Income Tax Refund: ಗಮನಿಸಿ, ನಿಮ್ಮ ರೀಫಂಡ್‌ ಲೇಟ್‌ ಆದ್ರೆ ಸರ್ಕಾರವೇ ನೀಡುತ್ತೆ ಬಡ್ಡಿ!

By Santosh NaikFirst Published Aug 19, 2024, 10:58 AM IST
Highlights

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದ್ದೀರಿ. ಆದರೆ, ಈವರೆಗೂ ರೀಫಂಡ್‌ ಬಂದಿಲ್ಲ ಅಂದ್ರೆ ತಲೆ ಕೆಡಿಸಿಕೊಳ್ಳಬೇಡಿ. ಆದಾಯ ತೆರಿಗೆ ಇಲಾಖೆ ಎಲ್ಲಿಯವರೆಗೆ ರೀಫಂಡ್‌ ನೀಡೋದಿಲ್ವೋ ಅಲ್ಲಿಯವರೆಗೂ ಅವರು ನಿಮ್ಮ ರಿಟರ್ನ್ಸ್‌ ಹಣಕ್ಕೆ ಬಡ್ಡಿಯನ್ನು ನೀಡಬೇಕಾಗಿರುತ್ತದೆ.
 

ನವದೆಹಲಿ (ಆ.19): ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರೆ ಮತ್ತು ಈಗ ಮರುಪಾವತಿಗಾಗಿ ಕಾಯುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಸರ್ಕಾರದ ಪ್ರಕಾರ, ಮರುಪಾವತಿ ಪ್ರಕ್ರಿಯೆಯು ಈಗ ವೇಗವಾಗಿದೆ. ಸಾಮಾನ್ಯವಾಗಿ ಮರುಪಾವತಿಯು 10 ದಿನಗಳಿಂದ ಒಂದು ತಿಂಗಳವರೆಗೆ ಬರುತ್ತದೆ. ಆದರೆ ನಿಮ್ಮ ಆದಾಯ ತೆರಿಗೆ ಮರುಪಾವತಿ ಇನ್ನೂ ಬಂದಿಲ್ಲವಾದರೆ, ನಿಮಗೆ ಲಾಭವಾಗುವಂಥ  ಸುದ್ದಿ ಇಲ್ಲಿದೆ. ವಿಳಂಬವಾದ ಮರುಪಾವತಿಗೆ ಸರ್ಕಾರವು ತೆರಿಗೆದಾರರಿಗೆ ಬಡ್ಡಿಯನ್ನು ನೀಡುತ್ತದೆ. ಮರುಪಾವತಿ ಬರದಿದ್ದರೆ ನೀವು ಏನು ಮಾಡಬೇಕು ಮತ್ತು ಮರುಪಾವತಿಯನ್ನು ತಡವಾಗಿ ಸ್ವೀಕರಿಸಿದರೆ ನಿಮಗೆ ಎಷ್ಟು ಬಡ್ಡಿಯನ್ನು ನೀಡಲಾಗುತ್ತದೆ ಅನ್ನೋದನ್ನ ಇಲ್ಲಿ ತಿಳಿಯಿರಿ.

ತಮ್ಮ ಐಟಿಆರ್‌ಗಾಗಿ ಜನರು ಕುತೂಹಲದಿಂದ ಕಾಯ್ತಿದ್ದಾರೆ. ನೀವು ಎಲ್ಲವನ್ನೂ ಸರಿಯಾಗಿ ಭರ್ತಿ ಮಾಡಿದ್ದರೆ ಮತ್ತು ಮರುಪಾವತಿ ಪಡೆಯುವಲ್ಲಿ ವಿಳಂಬವಾದಲ್ಲಿ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಹಣ ಬಡ್ಡಿಯೊಂದಿಗೆ ವಾಪಾಸ್‌ ಬರುತ್ತದೆ. ನಿಮ್ಮ ತೆರಿಗೆ ಮರುಪಾವತಿಯನ್ನು ನೀಡಲು ಸರ್ಕಾರವು ವಿಳಂಬ ಮಾಡಿದರೆ, ಅದು ನಿಮಗೆ ಆ ತೆರಿಗೆ ಹಣದ ಮೇಲೆ ಬಡ್ಡಿಯನ್ನು ನೀಡುತ್ತದೆ (ವಿಳಂಬಿತ ತೆರಿಗೆ ಮರುಪಾವತಿಯ ಮೇಲಿನ ಬಡ್ಡಿ). ಮರುಪಾವತಿ ಯಾವಾಗ ಆಗುತ್ತದೆಯೂ ಆ ದಿನಾಂಕದವರೆಗೆ ಬಡ್ಡಿಯನ್ನು ಸರ್ಕಾರ ನೀಡುತ್ತದೆ. ಆದರೆ, ನೀವು ಸಲ್ಲಿಸಿರುವ ಐಟಿ ರಿಟರ್ನ್ಸ್‌ಅನ್ನು ನಿಗದಿತ ದಿನಾಂಕದೊಳಗೆ ಸಲ್ಲಿಕೆ ಮಾಡಿದ್ದರೆ ಮಾತ್ರವೇ ಈ ಬಡ್ಡಿ ಹಣ ನಿಮಗೆ ಸಿಗುತ್ತದೆ.

Latest Videos

ಇನ್ನು ಸರ್ಕಾರ ನಿಮಗೆ ಎಷ್ಟು ಬಡ್ಡಿ ನೀಡುತ್ತದೆ ಎನ್ನುವ ಕುತೂಲವವೂ ಇರಬಹುದು. ನಿಮಗರ ಪ್ರತಿ ತಿಂಗಳು ಶೇ.0.5 ಅಂದರೆ, ವಾರ್ಷಿಕವಾಗಿ ಶೇ. 6ರಷ್ಟು ಬಡಿ ನೀಡುತ್ತದೆ. ಈ ಬಡ್ಡಿಯನ್ನು ನಿಮಗೆ ಏಪ್ರಿಲ್ 1 ರಿಂದ ಮರುಪಾವತಿ ಪಡೆಯುವ ದಿನಾಂಕದವರೆಗೆ ನೀಡಲಾಗುತ್ತದೆ. ಇದರಲ್ಲಿ ಇನ್ನೊಂದು ಪ್ರಮುಖ ನಿಯಮವಿದೆ ಅದೇನೆಂದರೆ, ನೀವು ಪಡೆಯುವ ಮರುಪಾವತಿಯು ನಿಮ್ಮ ಒಟ್ಟು ತೆರಿಗೆಯ 10% ಕ್ಕಿಂತ ಕಡಿಮೆಯಿದ್ದರೆ, ನೀವು ಯಾವುದೇ ಬಡ್ಡಿಯನ್ನು ಪಡೆಯುವುದಿಲ್ಲ.

ಆದಾಯ ತೆರಿಗೆ ಇಲಾಖೆಯಿಂದ ರೀಫಂಡ್‌ ಬರೋದು ತಡವಾಗುತ್ತಿದೆ ಎಂದಾದಲ್ಲಿ, ನೀವು ನಿಮ್ಮ ಈಮೇಲ್‌ಅನ್ನು ಪರಿಶೀಲಿಸುತ್ತಲೇ ಇರಬೇಕು. ಫೈಲ್‌ ಸಲ್ಲಿಕೆಯಲ್ಲಿ ಏನಾದರೂ ತಪ್ಪಾಗಿದ್ದಲ್ಲಿ, ಐಟಿ ಇಲಾಖೆ ಕಳಿಸಿರುವ ಈ ಮೇಲ್‌ಅನ್ನು ನೀಡು ಪರಿಶೀಲನೆ ಮಾಡಬೇಕು. ಹಾಗೇನಾದರೂ ಬಂದಿದ್ದಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು.  ಅಂತಹ ಯಾವುದೇ ಮಾಹಿತಿ ಇಲ್ಲದಿದ್ದರೆ, ಐಟಿ ಇಲಾಖೆಯ ಸೈಟ್‌ಗೆ ಹೋಗಿ ಮತ್ತು ನಿಮ್ಮ ಫೈಲ್‌ನ ಸ್ಥಿತಿ ಪರಿಶೀಲಿಸಿ. ಇದಕ್ಕಾಗಿ, ಮೊದಲು https://tin.tin.nsdl.com/oltas/refundstatuslogin.html ಗೆ ಹೋಗಬಬೇಕು. ಕೆಳಗೆ ಸ್ಕ್ರೋಲ್ ಮಾಡುವಾಗ, ನಿಮಗೆ ಎರಡು ರೀತಿಯ ಮಾಹಿತಿಯನ್ನು ಕೇಳಲಾಗುತ್ತದೆ, ಒಂದು ಪ್ಯಾನ್ ಸಂಖ್ಯೆ ಮತ್ತು ಎರಡನೆಯದು ಮರುಪಾವತಿ ಬಾಕಿ ಇರುವ ವರ್ಷ, ಈ ವಿವರಗಳನ್ನು ನಮೂದಿಸಿ. ಈಗ ನೀವು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು. ಆ ಬಳಿಕ ನಿಮ್ಮ ಸ್ಟೇಟಸ್‌ ಸಿಗುತ್ತದೆ.

ಹಿಂದಿನ ತೆರಿಗೆ ಬಾಕಿ ಇದ್ಯಾ? ಹಾಗಿದ್ರೆ ನಿಮ್ಮ ರೀಫಂಡ್‌ ತಡವಾಗೋದು ಖಚಿತ!

ರಿಟರ್ನ್ ಸಲ್ಲಿಸಿದ ನಂತರ ಇ-ಪರಿಶೀಲನೆ ಮಾಡದಿರುವುದು, ಆದಾಯ ತೆರಿಗೆ ಇಲಾಖೆ ಕಳುಹಿಸಿದ ಇಮೇಲ್‌ಗೆ ಪ್ರತಿಕ್ರಿಯಿಸದಿರುವುದು, ಟಿಡಿಎಸ್ ಹೊಂದಾಣಿಕೆಯಾಗುತ್ತಿಲ್ಲ, ತಪ್ಪು ಖಾತೆ ಸಂಖ್ಯೆ ಅಥವಾ ಐಎಫ್‌ಎಸ್‌ಸಿ ಕೋಡ್, ಮಾನ್ಯವಾಗದೇ ಇರುವ ಖಾತೆ, ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡದ ಖಾತೆ, ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರು ಮತ್ತುಬ್ಯಾಂಕ್ ಖಾತೆಯಲ್ಲಿ ಹೆಸರು ಸರಿಯಾಗಿ ಇಲ್ಲದೇ ಇರುವುದರಿಂದ ರೀಫಂಡ್‌ಗೆ ಸಮಸ್ಯೆ ಆಗಬಹುದು.

ITR Refund: ರೀಫಂಡ್‌ ಅಮೌಂಟ್‌ ಇನ್ನೂ ಬಂದಿಲ್ವಾ? ಹಾಗಿದ್ರೆ ಆದಾಯ ತೆರಿಗೆ ಇಲಾಖೆಯ ಈ 3 ನಿಯಮ ನೋಡಿ!

ರೀಫಂಡ್‌ ರಿಕ್ವೆಸ್ಟ್‌ ರಿಜೆಕ್ಟ್‌ ಕೂಡ ಆಗಿಲ್ಲ ಹಾಗೂ ರೀಫಂಡ್‌ ಕೂಡ ಬಂದಿಲ್ಲ ಎಂದಾದಲ್ಲಿ ನೀವು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ (incometax.gov.in) ದೂರು ನೀಡಬಹುದು. ಇದಲ್ಲದೆ, ನೀವು ಆದಾಯ ತೆರಿಗೆ ಇಲಾಖೆಯ ಟೋಲ್ ಫ್ರೀ ಸಂಖ್ಯೆ 1800-103-4455 ಗೆ ದೂರು ನೀಡಬಹುದು. ಕೆಲಸದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಈ ಸಂಖ್ಯೆಗೆ ಕರೆ ಮಾಡಬಹುದು. ಇದಲ್ಲದೆ, ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮ ದೂರನ್ನು ನೋಂದಾಯಿಸಬಹುದು.
 

click me!