ತಿರುಗುಬಾಣ: ಕೇಂದ್ರ ಸರ್ಕಾರಕ್ಕೆ ತೆರಿಗೆ ಶಾಕ್‌

Published : May 06, 2019, 08:31 AM IST
ತಿರುಗುಬಾಣ: ಕೇಂದ್ರ ಸರ್ಕಾರಕ್ಕೆ ತೆರಿಗೆ ಶಾಕ್‌

ಸಾರಾಂಶ

ಕೇಂದ್ರ ಸರ್ಕಾರಕ್ಕೆ ತೆರಿಗೆ ಶಾಕ್‌| ಆದಾಯ ತೆರಿಗೆ ಇ-ಫೈಲಿಂಗ್‌ 6.6 ಲಕ್ಷದಷ್ಟು ಕುಸಿತ| ಅಪನಗದೀಕರಣದಿಂದಾಗಿ ಏರಲಿದೆ ಎಂಬ ನಿರೀಕ್ಷೆ ಹುಸಿ

ನವದೆಹಲಿ[ಮೇ.06]: ಅಪನಗದೀಕರಣ ನಿರ್ಧಾರದಿಂದಾಗಿ ಆದಾಯ ತೆರಿಗೆ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗಲಿದೆ ಎಂಬ ನಿರೀಕ್ಷೆ ಏಕೋ ಹುಸಿಯಾಗತೊಡಗಿದೆ. ಆದಾಯ ತೆರಿಗೆ ಇ-ಫೈಲಿಂಗ್‌ ಮಾಡುವವರ ಸಂಖ್ಯೆ 2019ನೇ ಹಣಕಾಸು ವರ್ಷದಲ್ಲಿ 6.6 ಲಕ್ಷದಷ್ಟುಕುಸಿತ ಕಂಡಿದೆ.

2017-18ನೇ ಸಾಲಿನಲ್ಲಿ 6.74 ಕೋಟಿ ಮಂದಿ ಇ-ಫೈಲಿಂಗ್‌ ಮಾಡಿದ್ದರು. 2018-2019ನೇ ಸಾಲಿನಲ್ಲಿ ಇದು 6.68 ಕೋಟಿಗೆ ಇಳಿಕೆಯಾಗಿದೆ ಎಂದು ತೆರಿಗೆ ಇಲಾಖೆಯ ಇ-ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ಅಂಕಿ-ಅಂಶಗಳು ಇವೆ.

ಮತ್ತೊಂದೆಡೆ, ಇ-ಫೈಲಿಂಗ್‌ಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ ಮಾ.31ರವರೆಗೆ ಶೇ.15ರಷ್ಟುಹೆಚ್ಚಾಗಿದ್ದು, 8.45 ಕೋಟಿಗೆ ಏರಿಕೆಯಾಗಿದೆ. ಈ ಸಂಖ್ಯೆ 2016ರ ಮಾಚ್‌ರ್‍ನಲ್ಲಿ ಕೇವಲ 5.2 ಕೋಟಿಯಷ್ಟಿತ್ತು. ಇ-ಫೈಲಿಂಗ್‌ಗೆ ನೋಂದಣಿ ಮಾಡಿದವರಲ್ಲಿ ಶೇ.79ರಷ್ಟುಮಂದಿ ಮಾತ್ರ ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!