1 ವರ್ಷ ವ್ಯಾಲಿಡಿಟಿ, ಫ್ರೀ ಕಾಲಿಂಗ್, 1.5GB ಡೇಟಾ, 100% ಕ್ಯಾಶ್‌ಬ್ಯಾಕ್; ಜಿಯೋ ಆಫರ್ ಕಂಡು ಎಲ್ಲರೂ ಕಕ್ಕಾಬಿಕ್ಕಿ

By Mahmad Rafik  |  First Published Nov 1, 2024, 7:14 PM IST

ರಿಲಯನ್ಸ್ ಜಿಯೋ ತನ್ನ ದೀಪಾವಳಿ ಆಫರ್‌ನಲ್ಲಿ ಒಂದು ವರ್ಷದವರೆಗೆ ಅನ್‌ಲಿಮಿಟೆಡ್ ಕರೆಗಳು, ದೈನಂದಿನ 1.5GB ಡೇಟಾ ಮತ್ತು SMSಗಳನ್ನು ನೀಡುತ್ತಿದೆ. ಇದರ  ಜೊತೆಗೆ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್ ಅನೌನ್ಸ್ ಮಾಡಿದೆ.


ಮುಂಬೈ: ರಿಲಯನ್ಸ್ ಜಿಯೋ ದೀಪಾವಳಿಗಾಗಿ ಹಲವು ಯೋಜನೆಗಳನ್ನು ಈಗಾಗಲೇ ಘೋಷಿಸಿದೆ. ಈ ಯೋಜನೆಗಳು ಹಲವು ಆಫರ್‌ಗಳನ್ನು ಒಳಗೊಂಡಿವೆ. ಬಿಎಸ್‌ಎನ್‌ಎಲ್ ತನ್ನ ಒಂದು ವರ್ಷದ ಪ್ಲಾನ್‌ನಲ್ಲಿ 100 ರೂಪಾಯಿ ಕಡಿತಗೊಳಿಸಿದೆ. ರಿಲಯನ್ಸ್ ಜಿಯೋ ಬಳಕೆದಾದರು 1,699 ರೂಪಾಯಿ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ ಒಂದು ವರ್ಷದವರೆಗೆ ಯಾವುದೇ ರೀಚಾರ್ಜ್ ಮಾಡಿಕೊಳ್ಳುವ ಅವಶ್ಯಕತೆ ಇರಲ್ಲ. ಈ ಪ್ಲಾನ್‌ನಿಂದ ಪದೇ ಪದೇ ರೀಚಾರ್ಜ್ ಮಾಡಿಕೊಳ್ಳಬೇಕೆಂಬ ಕಿರಿಕಿರಿ ತಪ್ಪಲಿದ್ದು, ಒಂದು ವರ್ಷದವರೆಗೆ ಉಚಿತವಾಗಿ ಕಾಲ್ ಮಾಡಿಕೊಂಡಿರಬಹುದು. ಪ್ರತಿದಿನ ಹೈ ಸ್ಪೀಡ್ ಡೇಟಾ ಮತ್ತು ಉಚಿತವಾಗಿ ಎಸ್‌ಎಂಎಸ್ ಸಹ ಕಳುಹಿಸಬಹುದು. ಹಾಗಾದ್ರೆ ಈ ಪ್ಲಾನ್‌ನನಲ್ಲಿ ಯಾವೆಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ ಎಂಬುದನ್ನು ನೋಡೋಣ ಬನ್ನಿ. 

1,699 Rs Jio Prepaid Plan Detail
*ಪ್ರತಿದಿನ 1.5ಜಿಬಿ ಡೇಟಾ ಜೊತೆ ಅನ್‌ಲಿಮಿಟೆಡ್ ಕಾಲ್
*ಒಂದು ವರ್ಷದ ವ್ಯಾಲಿಡಿಟಿ
*ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಡೇಟಾ ಅಂತ್ಯವಾದ ಬಳಿನಕ ಇಂಟರ್‌ನೆಟ್ ಸ್ಪೀಡ್ 64Kbps ಆಗುತ್ತದೆ. 
*ಭಾರತದಲ್ಲಿ ಯಾವುದೇ ನೆಟ್‌ವರ್ಕ್‌ಗೂ ಉಚಿತವಾಗಿ ಒಂದು ವರ್ಷದವರೆಗೆ ಕರೆ ಮಾಡಬಹುದು ಮತ್ತು ಪ್ರತಿದಿನ 100 ಎಸ್ಎಂಎಸ್ ಕಳುಹಿಸಬಹುದು
*ಇದೆಲ್ಲದರ ಜೊತೆಗೆ ಜಿಯೋ ಆಪ್, ಜಿಯೋ ಸಿನಿಮಾ, ಜಯೋ ಟಿವಿ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗಲಿದೆ. 

Tap to resize

Latest Videos

undefined

ಇದನ್ನೂ ಓದಿ: ಬಿಎಸ್‌ಎನ್‌ಎಲ್ ನೀಡ್ತಿರೋ ಹೆಚ್ಚುವರಿ ಡೇಟಾ ಪಡೆಯಲು ನೀವು ಮಾಡಬೇಕಿರೋದು ಇಷ್ಟೇ?

ಯಾರಿಗೆಲ್ಲಾ ಸಿಗಲಿದೆ 100% ಕ್ಯಾಶ್‌ಬ್ಯಾಕ್ ಆಫರ್? 
ದೀಪಾವಳಿ ಆಫರ್‌ ಅನ್ವಯ 149 ರೂ ಅಥವಾ ಅದಕ್ಕಿಂತಲೂ ಅಧಿಕ ರೀಚಾರ್ಜ್ ಮಾಡಿಸಿಕೊಳ್ಳುವ ಕೆಲ ಪ್ಲಾನ್‌ನಲ್ಲಿ  ಶೇ.100ರಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಇಲ್ಲಿ ಪಡೆದ ಕ್ಯಾಶ್‌ಬ್ಯಾಕ್ ಕೂಪನ್ ಬಳಸಿ ರಿಲಯನ್ಸ್ ಡಿಜಿಟಲ್ ಸ್ಟೋರ್ಸ್‌ನಲ್ಲಿ ಖರೀದಿ ಮಾಡಬಹುದು. ಈ ಮೂಲಕ ಯಾವುದೇ ಹಣ ಪಾವತಿಸದೇ ಶಾಪಿಂಗ್ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ಕ್ಯಾಶ್‌ಬ್ಯಾಕ್ ಕೂಪನ್ MyJio ಆಪ್‌ನಲ್ಲಿ My Coupons ಸೆಕ್ಷನ್‌ ನಲ್ಲಿ ಹೋಗಿ ಟ್ರ್ಯಾಕ್ ಮಾಡಬಹುದು. ಇದರಿಂದ ಕ್ಯಾಶ್ ಬ್ಯಾಕ್ ಕೂಪನ್  ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. 

ಈ 100% ಕ್ಯಾಶ್‌ಬ್ಯಾಕ್‌ ಆಫರ್ ಹಳೆಯ ಜಿಯೋ ಗ್ರಾಹಕರಿಗೆ ಲಭ್ಯವಾಗಲಿದೆ. ರೀಚಾರ್ಜ್ ಆನ್‌ಲೈನ್ ಅಥವಾ ಆಫ್‌ಲೈನ್ ಮಾರ್ಗವಾಗಿ ಮಾಡಿಕೊಳ್ಳಬಹುದಾಗಿದೆ. ಈ ಪ್ರಮೋಷನ್ ಗ್ರಾಹಕರಿಗೆ ಹೆಚ್ಚಿನ ಲಾಭಗಳನ್ನು ನೀಡುತ್ತದೆ. 100% ಕ್ಯಾಶ್‌ಬ್ಯಾಕ್ ಆಫರ್‌ಗೆ ಸಂಬಂಧಿಸಿದ ಎಲ್ಲಾ ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ Jio ನ ಅಧಿಕೃತ ವೆಬ್‌ಸೈಟ್ Jio.com ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: ದೀಪಾವಳಿಗೆ ಜಿಯೋದಿಂದ ಬಿಗ್ ಆಫರ್- ಒಂದು ವರ್ಷದವರೆಗೆ ಇಂಟರ್‌ನೆಟ್ ಫ್ರೀ

click me!