ತೈಲದರ ಏರಿಕೆ: ಟ್ರೋಲಿಗರು ಬಿಜೆಪಿ ನಾಯಕರ ಕಾಲೆಳೆದಿದ್ದು ಹೀಗೆ!

First Published 10, Sep 2018, 5:57 PM IST
Highlights

ತೈಲದರ ಏರಿಕೆ ಖಂಡಿಸಿ ಭಾರತ್ ಬಂದ್ ಪ್ರತಿಭಟನೆ! ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ತರಹೇವಾರಿ ಜೋಕ್ಸ್! ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟ್ರೋಲ್  
 

ನವದೆಹಲಿ(ಸೆ.10): ತೈಲದರ ಏರಿಕೆ ಖಂಡಿಸಿ ಇಂದು ವಿಪಕ್ಷಗಳು ಯಶಸ್ವಿ ಭಾರತ್ ಬಂದ್ ಪ್ರತಿಭಟನೆ ನಡೆಸಿವೆ. ಅದರಂತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಜೋಕ್ಸ್ ಗಳು ಹರಿದಾಡುತ್ತಿವೆ.

ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದ್ದು, 2014 ರ ಲೋಕಸಭೆ ಚುನಾವಣೆಗೂ ಮೊದಲು ಮೋದಿ ತೈಲದರ ಏರಿಕೆಗೆ ಆಗಿನ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಿಕೆ ನೀಡಿದ್ದ ವಿಡಿಯೋ ಹರಿದಾಡುತ್ತಿದೆ.

ಅಲ್ಲದೇ ರಾವಣನ ದೇಶ(ಶ್ರೀಲಂಕಾ)ದಲ್ಲಿ ಪೆಟ್ರೋಲ್ ಬೆಲೆ 58 ರೂ. ಸೀತಾಮಾತೆ ದೇಶ(ನೇಪಾಳ)ದಲ್ಲಿ ಪೆಟ್ರೋಲ್ ಬೆಲೆ 64 ರೂ. ಆಗಿದ್ದರೆ, ಪ್ರಭು ಶ್ರೀರಾಮನ ದೇಶದಲ್ಲಿ ಪೆಟ್ರೋಲ್ ಬೆಲೆ 80 ರೂ. ಏಕೆ ಎಂದು ಪ್ರಶ್ನಿಸಲಾಗಿದೆ.

ಅಲ್ಲದೇ ಬಿಜೆಪಿ ಇತರ ನಾಯಕರು, ಕೇಂದ್ರ ಸಚಿವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ. ಪ್ರಮುಖವಾಗಿ ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ವಿರುದ್ದವೂ ತರಹೇವಾರಿ ಜೋಕ್ಸ್ ಗಳೂ ಹರಿದಾಡುತ್ತಿವೆ.

 

 

 

Last Updated 19, Sep 2018, 9:22 AM IST