Gold Silver Price: ಬೆಂಗಳೂರಿನಲ್ಲಿ ಕೊಂಚ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ಬೆಲೆ ಸ್ಥಿರ

By Suvarna News  |  First Published Dec 27, 2021, 12:27 PM IST

ವಾರದ ಮೊದಲ ದಿನವಾದ ಇಂದು ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ತುಸು ಏರಿಕೆ ಕಂಡುಬಂದಿದೆ. ದೇಶದ ಉಳಿದ ಪ್ರಮುಖ ನಗರಗಳಲ್ಲಿ ಮಾತ್ರ ಚಿನ್ನ ದರ ಯಥಾಸ್ಥಿತಿ ಕಾಯ್ದಕೊಂಡಿದೆ.ಇನ್ನು ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 


ಬೆಂಗಳೂರು (ಡಿ.27): ಇನ್ನೊಂದು ಹೊಸ ವರ್ಷದ(New Year) ಹೊಸ್ತಿಲಲ್ಲಿ ನಿಂತಿದ್ದೇವೆ. ಹೀಗಿರೋವಾಗ ಹೊಸ ವರ್ಷದ ಆರಂಭಕ್ಕೂ ಮುನ್ನ ಆಭರಣ ಖರೀದಿಸಬೇಕೆಂದು ಕೆಲವರು ಪ್ಲ್ಯಾನ್ ಹಾಕೊಂಡಿರುತ್ತಾರೆ. ಇನ್ನೂ ಕೆಲವರು ನ್ಯೂ ಇಯರ್ ಗೆ ಪ್ರೀತಿಪಾತ್ರರಿಗೆ ಏನಾದ್ರೂ ಚಿನ್ನ(Gold) ಅಥವಾ ಬೆಳ್ಳಿ(Silver) ಆಭರಣವನ್ನು(Ornaments) ಗಿಫ್ಟ್(Gift) ಮಾಡೋ ಯೋಚನೆಯಲ್ಲಿರಬಹುದು. ಹೊಸ ವರ್ಷದ (New Year)ಆಗಮನಕ್ಕೆ ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿಯಿರೋ ಕಾರಣ ಆದಷ್ಟು ಬೇಗ ಚಿನ್ನ ಹಾಗೂ ಬೆಳ್ಳಿ ಖರೀದಿಸೋ ತರತುರಿಯಲ್ಲಿರೋರಿಗೆ ಕೊಂಚ ನಿರಾಳತೆ ಸಿಕ್ಕಿದೆ.  ಚಿನ್ನದ ಬೆಲೆಯಲ್ಲಿ ಬೆಂಗಳೂರಿನಲ್ಲಿ(Bengaluru) ಇಂದು (ಡಿ.27)  ಕೊಂಚ ಏರಿಕೆ ಕಂಡುಬಂದಿರೋದು ಬಿಟ್ರೆ ದೇಶದ ಬಹುತೇಕ ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ನಿತ್ಯ ಬಳಕೆ ವಸ್ತುಗಳ ಬೆಲೆಯೇರಿಕೆ, ಷೇರುಮಾರುಕಟ್ಟೆಯಲ್ಲಿನ ಏರಿಳಿತ ಜೊತೆಗೆ ಒಮಿಕ್ರಾನ್ (Omicron)ಭೀತಿ  ಚಿನ್ನ(Gold)  ದರದ ಮೇಲೆ ಪರಿಣಾಮ ಬೀರಬಹುದೆಂಬ ನಿರೀಕ್ಷೆಯಿತ್ತು. ಆದ್ರೆ ಅಂಥ ಗಮನಾರ್ಹ ಪರಿಣಾಮ ಬೀರಿಲ್ಲ.ಚಿನ್ನದ ದರದಲ್ಲಿ ಕಳೆದ ಕೆಲವು ದಿನಗಳಿದ ಇಳಿಕೆ ಕಂಡುಬಂದಿತ್ತು.ಇದ್ರಿಂದ  ಖರೀದಿಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡುತ್ತಿರೋರಿಗೆ ಇತ್ತೀಚೆಗೆ ಕೊಂಚ ಮಟ್ಟಿಗೆ ಖುಷಿ ಹಾಗೂ ನಿರಾಳತೆ ಸಿಕ್ಕಿದೆ. ಆದ್ರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿರೋದು ಆಭರಣಪ್ರಿಯರಿಗೆ ತುಸು ಬೇಸರ ಮೂಡಿಸಿರಬಹುದು.ಇನ್ನು ಬೆಳ್ಳಿ ದರ ನಿರಂತರ ಏರಿಳಿತ ದಾಖಲಿಸುತ್ತಲೇ ಇದೆ. ಒಂದು ದಿನ ಏರಿಕೆಯಾದ್ರೆ, ಇನ್ನೊಂದು ದಿನ ಇಳಿಕೆಯಾಗುತ್ತಿದ್ದ ಬೆಳ್ಳಿ ದರ ಇಂದು  ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ.ಇಂದು (ಡಿ.27) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆಯಲ್ಲಿ ಇಂದು 90ರೂ. ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  45,360ರೂ. ಇದ್ದು, ಇಂದು 44,450ರೂ. ಆಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  49,590ರೂ. ಇದೆ. ನಿನ್ನೆ 49, 490ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 100ರೂ. ಏರಿಕೆಯಾಗಿದೆ.  ಬೆಳ್ಳಿ ಬೆಲೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆ 62,300ರೂ. ಇದೆ.

Tap to resize

Latest Videos

undefined

Petrol Diesel Rate: ವಾರದ ಮೊದಲ ದಿನ ಇಂಧನ ದರ ಚೆಕ್ ಮಾಡಿದ್ದೀರಾ? ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ(Delhi) ಚಿನ್ನದ ಬೆಲೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  ಇಂದು  47,510ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,810ರೂ. ಇದೆ. ಒಂದು ಕೆ.ಜಿ. ಬೆಳ್ಳಿ ದರ ಇಂದು 62,300ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ(Mumbai) ಕೂಡ ಇಂದು ಚಿನ್ನದ(Gold) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 47,310ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು  48,310ರೂ. ಇದೆ.  ಬೆಳ್ಳಿ(Silver) ದರ ಕೂಡ ಇಂದು ಸ್ಥಿರವಾಗಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆ 62,300ರೂ.  ಆಗಿದೆ.  

RBI action against RBL Bank : ಮುಂಬೈ ಮೂಲದ ಬ್ಯಾಂಕ್ ವಿರುದ್ಧ ಆರ್ ಬಿಐ ಹಠಾತ್ ಕ್ರಮ, ಕಾರಣವೇನು?

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ (Chennai) ಇಂದು ಚಿನ್ನದ(Gold) ದರದಲ್ಲಿ ಏರಿಕೆ ಕಂಡುಬಂದಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,550ರೂ.ಇದೆ.ನಿನ್ನೆ 45,520ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು  49,690ರೂ. ನಿನ್ನೆ 49, 660ರೂ. ಆಗಿದ್ದು, 30ರೂ. ಏರಿಕೆ ಆಗಿದೆ. ಬೆಳ್ಳಿ ದರ ಕೂಡ ಇಂದು ಸ್ಥಿರವಾಗಿದ್ದು, ಒಂದು ಕೆ.ಜಿ. ಬೆಳ್ಳಿಗೆ 66,200ರೂ.ಇದೆ.   

"

click me!