ನಾಳೆಯಿಂದ LPG ಮತ್ತು ರೇಷನ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆಗಳು 

ನಾಳೆಯಿಂದ LPG ಮತ್ತು ರೇಷನ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ. ಬದಲಾಗುತ್ತಿರುವ ನಿಯಮಗಳು ನೇರವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ.

Significant changes in LPG and ration cards from tomorrow mrq

ನವದೆಹಲಿ: ನಾಳೆಯಿಂದ ಎಲ್‌ಪಿಜಿ ಮತ್ತು ರೇಷನ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ. ಸರ್ಕಾರದ ಈ ಹೊಸ ನಿಯಮಗಳು ನೇರವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ. ಹಾಗಾಗಿ ಜನರು ಬದಲಾಗುತ್ತಿರುವ ನಿಯಮಗಳನ್ನು ತಿಳಿದುಕೊಂಡು ಅಪ್‌ಡೇಟ್ ಮಾಡಿಕೊಳ್ಳಬೇಕು. ಈ ನಿಯಮಗಳ ಬದಲಾವಣೆ ಸುರಕ್ಷೆ ಮತ್ತು ಪಾರದರ್ಶಕತೆಯನ್ನು ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಲೇಖನದಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಮತ್ತು ರೇಷನ್ ಕಾರ್ಡ್‌ ಹೊಸ ನಿಯಮಗಳು ಏನು ಎಂಬುದನ್ನು ನೋಡೋಣ ಬನ್ನಿ .

ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಬದಲಾವಣೆಗಳು
1.ಡಿಜಿಟಲ್ ರೇಷನ್ ಕಾರ್ಡ್: 

ಇದೀಗ ಎಲ್ಲಾ ರೇಷನ್ ಕಾರ್ಡ್‌ಗಳನ್ನು ಡಿಜಿಟಲ್ ಫಾರ್ಮೆಟ್‌ನಲ್ಲಿ (Digital Format)  ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಿಸೋದು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

Latest Videos

2.ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ
ಈ ಯೋಜನೆಯನ್ನು ವಲಸೆ ಕಾರ್ಮಿಕರಿಗಾಗಿಯೇ ತರಲಾಗಿದೆ. ಈ ಯೋಜನೆಯಡಿ ಕಾರ್ಡ್ ಡಿಜಟಲೀಕರಣ ಮಾಡಿಕೊಂಡ್ರೆ ದೇಶದ ಯಾವುದೇ ಭಾಗದಲ್ಲಿ ಅರ್ಹ ಫಲಾನುಭವಿಗಳು ಪಡಿತರವನ್ನು ತೆಗೆದುಕೊಳ್ಳಬಹುದಾಗಿದೆ. 

3.ಇ-ಕೆವೈಸಿ ಮತ್ತು ಬಯೋಮೆಟ್ರಿಕ್ ವೆರಿಫಿಕೇಷನ್ ಕಡ್ಡಾಯ 
ಅರ್ಹ ಫಲಾನುಭವಿಗಳ ಗುರುತಿಗಾಗಿ ಇ-ಕೆವೈಸಿ (E-KYC) ಮತ್ತು ಬಯೋಮೆಟ್ರಿಕ್ ವೆರಿಫಿಕೇಷನ್ (Bio metric Verification) ಕಡ್ಡಾಯವಾಗಿದೆ. ಇದರಿಂದ ನಕಲಿ ಪಡಿತರ ಚೀಟಿಗಳನ್ನು ನಿಯಂತ್ರಿಸಲು ಆಗುತ್ತದೆ. 

ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದ ನಿಯಮಗಳು 
1.ಕೆವೈಸಿ ಮತ್ತು ಆಧಾರ್‌-ಮೊಬೈಲ್ ಲಿಂಕಿಂಗ್

ಈಗ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಬೇಕಾದ್ರೆ ಕೆವೈಸಿ ಕಡ್ಡಾಯವಾಗಿ ಮಾಡಿಕೊಂಡಿರಬೇಕಾಗುತ್ತದೆ. ಹಾಗೆ ಆಧಾರ್ ಸಂಖ್ಯೆಯನ್ನು ಮೊಬೈಲ್ ನಂಬರ್‌ಗೆ ಲಿಂಕ್ ಮಾಡಬೇಕಾಗುತ್ತದೆ.

2.ಓಟಿಪಿ ವೇರಿಫಿಕೇಷನ್
ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಈಗ ಓಟಿಪಿ ವೇರಿಫಿಕೇಷನ್ (OTP Verification) ಕಡ್ಡಾಯವಾಗಲಿದೆ. ಇದರಿಂದ ನಕಲಿ ಕ್ಲೇಮ್ಸ್ ಮತ್ತು ತಪ್ಪಾದ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ರವಾನೆಯಾಗೋದನ್ನು ತಪ್ಪಿಸಲಾಗುತ್ತದೆ. 

3.ಸಬ್ಸಿಡಿ ಮತ್ತು ಸಿಲಿಂಡರ್ ಲಿಮಿಟ್‌ನಲ್ಲಿ ಬದಲಾವಣೆ ಸಾಧ್ಯತೆ
ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವನ್ನಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮತ್ತೊಂದೆಡೆ ಗ್ರಾಹಕರು ಪಡೆಯುವ ಗ್ಯಾಸ್ ಲಿಮಿಟ್ ಮೇಲೆ ಬದಲಾವಣೆಯಾಗುವ ಸಾಧ್ಯತೆಗಳಿವೆ. 

4.ಸ್ಮಾರ್ಟ್‌ ಚಿಪ್ ಸಿಲಿಂಡರ್
ಸಿಲಿಂಡರ್‌ನಲ್ಲಿ ಸ್ಮಾರ್ಟ್‌ ಚಿಪ್ ಅಳವಡಿಸಲಾಗುವುದು. ಇದರಿಂದ ಅನಿಲದ ಸ್ಥಿತಿ ಮತ್ತು ಟ್ರ್ಯಾಕಿಂಗ್ ಮಾಡಬಹುದು.

ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಗಣಿ ಬೇಕಾದಷ್ಟು ಇದ್ದರೂ ಬೆಲೆ ಏರುತ್ತಿರುವುದೇಕೆ? ಎಲ್ಲೆಲ್ಲ ಚಿನ್ನ ತೆಗೀತಾರೆ?

ಪ್ರಶ್ನೆ 1: ಮಾರ್ಚ್ 27ರಿಂದ ಎಲ್ಲಾ ಪಡಿತರ ಚೀಟಿ ಡಿಜಿಟಲ್‌ ಆಗುತ್ತಾ? 
ಉತ್ತರ: ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಅರ್ಹ ಫಲಾನುಭವಿಗಳಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಎಲ್ಲಾ ಪಡಿತರ ಚೀಟಿಯನ್ನು ಮಾರ್ಚ್ 27ರಿಂದ ಡಿಜಿಟಲೈಸ್ ಮಾಡಲು ಸರ್ಕಾರ ಮುಂದಾಗಿದೆ. 
 
ಪ್ರಶ್ನೆ 2: ಗ್ಯಾಸ್ ಸಿಲಿಂಡರ್‌ಗೆ OTP ಕಡ್ಡಾಯವೇ?
ಉತ್ತರ: OTP ಪರಿಶೀಲಿಸಿದ ನಂತರವೇ  ಎಲ್‌ಪಿಜಿ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ. ಈ ಮೂಲಕ ನಕಲಿ ವಿತರಣೆಯನ್ನು ನಿಯಂತ್ರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. 

ಪ್ರಶ್ನೆ 3: ಪಡಿತರ ಚೀಟಿಗೆ  E-KYC ಕಡ್ಡಾಯವೇ?
ಉತ್ತರ: ಪಡಿತರ ಚೀಟಿ ನಿಯಮಗಳು 2025ರ ಅಡಿಯಲ್ಲಿ ಎಲ್ಲಾ ಫಲಾನುಭವಿಗಳು ತಮ್ಮ ಗುರುತು ಪರಿಶೀಲಿಸಿಕೊಳ್ಳಲು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಎಟಿಎಂನಲ್ಲಿ ಹಣ ಡ್ರಾ ಮಾಡುವುದು ಇನ್ನು ಮುಂದೆ ದುಬಾರಿ: ವಿತ್‌ಡ್ರಾ ಶುಲ್ಕ ಹೆಚ್ಚಳ

tags
vuukle one pixel image
click me!