Wheat Flour Export:ಗೋಧಿ ಹಿಟ್ಟು,ರವೆ, ಮೈದಾ ರಫ್ತಿಗೆ ನಿರ್ಬಂಧ; ಬೆಲೆ ಇಳಿಕೆ ಆಗುತ್ತಾ?

By Suvarna News  |  First Published Jul 8, 2022, 11:18 AM IST

*ಜುಲೈ 12ರ ಬಳಿಕ ಗೋಧಿ ಹಿಟ್ಟಿನ ರಫ್ತಿಗೆ ಅಂತರ್ ಸಚಿವಾಲಯ ಸಮಿತಿಯ ಅನುಮತಿ ಅಗತ್ಯ
*ಬೆಲೆಯೇರಿಕೆ ತಡೆಗೆ ಈ ನಿರ್ಧಾರ
*ಮೇ 13ರಂದು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ 


ನವದೆಹಲಿ (ಜು.8): ಮೇನಲ್ಲಿ ಗೋಧಿ (Wheat) ರಫ್ತಿನ (Export) ಮೇಲೆ ನಿಷೇಧ (ban) ಹೇರಿದ ಬಳಿಕ ಈಗ ಕೇಂದ್ರ ಸರ್ಕಾರ ಗೋಧಿ ಹಿಟ್ಟು(Wheat flour), ಮೈದಾ (Maida) ಮತ್ತು ರವೆ (Semolina) ರಫ್ತಿನ ನಿಗ್ರಹಕ್ಕೆ ಮುಂದಾಗಿದೆ. ಈ ನಿರ್ಬಂಧ ಜುಲೈ 12ರಿಂದ ಜಾರಿಗೆ ಬರಲಿದೆ. ಜುಲೈ 12ರ ಬಳಿಕ ಇವುಗಳ ರಫ್ತಿಗೆ ಅಂತರ್ ಸಚಿವಾಲಯ ಸಮಿತಿಯ (IMC) ಅನುಮತಿ ಪಡೆಯಬೇಕು. ಬೆಲೆ ಏರಿಕೆ ತಡೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 

ಗೋಧಿ ರಫ್ತಿಗೆ (Wheat export) ಸಂಬಂಧಿಸಿದ ಅಂತರ್ ಸಚಿವಾಲಯ ಸಮಿತಿ (IMC) ಶಿಫಾರಸ್ಸುಗಳ ಆಧಾರದಲ್ಲಿ ಈ ವಸ್ತುಗಳ ರಫ್ತುಗಳನ್ನು ನಿರ್ಧರಿಸಲಾಗುವುದು ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ  (DGDT) ಅಧಿಸೂಚನೆಯಲ್ಲಿ ತಿಳಿಸಿದೆ. ಗೋಧಿ ಹಿಟ್ಟಿನ (Wheat flour) ರಫ್ತಿನ ಮೇಲಿನ ನಿರ್ಬಂಧ ಜಾರಿಗೆ ಬರುವವರೆಗೆ (ಜುಲೈ 12ರ ತನಕ) ಅಂದ್ರೆ ಜುಲೈ 6 ಹಾಗೂ ಜುಲೈ 12ರ ನಡುವೆ,  ಹಡಗಿಗೆ (Ship) ಗೋಧಿ ಹಿಟ್ಟನ್ನು ಜುಲೈ  6 ಕ್ಕೂ ಮೊದಲು ಲೋಡ್ ಮಾಡಿದ್ರೆ ರಫ್ತಿಗೆ ಅವಕಾಶ ನೀಡಲಾಗೋದು. ಗೋಧಿ ಹಿಟ್ಟು ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳಾದ ಮೈದಾ, ರವೆ ಮುಂತಾದವುಗಳ  ರಫ್ತು ನೀತಿ ಮುಕ್ತವಾಗಿಯೇ ಇದೆ. ಆದರೆ, ಅಂತರ ಸಚಿವಾಲಯದ ಶಿಫಾರಸ್ಸುಗಳ (recommendation) ಆಧಾರದಲ್ಲಿ ರಫ್ತಿಗೆ ಅವಕಾಶ ನೀಡಲಾಗೋದು ಎಂದು ಡಿಜಿಡಿಟಿ (DGDT) ತಿಳಿಸಿದೆ.

Tap to resize

Latest Videos

ಎಣ್ಣೆ ಪ್ರಿಯರಿಗೊಂದು ಕಹಿ ಸುದ್ದಿ: ನಾಳೆಯಿಂದ ಮದ್ಯದಂಗಡಿ ಬಂದ್‌..!

ಮೇನಲ್ಲಿ ಗೋಧಿ ರಫ್ತಿನ ಮೇಲೆ ನಿಷೇಧ
ಮೇ 13ರಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ  (DGDT) ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವ ಕಾರಣ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.2022ನೇ ಆರ್ಥಿಕ ಸಾಲಿನಲ್ಲಿ ಭಾರತದ ಗೋಧಿ (Wheat) ರಫ್ತಿನಲ್ಲಿ (Export) ಭಾರೀ ಏರಿಕೆಯಾಗಿತ್ತು. ಭಾರತವು ದಾಖಲೆಯ 7 ದಶಲಕ್ಷ ಟನ್ ಗಳಷ್ಟು ಗೋಧಿಯನ್ನು (Wheat) ರಫ್ತು (Export) ಮಾಡಿತ್ತು. ಅದರ ಮೌಲ್ಯ ಅಂದಾಜು 2.12 ಬಿಲಿಯನ್ ಡಾಲರ್ ಆಗಿತ್ತು. ಮೌಲ್ಯದ ಆಧಾರದಲ್ಲಿ ನೋಡಿದ್ರೆ ಹಿಂದಿನ ಸಾಲಿನ ಇದೇ ಅವಧಿಗಿಂತ ಶೇ.274 ರಷ್ಟು ಹೆಚ್ಚಿತ್ತು.

ದಾಖಲೆ ಏರಿಕೆ ಕಂಡಿದ್ದ ಗೋಧಿ ಹಿಟ್ಟಿನ ಬೆಲೆ
ಏಪ್ರಿಲ್ ನಲ್ಲಿ ಭಾರತದಲ್ಲಿ ಗೋಧಿ ಹಿಟ್ಟಿನ  ಮಾಸಿಕ ಸರಾಸರಿ ದರ ಕೆಜಿಗೆ 32.38 ರೂ. ತಲುಪಿದ್ದು, 2010ರ ಜನವರಿ ಬಳಿಕ ದಾಖಲಾದ ಅತ್ಯಧಿಕ ಬೆಲೆಯಾಗಿದೆ. ಇದರಿಂದ ಗೋಧಿ ಹಿಟ್ಟು ಬಳಸಿ ಸಿದ್ಧಪಡಿಸುವ ಖಾದ್ಯಗಳಾದ ಬ್ರೆಡ್ (Bread), ಬಿಸ್ಕೆಟ್ಸ್ (Biscuits) ದರಗಳಲ್ಲಿ ಕೂಡ ಸಾರ್ವಕಾಲಿಕ ಏರಿಕೆ ಕಂಡು ಬಂದಿತ್ತು.

ಗ್ರಾಹಕರಿಗೆ ಸಂತಸದ ಸುದ್ದಿ: ಇಳಿಯುತ್ತಿದೆ ತಾಳೆ ಎಣ್ಣೆ ಬೆಲೆ, ಪ್ರತಿ ಕೆಜಿಗೆ 40 ರೂ. ಕಡಿಮೆ..!

ರಷ್ಯಾ (Russia) -ಉಕ್ರೇನ್ (Ukraine) ಯುದ್ಧದಿಂದಾಗಿ ( War) ಇಡೀ ವಿಶ್ವಕ್ಕೆ ಗೋಧಿ ಪೂರೈಕೆಯ ಕೊರತೆ ತೀವ್ರ ಪರಿಣಾಮ ಬೀರಿದೆ. ಚೀನಾದ (China) ನಂತರ ವಿಶ್ವದ ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರ ಭಾರತ (India). ಆದರೆ, ದೇಶದಲ್ಲಿ ಅಧಿಕ ತಾಪಮಾನದಿಂದ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದ್ದಲ್ಲದೇ ಗೋಧಿಯ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು. ಮಾರ್ಚ್‌ನಲ್ಲಿ ಬಿಸಿಗಾಳಿಯಿಂದಾಗಿ (heatwave) ಭಾರತವು (India) ಭಾರಿ ಬೆಳೆ ನಷ್ಟವನ್ನು ದಾಖಲಿಸಿದೆ. ಹೀಗಾಗಿ ರಾಷ್ಟ್ರದಲ್ಲಿ ಆಹಾರ ಭದ್ರತೆಯನ್ನು (Food Security) ಖಚಿತಪಡಿಸಿಕೊಳ್ಳಲು ವಿದೇಶಗಳಿಗೆ (Foreign) ಭಾರತ (India) ರಫ್ತು (Export) ನಿಷೇಧಿಸಿತ್ತು. 

click me!