ಆದಾಯ ತೆರಿಗೆ ಪಾವತಿಸುವಾಗ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಾವತಿಸಿದ್ರೆ ಆಗ ಏನು ಮಾಡ್ಬೇಕು? ಈ ಹೆಚ್ಚುವರಿ ಮೊತ್ತವನ್ನು ನೀವು ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್ ಪಡೆಯಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಒಂದು ವೇಳೆ ನೀವು ನಿಮ್ಮ ಆದಾಯದ ಮೇಲೆ ಹೆಚ್ಚುವರಿ ತೆರಿಗೆ ಪಾವತಿಸಿದ್ರೆ ತೆರಿಗೆ ರೀಫಂಡ್ ಕ್ಲೇಮ್ ಮಾಡಬಹುದು. ಬಹುತೇಕ ಸಂದರ್ಭಗಳಲ್ಲಿ ತೆರಿಗೆದಾರರು ಅಗತ್ಯಕ್ಕಿಂತ ಹೆಚ್ಚು ಮೊತ್ತದ ತೆರಿಗೆ ಪಾವತಿಸಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಪಾವತಿಸಿರುವ ಹೆಚ್ಚುವರಿ ಹಣವನ್ನು ರೀಫಂಡ್ ಪಡೆಯಲು ಸಾಧ್ಯವಿದೆ. ಒಂದು ವೇಳೆ ನೀವು ಈ ಆರ್ಥಿಕ ಸಾಲಿನಲ್ಲಿ ನಿಮ್ಮ ವಾರ್ಷಿಕ ಆದಾಯದ ಮೇಲೆ ವಿಧಿಸಲ್ಪಡೋ ತೆರಿಗೆಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸಿದ್ರೆ ಆದಾಯ ತರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಬಳಿಕ ಆದಾಯ ತೆರಿಗೆ ಮರುಪಾವತಿಯನ್ನು (ರೀಫಂಡ್) ಪಡೆಯಲು ಅರ್ಹರಾಗುತ್ತೀರಿ. ಈ ಬಗ್ಗೆ ನಿಮಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 143 (1) ಅಡಿಯಲ್ಲಿ ನೋಟಿಸ್ ಕಳುಹಿಸಲಾಗುತ್ತದೆ. ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ನಡೆಸುತ್ತದೆ. ಹಾಗೆಯೇ ಈ ಹಣ ತೆರಿಗೆದಾರರು ಐಟಿಆರ್ ನಲ್ಲಿ ನಮೂದಿಸಿರೋ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗಾದ್ರೆ ಆದಾಯ ತೆರಿಗೆ ಇಲಾಖೆಯಿಂದ ಹೆಚ್ಚುವರಿ ತೆರಿಗೆ ರೀಫಂಡ್ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
ಆದಾಯ ತೆರಿಗೆ ಕಾಯ್ದೆಯ 237ರಿಂದ 245 ತನಕದ ಸೆಕ್ಷನ್ ಗಳು ತೆರಿಗೆ ರೀಫಂಡ್ ಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಒಳಗೊಂಡಿವೆ. ಸೆಕ್ಷನ್ 237ರ ಅನ್ವಯ ನಿರ್ದಿಷ್ಟ ಹಣಕಾಸು ಸಾಲಿಗೆ ಸಂಬಂಧಿಸಿ ಹೆಚ್ಚುವರಿ ತೆರಿಗೆ ಪಾವತಿಸಿರೋದಾಗಿ ತೆರಿಗೆದಾರ ಮೌಲ್ಯಮಾಪನ ಅಧಿಕಾರಿಗೆ ಮನವರಿಕೆ ಮಾಡಿಸಿದರೆ ಅಂಥವರಿಗೆ ಹೆಚ್ಚುವರಿಯಾಗಿ ಪಾವತಿಸಿರುವ ತೆರಿಗೆಯನ್ನು ಹಿಂತಿರುಗಿಸಲಾಗುತ್ತದೆ.
ITR Form: ನೀವು ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದೀರಾ? ಹಾಗಾದ್ರೆ ಈ ಐಟಿಆರ್ ಅರ್ಜಿ ನಮೂನೆ ಬಳಸೋದು ಅಗತ್ಯ!
ಯಾರು ರೀಫಂಡ್ ಕ್ಲೇಮ್ ಮಾಡಬಹುದು?
ತೆರಿಗೆ ಪಾವತಿಸುವ ಯಾವುದೇ ವ್ಯಕ್ತಿ ಆದಾಯ ತೆರಿಗೆ ರೀಫಂಡ್ ಕ್ಲೇಮ್ ಮಾಡಲು ಅರ್ಹತೆ ಗಳಿಸಿದ್ದಾನೆ. ಆದರೆ, ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ತೆರಿಗೆದಾರನ ಬದಲಿಗೆ ಇನ್ನೊಬ್ಬ ವ್ಯಕ್ತಿ ರೀಫಂಡ್ ಕ್ಲೇಮ್ ಮಾಡಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 238ರಲ್ಲಿ ನಿರ್ದಿಷ್ಟ ವಿಶೇಷ ಸಂದರ್ಭಗಳಲ್ಲಿ ಯಾರು ತೆರಿಗೆ ರೀಫಂಡ್ ಕ್ಲೇಮ್ ಮಾಡಬಹುದು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಅನ್ವಯ ಈ ಕೆಳಗಿನವರು ತೆರಿಗೆ ರೀಫಂಡ್ ಕ್ಲೇಮ್ ಮಾಡಬಹುದು.
-ಕಾಯ್ದೆಯಲ್ಲಿ ನೀಡಿರುವ ಯಾವುದೇ ಅವಕಾಶಗಳಡಿಯಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಒಟ್ಟು ಆದಾಯದಲ್ಲಿ ಸೇರಿದ್ದರೆ ಆಗ ಆ ಇನ್ನೊಬ್ಬ ವ್ಯಕ್ತಿ ಒಟ್ಟುಗೂಡಿಸಿರುವ ಆದಾಯಕ್ಕೆ ರೀಫಂಡ್ ಪಡೆಯಬಹುದು.
-ಮರಣ, ಅಸಾಮರ್ಥ್ಯತೆ ಅಥವಾ ಇನ್ನಿತರ ಕಾರಣಗಳಿಂದ ಒಬ್ಬ ವ್ಯಕ್ತಿ ಯಾವುದೇ ರೀಫಂಡ್ ಕ್ಲೇಮ್ ಮಾಡಲು ಸಾಧ್ಯವಾಗದಿದ್ರೆ ಆಗ ಆತನ ವಾರಸುದಾರರು ಅದನ್ನು ಕ್ಲೇಮ್ ಮಾಡಬಹುದು.
ರೀಫಂಡ್ ಕ್ಲೇಮ್ ಮಾಡೋದು ಹೇಗೆ?
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಮೂಲಕ ಹೆಚ್ಚುವರಿ ತೆರಿಗೆಯನ್ನು ಕ್ಲೇಮ್ ಮಾಡಬಹುದು.
ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ
ರೀಫಂಡ್ ಕ್ಲೇಮ್ ಮಾಡಲು ಐಟಿಆರ್ ಸಲ್ಲಿಕೆ ಹೇಗೆ?
*ಹೆಚ್ಚುವರಿಯಾಗಿ ಪಾವತಿಸಿರುವ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ (ಫಾರ್ಮ್ 26AS) ಪರಿಶೀಲಿಸಿ.
*ನೀವು ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಹಾಗೂ ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ ಪರಿಶೀಲಿಸಿದ ಬಳಿಕ ಹೆಚ್ಚುವರಿಯಾಗಿ ಪಾವತಿಸಿದ ತೆರಿಗೆಯ ರೀಫಂಡ್ ಕ್ಲೇಮ್ ಮಾಡಬಹುದು.
*ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ರೀಫಂಡ್ ಮನವಿ ಸಲ್ಲಿಕೆ ಮಾಡುವ ಮೂಲಕ ನೀವು ರೀಫಂಡ್ ಮೊತ್ತವನ್ನು ಪಡೆಯಬಹುದು.
*ಒಮ್ಮೆ ನೀವು ರೀಫಂಡ್ ಮನವಿ ಸಲ್ಲಿಕೆ ಮಾಡಿದ ಬಳಿಕ ನಿಮ್ಮ ರೀಫಂಡ್ ಸ್ಟೇಟಸ್ ಅನ್ನು ಆನ್ ಲೈನ್ ನಲ್ಲಿ ಪರಿಶೀಲಿಸಬಹುದು.
*ಒಂದು ವೇಳೆ ರೀಫಂಡ್ ಕ್ಲೇಮ್ ಮಾಡುವಾಗ ಯಾವುದೇ ತೊಂದರೆ ಎದುರಾದರೆ ತೆರಿಗೆ ಸಲಹೆಗಾರ ಅಥವಾ ಸಿಎ ಅವರಿಂದ ಸಲಹೆ ಪಡೆಯಿರಿ.