ಸಿಗದ ವೀಸಾ: ಯೋಜನಾ ವೆಚ್ಛ ಅಧಿಕದ ಆತಂಕದಲ್ಲಿ ಇನ್ಫೋಸಿಸ್

Published : Jul 22, 2018, 02:23 PM IST
ಸಿಗದ ವೀಸಾ: ಯೋಜನಾ ವೆಚ್ಛ ಅಧಿಕದ ಆತಂಕದಲ್ಲಿ ಇನ್ಫೋಸಿಸ್

ಸಾರಾಂಶ

ಕೆಲಸದ ವಿಸಾ ಅರ್ಜಿ ತಿರಸ್ಕೃತ ಹಿನ್ನೆಲೆ ಯೋಜನಾ ವೆಚ್ಛ ಅಧಿಕವಾಗುವ ಆತಂಕ ಇನ್ಫೋಸಿಸ್ ಪ್ರಾಜೆಕ್ಟ್ ಗಳಲ್ಲಿ ವಿಳಂಬ ಸ್ಥಳೀಯರ ನೇಮಕಾತಿಗೆ ಇನ್ಫೋಸಿಸ್ ಚಿಂತನೆ

ನವದೆಹಲಿ(ಜು.22): ಕೆಲಸದ ವೀಸಾ ಅರ್ಜಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಇದರಿಂದ ಗ್ರಾಹಕರ ಯೋಜನೆ ವೆಚ್ಚಗಳು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ದೇಶಗಳು, ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನೀಡುವುದರಲ್ಲಿ ಸೂಕ್ಷ್ಮ ಪರಿಶೀಲನೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ ಗಳ ಕೆಲಸದಲ್ಲಿ ವಿಳಂಬವಾಗುತ್ತಿರುವುದರಿಂದ ಪ್ರಮುಖ ಕೆಲಸದ ಮಾರುಕಟ್ಟೆಯಲ್ಲಿ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.

ಇತ್ತೀಚಿನ ದಿನಗಳಲ್ಲಿ ವೀಸಾ ಅರ್ಜಿಗಳ ತಿರಸ್ಕಾರದಲ್ಲಿ ಹೆಚ್ಚಳವಾಗಿದೆ. ಇದರಿಂದ ಕಂಪೆನಿಯ ಕೆಲಸದ ಮೇಲೆ ಪರಿಣಾಮ ಉಂಟಾಗಿದೆ. ಇದರಿಂದಾಗಿ ಪ್ರಾಜೆಕ್ಟ್ ಗಳು ವಿಳಂಬವಾಗುವುದಲ್ಲದೆ ಹೆಚ್ಚಿನ ವೆಚ್ಚವಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ.

ಅಮೆರಿಕ ಸರ್ಕಾರ ವಲಸೆ ಮತ್ತು ಕೆಲಸ ಅನುಮತಿ ನಿಯಮದಲ್ಲಿ ಬದಲಾವಣೆ ತಂದರೆ ಕಂಪೆನಿಯ ಅಂತಾರಾಷ್ಟ್ರೀಯ ಕಾರ್ಯತಂತ್ರ ಮತ್ತು ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಇನ್ಫೋಸಿಸ್ ಆತಂಕ ವ್ಯಕ್ತಪಡಿಸಿದೆ.

ಸಾಗರೋತ್ತರ ಭಾರತೀಯ ಐಟಿ ಕಂಪೆನಿಗಳು ವೀಸಾಗೆ ಹೆಚ್ಚು ಅವಲಂಬಿತವಾಗದೆ ಸ್ಥಳೀಯರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಎರಡು ವರ್ಷಗಳಲ್ಲಿ ಅಮೆರಿಕದಲ್ಲಿ ನಾಲ್ಕು ತಂತ್ರಜ್ಞಾನ ಮತ್ತು ಸಂಶೋಧನೆ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 10 ಸಾವಿರ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಇನ್ಫೋಸಿಸ್ ಈ ಹಿಂದೆಯೇ ಹೇಳಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!