Money In Bank: ರಾಷ್ಟ್ರೀಯ ಅಂಕಿ-ಅಂಶ ಕಚೇರಿ ತನ್ನ ವರದಿಯನ್ನು ನೀಡಿದ್ದು, ಇದರ ಪ್ರಕಾರ ದೇಶದ ಬ್ಯಾಂಕ್ ಅಕೌಂಟ್‌ಗಳಲ್ಲಿರುವ 187 ಟ್ರಿಲಿಯನ್ ರೂಪಾಯಿ ಹಣದಲ್ಲಿ ಕೇವಲ 39 ಟ್ರಿಲಿಯನ್ ಹಣ ಮಾತ್ರ ಮಹಿಳೆಯರದ್ದಾಗಿದೆ ಎಂದು ತಿಳಿಸಿದೆ.
ಬೆಂಗಳೂರು (ಆ.19): ದೇಶದಲ್ಲಿರುವ ಬ್ಯಾಂಕ್ ಅಕೌಂಟ್‌ಗಳಲ್ಲಿ ಒಟ್ಟು 187 ಲಕ್ಷ ಕೋಟಿ ರೂಪಾಯಿ ಹಣವಿದೆ ಎಂದು ರಾಷ್ಟ್ರೀಯ ಅಂಕಿ-ಅಂಶ ಕಚೇರಿ ತಿಳಿಸಿದ್ದು, ಇದರಲ್ಲಿ ಮಹಿಳೆಯರ ಪಾಲು ಕೇವಲ 39 ಲಕ್ಷ ಕೋಟಿ ರೂಪಾಯಿ ಅಂದರೆ, ಶೇ 20.8ರಷ್ಟು ಎಂದು ತಿಳಿಸಿದೆ. 2024ರ ಮಾರ್ಚ್ ವೇಳೆಗೆ 2.52 ಬಿಲಿಯನ್ ಬ್ಯಾಂಕ್ ಅಕೌಂಟ್‌ಗಳ ಪೈಕಿ ಶೇ. 36.4ರಷ್ಟು ಅಕೌಂಟ್‌ಗಳು ಮಾತ್ರವೇ ಮಹಿಳೆಯರದ್ದಾಗಿದೆ ಎಂದಿದೆ. ಇನ್ನು ನಗರ ಪ್ರದೇಶದ ಮಹಿಳೆಯರ ಬ್ಯಾಂಕ್ ಅಕೌಂಟ್‌ಗಳಲ್ಲಿ ಹೆಚ್ಚೂ ಕಡಿಮೆ ಹಣವೇ ಇಲ್ಲ ಎನ್ನುವಂಥ ವರದಿಯನ್ನು ನೀಡಿದೆ. ನಗರ ಪ್ರದೇಶದಲ್ಲಿ ವಾಸಿಸುವ ಮಹಿಳೆಯರ ಅಕೌಂಟ್‌ಗಳಲ್ಲಿ ಕೇವಲ 1.9 ಲಕ್ಷ ಕೋಟಿ ರೂಪಾಯಿ ಹಣವಿದೆ ಎಂದು ತಿಳಿಸಿದೆ. ಒಟ್ಟಾರೆ ದೇಶದ ಬ್ಯಾಂಕ್ ಅಕೌಂಟ್‌ಗಳ ಪೈಕಿ ಶೇ. 21ರಷ್ಟು ಹಣ ಮಾತ್ರ ಮಹಿಳೆಯರು ಹೊಂದಿದ್ದು, ಮಹಿಳೆಯ ಬ್ಯಾಂಕ್ ಅಕೌಂಟ್‌ಗಳ ಪ್ರಮಾಣವೂ ಸಮಾನುಪಾತದಲ್ಲಿಲ್ಲ ಎಂದು ಮಾಹಿತಿ ನೀಡಿದೆ. ರಾಷ್ಟ್ರೀಯ ಅಂಕಿ-ಅಂಶ ಕಚೇರಿ 'ಪುರುಷ ಹಾಗೂ ಮಹಿಳೆ' ವರದಿಯನ್ನು ನೀಡಿದ್ದು, ಇದರಲ್ಲಿ ಈ ಮಾಹಿತಿಗಳನ್ನು ತಿಳಿಸಿದೆ.
ಮಹಿಳೆಯರ ಬಳಿ ಇರುವ 39 ಲಕ್ಷ ಕೋಟಿ ರೂಪಾಯಿ ಡೆಪಾಸಿಟ್‌ಗಳು ಇದು ಹಿಂದೂ ಅವಿಭಜಿತ ಕುಟುಂಬಗಳು, ದೇಶದ ಪ್ರಜೆಗಳು, ರೈತರು, ವ್ಯಾಪಾರಿಗಳು, ವೃತ್ತಿಪರರು ಮತ್ತು ಸ್ವಯಂ ಉದ್ಯೋಗಿಗಳು, ವೇತನ ಮತ್ತು ವೇತನದಾರರು ಮತ್ತು ಇತರರ ಖಾತೆಗಳನ್ನು ಒಳಗೊಂಡಿದೆ.
undefined
ಗ್ರಾಮೀಣ ಮಹಿಳೆಯರ ಬಳಿಯೇ ಹೆಚ್ಚು ಹಣ: ನಗರ ಪ್ರದೇಶಗಳಲ್ಲಿ, ಒಟ್ಟು ಠೇವಣಿಗಳಲ್ಲಿ ಕೇವಲ 16.5% ಅಥವಾ ₹ 1.9 ಲಕ್ಷ ಕೋಟಿ ಮಹಿಳೆಯರಿಗೆ ಸೇರಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇದು 30% ಅಥವಾ 5.91 ಲಕ್ಷ ಕೋಟಿ ರೂಪಾಯಿ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಠೇವಣಿ ಏರಿಕೆಗೆ ಜನ್ ಧನ್ ಖಾತೆಗಳು ಕಾರಣ ಎನ್ನಲಾಗಿದೆ.
ಕಾರ್ಪೊರೇಟ್ ಹುದ್ದೆಗಳಲ್ಲಿ ಮಹಿಳೆಯರು: ಸೀನಿಯರ್ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಏರಿಕೆಯಾಗಿದೆ. 2017ರಲ್ಲಿ 23, 685 ಮಹಿಳೆಯರು ಈ ಸ್ಥಾನದಲ್ಲಿದ್ದರೆ, 2023ರಲ್ಲಿ ಈ ಸಂಖ್ಯೆ 34,879ಕ್ಕೆ ಏರಿಕೆಯಾಗಿದೆ. ಸೀನಿಯರ್ ಮ್ಯಾನೇಜ್‌ಮೆಂಟ್‌ಗಳಲ್ಲಿ ಪುರುಷರ ಸಂಖ್ಯೆಯಲ್ಲೂ ಏರಿಕೆಯಾಗಿದೆ. 150,300 ಪುರುಷರಿಂದ 186,900ಕ್ಕೆ ಏರಿಕೆಯಾಗಿದೆ. ಹಿರಿಯ ಮ್ಯಾನೇಜ್‌ಮೆಂಟ್‌ಗಳಲ್ಲಿ 186,000 ಪುರುಷರಿಗೆ ಹೋಲಿಸಿದರೆ, ಮಹಿಳೆಯ ಸಂಖ್ಯೆ (34,879 ) ಭಾರೀ ಕಡಿಮೆ ಎಂದು ವರದಿ ತಿಳಿಸಿದೆ. 1.9 ಮಿಲಿಯನ್ ಪುರುಷರಿಗೆ ಹೋಲಿಸಿದರೆ ಒಟ್ಟು 762,000 ಮಹಿಳೆಯರು ನಿರ್ದೇಶಕರ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ. ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಒಟ್ಟು ಮಹಿಳೆಯರ ಸಂಖ್ಯೆ 441,000 ಆಗಿದ್ದರೆ, 1.32 ಮಂದಿ ಪುರುಷರು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಸಂಪೂರ್ಣ ಮಾಹಿತಿ..