಿ ಹಣದುಬ್ಬರ, ಇಡೀ ದೇಶದಲ್ಲಿ ಕರ್ನಾಟಕ ನಂ.3!

2027ರ ವೇಳೆಗೆ ಭಾರತ 3ನೇ ಸ್ಥಾನದಲ್ಲಿರುವ ಜರ್ಮನಿಯನ್ನು ಹಿಂದಿಕ್ಕಲಿದೆ ಎಂದು IMF ವರದಿ ಹೇಳುತ್ತಿದೆ. ಅಮೆರಿಕ, ಚೀನಾ, ಜರ್ಮನಿ ಹಾಗೂ ಜಪಾನ್ ಜಿಡಿಪಿ ಬೆಳವಣಿಗೆಯಾಗುತ್ತಿದೆ. ಆದರೆ ಭಾರತದ ಜಿಡಿಪಿ ಬೆಳವಣಿಗೆ ಈ ನಾಲ್ಕು ರಾಷ್ಟ್ರಗಳಿಂದ ವೇಗವಾಗಿ ಪ್ರಗತಿಯಾಗುತ್ತಿದೆ ಎಂದು IMF ವರದಿ ಹೇಳುತ್ತಿದೆ. ಹೀಗಾಗಿ 2027ರ ವೇಳೆಗೆ ಭಾರತ ವಿಶ್ವದ 3ನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ವರದಿ ಹೇಳಿದೆ.

ಕಳೆದ 10ವ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ

ಕಳೆದ 10 ವರ್ಷದಲ್ಲಿ ಭಾರತದ ಜಿಡಿಪಿ ಶೇಕಡಾ 105ರಷ್ಟು ಏರಿಕೆಯಾಗಿದ್ದರೆ, ಅಮೆರಿಕಾ ಜಿಡಿಪಿ ಶೇಕಡಾ 66, ಚೀನಾ ಜಿಡಿಪಿ ಶೇಕಡಾ 44 ರಷ್ಟು ಏರಿಕೆಯಾಗಿದೆ. ಇನ್ನು ಜರ್ಮನಿ, ಜಪಾನ್, ಫ್ರಾನ್ಸ್, ಯುಕೆ ಸೇರಿದಂತೆ ಹಲವು ರಾಷ್ಟ್ರಗಳ ಜಿಡಿಪಿ ಪ್ರಹತಿ ಶೇಕಡಾ 30ಕ್ಕಿಂತ ಕಡಿಮೆ ಇದೆ.  ಸದ್ಯ ಭಾರತದ ಜಿಡಿಪಿ 4.3 ಟ್ರಿಲಿಯನ್ ಅಮೆರಿಕನ್ ಡಾಲರ್, ನಾಲ್ಕನೇ ಸ್ಥಾನದಲ್ಲಿರುವ ಜಪಾನ್ ಜಿಡಿಪಿ 4.4 ಟ್ರಿಲಿಯನ್ ಅಮೆರಿಕನ್ ಡಾಲರ್, ಇನ್ನು ಜರ್ಮನಿ ಜಿಡಿಪಿ 4.9 ಟ್ರಿಲಿಯನ್ ಅಮೆರಿಕನ್ ಡಾಲರ್. 

ಭಾರತ 1 ಟ್ರಿಲಿಯನ್ ಜಿಡಿಪಿ ತಲಪಲು ಬರೋಬ್ಬರಿ 60 ವರ್ಷ ಸಮಯ ತೆಗೆದುಕೊಂಡಿತ್ತು. 2007ರಲ್ಲಿ ಭಾರತ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿ ತಲುಪಿತ್ತು. ಆರಂಭಿಕ 60 ವರ್ಷ ಭಾರತದ ಹಲವು ಸವಾಲು ಎದುರಿಸಿತ್ತು. ಸ್ವಾತಂತ್ರ್ಯ, ಬಡತನ, ಸಾಂಕ್ರಾಮಿಕ ರೋಗ, ಮೂಲಭೂತ ಸೌಲಭ್ಯ ಕೊರತೆ ಸೇರಿದಂತೆ ಹಲವು ಸವಾಲುಗಳ ನಡುವೆ ಜಿಡಿಪಿ ಮಂದಗತಿಯಲ್ಲಿ ಸಾಗಿತ್ತು. ಬಳಿಕ 2007ರಿಂದ 2014ರ ವೇಳೆಗೆ ಭಾರತ 2 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಗೆ ತಲುಪಿತ್ತು. ಆದರೆ 2014ರಿಂದ 2025ರ ನಡುವೆ ಇಡೀ ವಿಶ್ವವೇ ಕೋವಿಡ್ ಸುಳಿಗೆ ಸಿಲುಕಿತ್ತು. ಈ ವೇಳೆ ಇತರ ಎಲ್ಲಾ ದೇಶದ ಆರ್ಥಿಕತೆ ಕುಂಠಿತವಾಗಿತ್ತು. ಆದರೆ ಭಾರತ 2021ರ ವೇಳೆ 3 ಟ್ರಿಲಿಯನ್ ಆರ್ಥಿಕತೆ ತಲುಪಿತ್ತು. 3 ರಿಂದ 4 ಟ್ರಿಲಿಯನ್ ಪೂರೈಸಲು ಭಾರತ ಕೇವಲ 4 ವರ್ಷ ಮಾತ್ರ ತೆಗೆದುಕೊಂಡಿದೆ. ಇದೇ ವೇಗದಲ್ಲಿ ಸಾಗಿದರೆ ಭಾರತ 1.5 ವರ್ಷದಲ್ಲಿ 1 ಟ್ರಿಲಿಯನ್ ಪ್ರಗತಿ ಸಾಧಿಸಲಿದೆ ಎಂದು IMF ಹೇಳಿದೆ.

ದೇಶದಲ್ಲಿಯೇ ಗರಿಷ್ಠ ಸಾಲ ಹೊಂದಿರುವ 10 ರಾಜ್ಯಗಳ ಪಟ್ಟಿ ನೀಡಿದ ಆರ್‌ಬಿಐ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
 

vuukle one pixel image
click me!