ಬಂದಿದೆ ಅಕ್ಷಯ ತೃತೀಯ: ಚಿನ್ನದ ದರ ಇಳಿದಿದೆ ಗೊತ್ತಿದೆಯಾ?

Published : May 05, 2019, 05:13 PM ISTUpdated : May 05, 2019, 05:16 PM IST
ಬಂದಿದೆ ಅಕ್ಷಯ ತೃತೀಯ: ಚಿನ್ನದ ದರ ಇಳಿದಿದೆ ಗೊತ್ತಿದೆಯಾ?

ಸಾರಾಂಶ

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ| ಬೆಳ್ಳಿ ದರ ಇಳಿಕೆಗೂ ಕಾರಣವಾಗಿದೆ ಅಕ್ಷಯ ತೃತೀಯ| ಇದೇ ಮಂಗಳವಾರ(ಮೇ.07)ಅಕ್ಷಯ ತೃತೀಯ| 10 ಗ್ರಾಂ ಚಿನ್ನದ ದರ 32,620 ರೂ.| 1 ಕೆಜಿ ಬೆಳ್ಳಿ ಬೆಲೆ 37,700 ರೂ.| 10 ಗ್ರಾಂ ಚಿನ್ನದ ದರದಲ್ಲಿ 250 ರೂ. ಇಳಿಕೆ|

ಬೆಂಗಳೂರು(ಮೇ.05): ಇದೇ ಮಂಗಳವಾರ(ಮೇ.07)ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ.

ಚಿನ್ನದ ದರದಲ್ಲಿ 250 ರೂ. ಇಳಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 32,620 ರೂ. ಇದೆ.

ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ 825 ರೂ. ಇಳಿಕೆಯಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 37,700 ರೂ.ಗೆ ತಗ್ಗಿದೆ. ಅಲ್ಲದೇ 100 ಬೆಳ್ಳಿ ನಾಣ್ಯಗಳ ಖರೀದಿ ಹಾಗೂ ಮಾರಾಟ ದರ 79,000 ರೂ. ಇದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ