ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಮುಚ್ಚಿರಲಿವೆ ಬ್ಯಾಂಕ್, ಈ ದಿನಾಂಕ ನೋಟ್‌ ಮಾಡ್ಕೊಳ್ಳಿ!

By Suvarna NewsFirst Published Sep 26, 2021, 1:46 PM IST
Highlights

* ಸಾಲು ಸಾಲು ಹಬ್ಬಗಳ ಮಧ್ಯೆ  ಅಕ್ಟೋಬರ್‌ನಲ್ಲಿ 14 ದಿನ ಬ್ಯಾಂಕ್ಗಗಳಿಗೆ ರಜೆ

* ಈಗಲೇ ಈ ದಿನಾಂಕಗಳನ್ನು ನೋಟ್‌ ಮಾಡ್ಕೊಳ್ಳಿ

* ಹಬ್ಬದ ಮಧ್ಯೆ ಹಣದ ಕೊರತೆ ಎದುರಾಗದಿರಲಿ

ನವದೆಹಲಿ(ಸೆ.26): ಜನಸಾಮಾನ್ಯರಿಗೆ ಬ್ಯಾಂಕ್‌ನಲ್ಲಿ ಅನೇಕ ಕೆಲಸಗಳಿರುತ್ತವೆ. ವಿಶೇಷವಾಗಿ ಉದ್ಯಮಿಗಳ(Business) ಸಂಪೂರ್ಣ ಕೆಲಸವನ್ನು ಬ್ಯಾಂಕ್(Bank) ಮೂಲಕವೇ ನಡೆಸಲಾಗುತ್ತದೆ. ಒಂದು ದಿನ ಬ್ಯಾಂಕ್ ಮುಚ್ಚಿದ್ದರೂ ಕೋಟಿಗಳ ವ್ಯವಹಾರ ನಿಲ್ಲುತ್ತದೆ.

14 ದಿನ ಮುಚ್ಚಿರಲಿವೆ ಬ್ಯಾಂಕ್

ಆನ್ಲೈನ್ ​​ಬ್ಯಾಂಕಿಂಗ್(Online Banking) ಸೌಲಭ್ಯದ ಇದ್ದರೂ, ಬ್ಯಾಂಕ್ ಮುಚ್ಚಿರುವುದರಿಂದ ಅನೇಕ ಕೆಲಸಗಳು ನಿಲ್ಲುತ್ತವೆ. ಭಾರತೀಯ ರಿಸರ್ವ್ ಬ್ಯಾಂಕಿನ(Reserve Bank Of India) ಮಾರ್ಗಸೂಚಿಗಳ ಪ್ರಕಾರ, ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು(Private bank) ಭಾನುವಾರ ಮುಚ್ಚಿರುತ್ತವೆ. ಅಲ್ಲದೇ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರವೂ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಇವೆಲ್ಲದರ ನಡುವೆ, ಈ ವರ್ಷದಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ (ಹಬ್ಬಗಳು) ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಅದರಲ್ಲೂ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್‌ಗಳು ಅನೇಕ ದಿನಗಳವರೆಗೆ ಮುಚ್ಚಿರಲಿವೆ. ಹೀಗಿರುವಾಗ ಬ್ಯಾಂಕ್‌ಗಳು ಯಾವುಗ ಮುಚ್ಚಿರಲಿವೆ ಎಂಬುವುದನ್ನು ತಪ್ಪದೇ ತಿಳಿದುಕೊಳ್ಳಿ, ಇಲ್ಲವೆಂದಾದರೆ ಹಬ್ಬದ ಸಮಯದಲ್ಲಿ ನೀವು ಹಣದ ಕೊರತೆಯನ್ನು ಎದುರಿಸಬಹುದು.

ಅಕ್ಟೋಬರ್ 2 ಮತ್ತು 3 ರಂದು ಬ್ಯಾಂಕ್ ಬಂದ್

ಎಲ್ಲಾ ಬ್ಯಾಂಕುಗಳು ತಿಂಗಳ 2 ನೇ ಮತ್ತು 4 ನೇ ಶನಿವಾರದಂದು ಮುಚ್ಚಿರುತ್ತವೆ. ಆದರೆ 2 ಅಕ್ಟೋಬರ್ ಮೊದಲ ಶನಿವಾರವಾಗಿದ್ದರೂ ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಅಕ್ಟೋಬರ್ 2 ರಾಷ್ಟ್ರೀಯ ರಜಾದಿನವಾಗಿರುವುದರಿಂದ(National Holiday), ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳು ಈ ದಿನ ರಜೆ ಇರುತ್ತದೆ. ಮತ್ತೊಂದೆಡೆ, ಅಕ್ಟೋಬರ್ 3 ಭಾನುವಾರ ಅಂದು ವಾರದ ರಜೆ ಇದೆ..

ಅಕ್ಟೋಬರ್ 6, 9, 10 ರಂದು ಬ್ಯಾಂಕುಗಳು ಮುಚ್ಚಿರುತ್ತವೆ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ, ಅಕ್ಟೋಬರ್ 6 ರಂದು ಸಾರ್ವಜನಿಕ ರಜಾದಿನವಾಗಿದೆ ಹೀಗಾಗಿ ಬ್ಯಾಂಕುಗಳು ಮುಚ್ಚಿರಲಿವೆ.  ಇನ್ನು ಅಕ್ಟೋಬರ್ 9 ರಂದು ತಿಂಗಳ ಎರಡನೇ ಶನಿವಾರವಾಗಿರುವುದರಿಂದ ದೇಶದಾದ್ಯಂತದ ಬ್ಯಾಂಕುಗಳು ಮುಚ್ಚಿರಲಿವೆ., ಅಕ್ಟೋಬರ್ 10 ರಂದು , ಭಾನುವಾರದ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಅಕ್ಟೋಬರ್ 12, 13, 14, 15 ರಂದೂ ರಜೆ

ಅಕ್ಟೋಬರ್ ಎರಡನೇ ವಾರದಲ್ಲಿ ನವರಾತ್ರಿ ಆರಂಭವಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ, ಕೋಲ್ಕತಾದಲ್ಲಿ ಅಕ್ಟೋಬರ್ 12 ಮತ್ತು 13 ರಂದು ಬ್ಯಾಂಕ್ ರಜೆ ಇರುತ್ತದೆ. ಅಕ್ಟೋಬರ್ 14 ರಂದು ಚೆನ್ನೈನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಕ್ಟೋಬರ್ 15 ರಂದು ದಸರಾ ದಿನದಂದು, ದೇಶಾದ್ಯಂತ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. ಮತ್ತೊಂದೆಡೆ, ಅಕ್ಟೋಬರ್ 17 ರ ಭಾನುವಾರದಂದು, ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ.

ಅಕ್ಟೋಬರ್ 19, 20, 23, 24 ರಂದು ಬ್ಯಾಂಕುಗಳಿಗೆ ಮತ್ತೆ ರಜೆ

ಅಕ್ಟೋಬರ್ 19 ಪ್ರವಾದಿ ಹಜರತ್ ಮುಹಮ್ಮದ್ ಅವರ ಜನ್ಮದಿನವಾಗಿದ್ದು, ಈ ಕಾರಣದಿಂದಾಗಿ ಅನೇಕ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರಲಿವೆ. ಮತ್ತೊಂದೆಡೆ, ಮಹರ್ಷಿ ವಾಲ್ಮೀಕಿ ಜಯಂತಿ ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ, ಈ ಕಾರಣದಿಂದಾಗಿ ಕೋಲ್ಕತ್ತಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಕ್ಟೋಬರ್ 23 ನಾಲ್ಕನೇ ಶನಿವಾರವಾಗಿದ್ದು, ಈ ಕಾರಣದಿಂದಾಗಿ ಬ್ಯಾಂಕುಗಳು ಲಾಕ್ ಆಗಿರುತ್ತವೆ. ಅಕ್ಟೋಬರ್ 24 ರಂದು ಭಾನುವಾರವಾದ್ದರಿಂದ ಬ್ಯಾಂಕುಗಳಿಗೆ ರಜೆಯಾಗಿದೆ.

click me!