ಈಕೆ ಮಿಲೇನಿಯರ್: ಆದ್ರೆ ಕೇವಲ 10 ನಿಮಿಷ ಮಾತ್ರ!

Published : Jul 21, 2018, 06:04 PM ISTUpdated : Jul 21, 2018, 06:23 PM IST
ಈಕೆ ಮಿಲೇನಿಯರ್: ಆದ್ರೆ ಕೇವಲ 10 ನಿಮಿಷ ಮಾತ್ರ!

ಸಾರಾಂಶ

10 ನಿಮಿಷಗಳವರೆಗೆ ಮಿಲೇನಿಯರ್ ಆದ ಮಹಿಳೆ ಬೋಸ್ಟನ್ ಮಹಿಳೆ ಅಕೌಂಟ್‌ಗೆ 1 ಮಿಲಿಯನ್ ಡಾಲರ್ ಬೇರೊಂದು ಮಹಿಳೆಯ ಖಾತೆಗೆ ಕಳುಹಿಸಬೇಕಿದ್ದ ಹಣ ಮಿಲೇನಿಯರ್ ಆಗಿದ್ದಕ್ಕೆ ಕೆಲಸ ಬಿಡಲಿದ್ದ ಫ್ಲೆಮಿಂಗ್

ಬೋಸ್ಟನ್(ಜು.21): ಹಣಕಾಸು ಸಂಸ್ಥೆಯೊಂದು ಮಾಡಿದ್ದ ಎಡವಟ್ಟಿನಿಂದ, ಮಹಿಳೆಯೊಬ್ಬಳು ಕೆಲವು ನಿಮಿಷಗಳ ಕಾಲ ಮಿಲೇನಿಯರ್ ಆದ ಅಪರೂಪದ ಘಟನೆ ವರದಿಯಾಗಿದೆ.

ಬೋಸ್ಟನ್‌ನ ಎಲೆನ್ ಫ್ಲೆಮಿಂಗ್ ಎಂಬ ಮಹಿಳೆಗೆ ಕಳೆದ ಬುಧವಾರ ಟಿಡಿ ಅಮೆರಿಟ್ರೇಡ್ ಹಣಕಾಸು ಸಂಸ್ಥೆ ಕರೆ ಮಾಡಿ, ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ದ್ವನಿ ಮುದ್ರಿತ ಸಂದೇಶ ಕಳಿಸಿದೆ.

ಇದರಿಂದ ಪುಕಿತಗೊಂಡ ಫ್ಲೆಮಿಂಗ್, ತಕ್ಷಣವೇ ತನ್ನ ಶೈಕ್ಷಣಿಕ ಸಾಲವನ್ನು ತೀರಿಸಲು ಯೋಜನೆ ಸಿದ್ಧಪಡಿಸಿದ್ದಾಳೆ. ಅಲ್ಲದೇ ತನ್ನ ಕೆಲಸಕ್ಕೆ ರಾಜೀನಾಮೆ ಕೂಡ ನೀಡಲು ಸಿದ್ಧವಾಗಿದ್ದಾಳೆ ಫ್ಲೆಮಿಂಗ್. ಆದರೆ ಅದಕ್ಕೂ ಮುನ್ನ ಫ್ಲೆಮಿಂಗ್ ಮತ್ತೆ ಹಣಕಾಸು ಸಂಸ್ಥೆ ಸಮಾಲೋಚಕರಿಗೆ ಕರೆ ಮಾಡಿ, ತನ್ನ ಖಾತೆಗೆ ಹಣ ಕಜಮಾ ಆಗಿರುವ ಕುರಿತು ಖಚಿತಪಡಿಸಿಕೊಂಡಿದ್ದಾಳೆ. 

ಈ ಕುರಿತು ಮರುಪರಿಶೀಲನೆ ನಡೆಸಿದ ಹಣಕಾಸು ಸಂಸ್ಥೆ, ತಾನು ತಪ್ಪಾಗಿ ಫ್ಲೆಮಿಂಗ್ ಖಾತೆಗೆ ಹಣ ವರ್ಗಾವಣೆ  ಮಾಡಿರುವುದಾಗಿ ತಿಳಿಸಿದೆ. ಪ್ಲೋರಿಡಾದಲ್ಲಿ ವಾಸವಾಗಿದ್ದ ಫ್ಲೆಮಿಂಗ್ ಹೆಸರಿನ ಮಹಿಳೆಗೆ ಆ ಹಣ ಸಂದಾಯ ಮಾಡುವ ಬದಲು ಬೋಸ್ಟನ್ ನ ಫ್ಲೆಮಿಂಗ್ ಎಂಬ ಮಹಿಳೆಗೆ ಹಣ ವರ್ಗಾವಣೆ ಮಾಡಲಾಗಿತ್ತು.

ಕೊನೆಯಲ್ಲಿ ಸಂಸ್ಥೆಯು ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದು, ಹಣವನ್ನು ಸರಿಯಾದ ವ್ಯಕ್ತಿಯ ಖಾತೆಗೆ ಮರು ವರ್ಗಾವಣೆ ಮಾಡಿದೆ. ಆದರೆ ಫ್ಲೆಮಿಂಗ್ ಮಾತ್ರ ತಾನು ಕೆಲ ಸಮಯದ ಮಿಲೇನಿಯರ್ ಎಂದು ಟ್ವೀಟರ್ ನಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!