ದುಬೈನ 2ನೇ ಅತೀ ದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದ ಭಾರತ!

By Suvarna NewsFirst Published Sep 27, 2021, 8:09 PM IST
Highlights
  • ವ್ಯಾಪಾರ ಪಾಲುದಾರಿಕೆಯಲ್ಲಿ ಭಾರತದ ಮಹತ್ವದ ಬೆಳವಣಿಗೆ
  • ದುಬೈ ನ ಎರಡನೇ ಅತೀ ದೊಡ್ಡ ಪಾಲುದಾರನಾದ ಭಾರತ
  • 7,74,15,13,52,590 ಕೋಟಿ ರೂಪಾಯಿ ತಲುಪಿದ ಭಾರತದ ವ್ಯಾಪಾರ ವಹಿವಾಟು

ನವದೆಹಲಿ(ಸೆ.27): ವ್ಯಾಪಾರ ಪಾಲುದಾರಿಕೆಯಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭಾರತವು ದುಬೈನ ಎರಡನೇ ಅತೀದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ. ದುಬೈ ವ್ಯಾಪಾರ ಪಾಲುದಾರಿಕೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಇದೀಗ ಭಾರತ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ದುಬೈ ಜೊತೆ ಭಾರತದ ವ್ಯಾಪಾರ ವಹಿವಾಟು 2021ರ ಮೊದಲಾರ್ಧದಲ್ಲಿ 7,74,15,13,52,590 ಕೋಟಿ ರೂಪಾಯಿ (38.5 ದಿರಾಮ್ ಬಿಲಿಯನ್) ತಲುಪಿದೆ.

ಕೋವಿಡ್‌ ಚಿಕಿತ್ಸೆ ಸಲಕರಣೆ ಲಾಭದ ಮಿತಿ ಶೇ.70ಕ್ಕೆ ನಿಗದಿ!

ದುಬೈ ಸರ್ಕಾರದ ಅಂಕಿ ಅಂಶ ಪ್ರಕಾರ, ಚೀನಾ ಜೊತೆ ದುಬೈ 86.7 ಬಿಲಿಯನ್ ದಿರಾಮ್ ವಹಿವಾಟು ಹೊಂದಿದ್ದರೆ, ನಂತರದ ಸ್ಥಾನದಲ್ಲಿ ಭಾರತ ಹಾಗೂ 3ನೇ ಸ್ಥಾನವನ್ನು ಅಮೆರಿಕ ಅಲಂಕರಿಸಿದೆ. ಇದೀಗ 2021ರ ಮೊದಲಾರ್ಧದಲ್ಲಿ ಭಾರತ  38.5 ದಿರಾಮ್ ಬಿಲಿಯನ್ ವಹಿವಾಟು ನಡೆಸಿದ್ದರೆ, ಕಳೆದ ವರ್ಷ ಒಟ್ಟು  67.1 ಬಿಲಿಯನ್ ದಿರಾಮ್ ವಹಿವಾಟು ನಡೆಸಿದೆ. ವರ್ಷದಲ್ಲಿ ಶೇಕಡಾ 74.5% ರಷ್ಟು ಪ್ರಗತಿ ಸಾಧಿಸಿದೆ.

ಬ್ರೆಕ್ಸಿಟ್‌ ಬಳಿಕದ ವ್ಯಾಪಾರ ಒಪ್ಪಂದಕ್ಕೆ ಬ್ರಿಟನ್‌- ಯುರೋಪ್‌ ಒಕ್ಕೂಟ ಸಮ್ಮತಿ

ವಾರ್ಷಿಕ ಬೆಳವಣಿಗೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ಭಾರತದ ವಾರ್ಷಿಕ ಬೆಳವಣಿಗೆ ಶೇಕಡಾ 74.5% ರಷ್ಟು ಪ್ರಗತಿ ಸಾಧಿಸುತ್ತಿದ್ದರೆ, ಚೀನಾ ವಾರ್ಷಿಕ ಬೆಳವಣಿಗೆ 30.7% ರಷ್ಟು ಬೆಳವಣಿಗೆ ಕಾಣುತ್ತಿದೆ. ಅಮೆರಿಕ 32.7 ಮಿಲಿಯನ್ ದಿರಾಮ್ ವ್ಯಾಪಾರ ವಹಿವಾಟು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಮೆರಿಕ ಶೇಕಡಾ 1 ರಷ್ಟು ಬೆಳವಣಿಗೆಯಾಗಿದೆ.

ದುಬೈ ಜೊತೆಗಿನ ವ್ಯಾಪಾರ ವಹಿವಾಟಿನಲ್ಲಿ ಸೌದಿ ಅರೆಬಿಯಾ 4ನೇ ಸ್ಥಾನದಲ್ಲಿದೆ. 30. 5 ಬಿಲಿಯನ್ ದಿರಾಮ್ ವಹಿವಾಟು ನಡೆಸಿದೆ. ಸ್ವಿಟ್ಜರ್‌ಲ್ಯಾಂಡ್ 24.8 ಬಿಲಿಯನ್ ದಿರಾಮ್ ವಹಿವಾಟಿನೊಂದಿಗೆ 5ನೇ ಸ್ಥಾನದಲ್ಲಿದೆ. ದುಬೈ ವ್ಯಾಪಾರ ವಹಿವಾಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ  30.34% ರಷ್ಟು ಬೆಳವಣಿಗೆಯಾಗಿದೆ. 2020ರಲ್ಲಿ ದುಬೈ 185.06  ಬಿಲಿಯನ್ ದಿರಾಮ್ ವಹಿವಾಟು ನಡೆಸಿದರೆ, ಈ ವರ್ಷ 241.21 ಬಿಲಿಯನ್ ದಿರಾಮ್ ವಹಿವಾಟು ನಡೆಸಿದೆ.

ಭಾರತವಿಲ್ಲದೆ ಆರ್‌ಸಿಇಪಿ ಒಪ್ಪಂದಕ್ಕೆ 15 ದೇಶಗಳ ಸಹಿ!

ದುಬೈ ವ್ಯಾಪಾರ ವಹಿವಾಟಿನಲ್ಲಿ 138.8 ಬಿಲಿಯನ್ ದಿರಾಮ್ ಚಿನ್ನದ ವಹಿವಾಟು ನಡೆದಿದೆ. ನಂತರ ಸ್ಥಾನದಲ್ಲಿ ಟೆಲಿಕಾಂ ಸಲಕರಣೆ ಇದೆ. ಡೈಮಂಡ್ ವ್ಯಾಪಾರ ವಹಿವಾಟಿನಲ್ಲಿ 3ನೇ ಸ್ಥಾನದಲ್ಲಿದೆ. 
 

click me!