ಆದಾಯ ತೆರಿಗೆ ರೀಫಂಡ್ ಕಾಲಾವಧಿ ತಗ್ಗಿಸಲು ಯೋಜನೆ ರೂಪಿಸುತ್ತಿರುವ ಸರ್ಕಾರ; 16 ರಿಂದ 10 ದಿನಗಳಿಗೆ ಇಳಿಕೆ ಸಾಧ್ಯತೆ

By Suvarna News  |  First Published Aug 24, 2023, 3:25 PM IST

ಆದಾಯ ತೆರಿಗೆ ರೀಫಂಡ್ ಕಾಲಾವಧಿ ತಗ್ಗಿಸಲು ಆದಾಯ ತೆರಿಗೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಈ ಅವಧಿಯನ್ನು 16 ದಿನಗಳಿಂದ 10 ದಿನಗಳಿಗೆ ಇಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಈ ಹಣಕಾಸು ಸಾಲಿನಿಂದಲೇ ಜಾರಿಗೆ ಬರಲಿದೆ.


ನವದೆಹಲಿ (ಆ.24): ಆದಾಯ ತೆರಿಗೆ ರೀಫಂಡ್ ನೀಡುವ ಪ್ರಕ್ರಿಯೆಯ ಅಂದಾಜು ಕಾಲಾವಧಿಯನ್ನು 16 ದಿನಗಳಿಂದ 10 ದಿನಗಳಿಗೆ ಇಳಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ಕಾಲಾವಧಿಯನ್ನು ಈ ಹಣಕಾಸು ಸಾಲಿನಿಂದ ಜಾರಿಗೊಳಿಸುವ ನಿರೀಕ್ಷೆಯಿದೆ. ಇನ್ನು ಆದಾಯ ತೆರಿಗೆ ಇಲಾಖೆ ರೀಫಂಡ್ ನೀಡಲು ತೆಗೆದುಕೊಳ್ಳುವ ಸರಾಸರಿ ಅವಧಿಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುವ ಸಾಧ್ಯತೆಯಿದೆ ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತ ಕಳೆದ ತಿಂಗಳು ತಿಳಿಸಿದ್ದರು. 2022-23ನೇ ಹಣಕಾಸು ಸಾಲಿನಲ್ಲಿ ರಿಟರ್ನ್ಸ್ ಸಲ್ಲಿಕೆ ಮಾಡಿದ 30 ದಿನಗಳೊಳಗೆ ಶೇ.80ರಷ್ಟು ರೀಫಂಡ್ ನೀಡಲಾಗಿತ್ತು. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್ ) ಪರಿಶೀಲನಾ ಪ್ರಕ್ರಿಯೆಯನ್ನು ಆದಾಯ ತೆರಿಗೆ ಇಲಾಖೆ ಚುರುಕುಗೊಳಿಸಿದೆ. ಇದಕ್ಕೆ ಕಾರಣ ಆದಾಯ ತೆರಿಗೆ ಇಲಾಖೆ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ. ಹಾಗೆಯೇ ತೆರಿಗೆದಾರರಿಗೆ ಈ ಪ್ರಕ್ರಿಯೆಗಳು ಸುಲಭವಾಗಿ ನಡೆಯಬೇಕು ಎಂಬುದನ್ನು ನೋಡಿಕೊಳ್ಳುತ್ತಿದೆ. ಆದಾಯ ತೆರಿಗೆ ಇಲಾಖೆ  ಮಾಹಿತಿಗಳ ಅನ್ವಯ ಸುಮಾರು 6.91 ಕೋಟಿ ಐಟಿಆರ್ ಗಳು ಪ್ರಸಕ್ತ ಮೌಲ್ಯಮಾಪನ ವರ್ಷ ಅಂದ್ರೆ 2023-24ನೇ ಸಾಲಿನಲ್ಲಿ ಸಲ್ಲಿಕೆಯಾಗಿವೆ. ಇದರಲ್ಲಿ 4.82 ಕೋಟಿ ಐಟಿಆರ್ ಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 

ಆದಾಯ ತೆರಿಗೆ ರೀಫಂಡ್ ಚೆಕ್ ಮಾಡೋದು ಹೇಗೆ?
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ www.incometax.gov.in/iec/foportal ಮೂಲಕ ಆದಾಯ ತೆರಿಗೆ ರೀಫಂಡ್ ಸ್ಟೇಟಸ್ ಚೆಕ್ ಮಾಡ್ಬಹುದು. ಇದಕ್ಕೆ ನಿಮಗೆ ಪ್ಯಾನ್ ಹಾಗೂ ಆಧಾರ್ ಮಾಹಿತಿಗಳ ಹೊರತಾಗಿ ಒಟಿಪಿ ಪಡೆಯಲು ಮೊಬೈಲ್ ಸಂಖ್ಯೆ ಕೂಡ ಅಗತ್ಯ.
ಹಂತ 2: www.incometax.gov.in ಪೋರ್ಟಲ್ ತೆರೆದುಕೊಂಡ ಬಳಿಕ ನೀವು ಪ್ಯಾನ್ ಮಾಹಿತಿಗಳು, ಒಟಿಪಿ ಹಾಗೂ ಕ್ಯಾಪ್ಚ ಕೋಡ್ ಬಳಸಿಕೊಂಡು ಖಾತೆಗೆ ಲಾಗಿನ್ ಆಗಬೇಕು.
ಹಂತ 3: ಆದಾಯ ತೆರಿಗೆ ಪೋರ್ಟಲ್ ಗೆ ಲಾಗಿನ್ ಆದ ಬಳಿಕ 'ಇ-ಫೈಲ್' ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಹಂತ 4: ಇಲ್ಲಿಂದ ಆದಾಯ ತೆರಿಗೆ ರಿಟರ್ನ್ಸ್ ಟ್ಯಾಬ್ ಗೆ ತೆರಳಿ. ಆ ಬಳಿಕ View Filed Returns ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 5: ಇತ್ತೀಚೆಗೆ ಫೈಲ್ ಮಾಡಿದ ಐಟಿಆರ್ ಸ್ಟೇಟಸ್ ಅನ್ನು ತೆರಿಗೆದಾರರು ಚೆಕ್ ಮಾಡಬಹುದು.
ಹಂತ 6: ಇನ್ನು View Details ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಆದಾಯ ತೆರಿಗೆ ರೀಫಂಡ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.

Tap to resize

Latest Videos

ಐಟಿಆರ್ ಸಲ್ಲಿಕೆಯಾಯ್ತು, ರೀಫಂಡ್ ಯಾವಾಗ? ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ

ಈಗ ನಿಮ್ಮ ಆದಾಯ ತೆರಿಗೆ ರೀಫಂಡ್ ಸ್ಟೇಟಸ್ ಕಾಣಿಸುತ್ತದೆ. ಒಂದು ವೇಳೆ ನಿಮ್ಮ ಐಟಿಆರ್ ನಲ್ಲಿ ನಮೂದಿಸಿರುವ ಬ್ಯಾಂಕ್ ಮಾಹಿತಿಗಳಲ್ಲಿ ಯಾವುದೇ ಸಮಸ್ಯೆ ಕಾಣಿಸಿದರೆ, ಆಗ ನಿಮಗೆ 'ಯಾವುದೇ ದಾಖಲೆಗಳು ಕಾಣಿಸುತ್ತಿಲ್ಲ. ದಯವಿಟ್ಟು ನಿಮ್ಮ ಇ-ಫೈಲಿಂಗ್ ಪ್ರಕ್ರಿಯೆ ಸ್ಟೇಟಸ್ ಚೆಕ್ ಮಾಡಿ. ಇ-ಫೈಲ್-ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ -ವಿವ್ಯೂ ಫೈಲ್ಡ್ ರಿಟರ್ನ್ಸ್' ಮೂಲಕ ಚೆಕ್ ಮಾಡಬಹುದು.

ವಿಳಂಬ ಐಟಿಆರ್ ಸಲ್ಲಿಕೆ ವೇಳೆ ದಂಡ ಪಾವತಿಸೋದು ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ

ತೆರಿಗೆದಾರರು ಟಿಡಿಎಸ್ ಅಥವಾ ಅಡ್ವಾನ್ಸ್ ತೆರಿಗೆ ಮೂಲಕ ಅವರಿಗೆ ವಿಧಿಸಲ್ಪಡುವ ತೆರಿಗೆಗಿಂತ ಹೆಚ್ಚಿನ ಮೊತ್ತ ಪಾವತಿಸಿದ್ರೆ ಆಗ ಅವರು ರೀಫಂಡ್ ಪಡೆಯಲು ಅರ್ಹರಾಗಿರುತ್ತಾರೆ. ಒಬ್ಬ ವ್ಯಕ್ತಿ ಐಟಿಆರ್ ಫೈಲ್ ಮಾಡಿದ ಬಳಿಕ ಆದಾಯ ತೆರಿಗೆ ಇಲಾಖೆ ಅವರ ಕ್ಲೇಮ್ ಗಳನ್ನು ಪರಿಶೀಲಿಸುತ್ತದೆ ಹಾಗೂ ಹೆಚ್ಚುವರಿ ತೆರಿಗೆ ಮೊತ್ತವನ್ನು ರೀಫಂಡ್ ಮಾಡುತ್ತದೆ. ಇನ್ನು ತೆರಿಗೆ ರೀಫಂಡ್ ಅನ್ನು ತೆರಿಗೆದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಸಮಯವನ್ನು ಕಾಯ್ದುಕೊಳ್ಳಲು ಆದಾಯ ತೆರಿಗೆ ಇಲಾಖೆ ಈ ಪ್ರಕ್ರಿಯೆಯನ್ನು ಸಂಪೂರ್ಣ ಆನ್ ಲೈನ್ ಮುಖಾಂತರ ಮಾಡುತ್ತಿದೆ.

click me!