ಅಂದು ಭಾರತ ಫೋನ್ ಮಾಡಿತ್ತು: ಟ್ರಂಪ್ ಬಿಚ್ಚಿಟ್ಟ ‘ಕಾಲ್’ ಸತ್ಯ!

First Published 11, Sep 2018, 11:08 AM IST
Highlights

ಟ್ರಂಪ್ ಗೆ ಭಾರತದಿಂದ ಫೋನ್ ಮಾಡಿದ್ಯಾರು?! ಅಮೆರಿಕದೊಂದಿಗೆ ವ್ಯಾಪಾರ ವೃದ್ಧಿಗೆ ದುಂಬಾಲು! ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆ! ಯಾರು, ಯಾವಾಗ ಫೋನ್ ಮಾಡಿದ್ದರು ಅಂತ ಹೇಳ್ತಿಲ್ಲ! ಎಲ್ಲರನ್ನೂ ಗೌರವಿಸುವ ದೇಶ ಅಮೆರಿಕ ಎಂದ ಟ್ರಂಪ್   

ವಾಷಿಂಗ್ಟನ್(ಸೆ.11): ಅಮೆರಿಕ ಕೂಡ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಚೀನಾ ಮತ್ತು ಭಾರತ ಸೇರದಿಂತೆ ಇತರ ರಾಷ್ಟ್ರಗಳಿಗೆ ಸಬ್ಸಿಡಿ ಕೊಡುವುದನ್ನು ಇನ್ನು ಮುಂದೆ ನಿಲ್ಲಿಸಲಾಗುವುದು ಎಂದು ಈಗಾಗಲೇ ಟ್ರಂಪ್ ಘೋಷಿಸಿದ್ದಾರೆ.

ಇದೀಗ ಮತ್ತೊಮ್ಮೆ ಭಾರತ ವಿರೋಧಿ ಧೋರಣೆ ತಳೆದಿರುವ ಟ್ರಂಪ್, ಅಮೆರಿಕದೊಂದಿಗೆ ವ್ಯಾಪಾರ ವೃದ್ಧಿಸಲು ಭಾರತ ದುಂಬಾಲು ಬಿದ್ದಿದ್ದು, ಈ ಕುರಿತು ನಿರಂತರ ಕರೆ ಮಾಡುತಲ್ಲೇ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಅಮೆರಿಕ ಸಾಗುತ್ತಿರುವ ಆರ್ಥಿಕ ದಾರಿಯಲ್ಲೇ ಭಾರತ ಕೂಡ ಸಾಗಲು ಬಯಸಿದ್ದು, ಈ ಹಿನ್ನೆಲೆಯಲ್ಲಿ ನಾವು ನಿಮ್ಮೊಂದಿಗೆ ಉತ್ತಮ ಭಾಂಧವ್ಯ ಹೊಂದಲು ಬಯಸುತ್ತೇವೆ ಎಂದು ಭಾರತ ಪದೇ ಪದೇ ಫೋನ್ ಮಾಡುತ್ತಲೇ ಇದೆ ಎಂದು ಟ್ರಂಪ್ ಹೇಳಿದ್ದಾರೆ.

ಆದರೆ ನಿರ್ದಿಷ್ಟವಾಗಿ ಯಾರು ತಮಗೆ ಕರೆ ಮಾಡಿದ್ದರು ಎಂಬುದನ್ನು ಹೇಳದ ಟ್ರಂಪ್, ಹೇಳುವ ಕಾಲ ಬಂದಾಗ ಹೇಳುತ್ತೇನೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ನನ್ನನ್ನು ಎಲ್ಲರೂ ಗೌರವಿಸುತ್ತಾರೆ, ಹೀಗಾಗಿ ನಾನು ಎಲ್ಲರನ್ನೂ ಗೌರವಿಸುತ್ತೇನೆ. ಅದು ಜಪಾನ್ ಪ್ರಧಾನಿ ಅಬೆ ಆಗಲಿ, ಭಾರತದ ಪ್ರಧಾನಿ ಮೋದಿ ಆಗಲಿ ಎಲ್ಲರನ್ನೂ ನಾನು ಗೌರವಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

Last Updated 19, Sep 2018, 9:22 AM IST