ನನಗೆ ಅಂಬಾನಿ ಅದಾನಿ ಎಂದರೆ ಅಲರ್ಜಿ ಏನಿಲ್ಲ: ಶಶಿ ತರೂರ್

By Anusha KbFirst Published Oct 9, 2022, 11:25 PM IST
Highlights

ನನಗೆ ಉದ್ಯಮಿಗಳಾದ ಅದಾನಿ ಅಂಬಾನಿ ಬಗ್ಗೆ ಅರ್ಲರ್ಜಿ ಏನಿಲ್ಲ ಎಂದು ಕಾಂಗ್ರೆಸ್ ನಾಯಕ, ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ಸಂಸದ ಶಶಿ ತರೂರ್ ಹೇಳಿದ್ದಾರೆ.

ಮುಂಬೈ: ನನಗೆ ಉದ್ಯಮಿಗಳಾದ ಅದಾನಿ ಅಂಬಾನಿ ಬಗ್ಗೆ ಅರ್ಲರ್ಜಿ ಏನಿಲ್ಲ ಎಂದು ಕಾಂಗ್ರೆಸ್ ನಾಯಕ, ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ಸಂಸದ ಶಶಿ ತರೂರ್ ಹೇಳಿದ್ದಾರೆ. ರಾಜಸ್ಥಾನದಲ್ಲಿ ಹೂಡಿಕೆ ಮಾಡುವುದಾಗಿ ಉದ್ಯಮಿ ಅದಾನಿ ಹೇಳಿಕೆ ಬಳಿಕ ಶಶಿ ತರೂರ್ ಅವರು ಈ ಹೇಳಿಕೆ ನೀಡಿದ್ದಾರೆ. ರಾಜಸ್ಥಾನದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರವಿದೆ. ಅಲ್ಲಿ ಉದ್ಯಮಿ ಗೌತಮ್ ಅದಾನಿ ಅವರು ಮುಂದಿನ ವರ್ಷ 65 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದ್ದರು. ಆಕ್ಬೋಬರ್ 7 ರಂದು ರಾಜಸ್ಥಾನದಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಅದಾನಿ ಈ ಘೋಷಣೆ ಮಾಡಿದ್ದಲ್ಲದೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪಕ್ಕದಲ್ಲೇ ಕುಳಿತಿದ್ದರು. ಆದರೆ ಸದಾ ಅದಾನಿ ಅಂಬಾನಿ ಅವರನ್ನು ಕಾಂಗ್ರೆಸ್ ಟೀಕಿಸುತ್ತಲೇ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರು ಉದ್ಯಮಿಗಳ ಪರವಾಗಿಯೇ ಕೆಲಸ ಮಾಡುತ್ತಾರೆ ದೇಶದ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಸದಾ ಟೀಕಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅದಾನಿ ಅವರು ರಾಜಸ್ಥಾನದಲ್ಲಿ ಹೂಡಿಕೆ ಘೋಷಣೆ ಮಾಡಿದ ಬಳಿಕ ಬಿಜೆಪಿ ಕಾಂಗ್ರೆಸ್ ಕಾಲೆಳೆಯಲು ಶುರು ಮಾಡಿತ್ತು. 

ಈ ಮಧ್ಯೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್ ಹೇಳಿಕೆಯನ್ನೇ ಮತ್ತೆ ಪ್ರತಿಧ್ವನಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ರಾಜಸ್ಥಾನದಲ್ಲಿ 65 ಸಾವಿರ ಕೋಟಿ ಹಣವನ್ನು  ಹೂಡಿಕೆ ಮಾಡುವುದಾಗಿ ಗೌತಮ್ ಅದಾನಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ರಾಜಸ್ಥಾನ ಸಿಎಂ, ಅದಾನಿ ಅವರನ್ನು ರಾಜ್ಯಕ್ಕೆ ಸ್ವಾಗತಿಸುವುದಾಗಿ ಹೇಳಿದ್ದರು. ಈ ಬಗ್ಗೆ ಮುಂಬೈನಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದ ಶಶಿ ತರೂರ್, ನಿಜವಾದ ಕಾಂಗ್ರೆಸ್ ಹೇಳುವುದು ಹಾಗೂ ರಾಜಸ್ಥಾನ ಸಿಎಂ ಹೇಳಿದ್ದು ಒಂದೇ, ಯಾರಾದರೂ ಬಂದು ನನ್ನ ರಾಜ್ಯಕ್ಕೆ ಬಂಡವಾಳ ಹೂಡಲು, ಉದ್ಯೋಗ ಸೃಷ್ಟಿಸಲು, ಆದಾಯವನ್ನು ತರಲು ಸಿದ್ಧರಿದ್ದರೆ, ಖಂಡಿತ ನನಗೆ ಅದು ಬೇಕು ಎಂದರು.

Latest Videos

ಶಶಿ ತರೂರ್‌ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯೇ ತಪ್ಪು, ಕಾಶ್ಮೀರ, ಲಡಾಖ್‌ ಪ್ರದೇಶವೇ ನಾಪತ್ತೆ!

ತಿರುವನಂತಪುರಂನಲ್ಲಿ ವಿಮಾನ ನಿಲ್ದಾಣಕ್ಕಾಗಿ ಅದಾನಿ ಅವರು ಬಿಡ್ ಮಾಡಿದಾಗಲೂ ನನ್ನ ಅಭಿಪ್ರಾಯ ಇದೇ ಆಗಿತ್ತು. ಅದಾನಿ ಅವರು ಅದನ್ನು ನ್ಯಾಯಯುತವಾಗಿ  ಗೆದ್ದರು ಮತ್ತು ನಾವು ಅವರೊಂದಿಗೆ ಸಹಕರಿಸಬೇಕು ಮತ್ತು ಹೀಗೆಯೇ ನನ್ನ ಸ್ವಂತ ಕ್ಷೇತ್ರದಲ್ಲಿ ನಡೆದಿದೆ ಎಂದು ಶಶಿ ತರೂರ್ (Shashi Tharoor) ಹೇಳಿದರು. ನೋಡಿ, ನಾನು 1991 ರಿಂದಲೂ ಉದಾರೀಕರಣವನ್ನು (liberalisation) ಬಹಳವಾಗಿ ಸ್ವಾಗತಿಸಿರುವ ಕಾಂಗ್ರೆಸ್ ಪಕ್ಷದವನಾಗಿದ್ದೇನೆ (Congress party). ನಮ್ಮ ದೇಶದಲ್ಲಿ ವ್ಯಾಪಾರವನ್ನು ಈಗಿರುವಂತೆ ಅತಿಯಾಗಿ ನಿಯಂತ್ರಿಸಬಾರದು ಎಂದು ನಾನು ಬಯಸುತ್ತೇನೆ. ಆದರೆ ಅದೇ ಸಮಯದಲ್ಲಿ ನನಗೆ ಆದಾಯ ಬೇಕು. ಈ ಆದಾಯ ಇದು ತಳಮಟ್ಟದಲ್ಲಿರುವವರಿಗೆ ಮತ್ತು ಸವಲತ್ತಿನಿಂದ ಹೊರಗುಳಿದವರಿಗೆ ವಿತರಿಸಲು ಸರ್ಕಾರಕ್ಕೆ ಸಿಗುತ್ತದೆ ಎಂದು ತರೂರ್ ಹೇಳಿದರು.

Rajasthanದಲ್ಲಿ ಅದಾನಿ 65000 ಕೋಟಿ ರೂ. ಹೂಡಿಕೆ: ಕೈಗೆ ಬಿಜೆಪಿ ಟಾಂಗ್‌

ಇದೇ ವೇಳೆ ಅದಾನಿ ಹಾಗೂ ಅಂಬಾನಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇದ್ದಾರೆ ಎಂಬ ತಮ್ಮದೇ ಸ್ವ ಪಕ್ಷದ ನಿರಂತರ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಶಶಿ ತರೂರ್ ಅವರು, ನನಗೆ ಉದ್ಯಮಿಗಳಾದ ಅದಾನಿ (Adani) ಹಾಗೂ ಅಂಬಾನಿ (Ambani) ಬಗ್ಗೆಯಾಗಲಿ ಅಥವಾ ನನ್ನ ದೇಶದ ಜನರ ಹಿತಾಸಕ್ತಿಗಳನ್ನು ಪೂರೈಸಲು ಸಿದ್ಧರಿರುವ, ನನ್ನ ದೇಶದಲ್ಲಿ ಹೂಡಿಕೆ ಮಾಡುವ ಮೂಲಕ, ಭಾರತೀಯರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಬಯಸುವ ಇತರ ಅನಿಗಳ ಬಗ್ಗೆಯಾಗಲಿ ಯಾವುದೇ  ಅಲರ್ಜಿ ಇಲ್ಲ ಎಂದರು. 

ಆದರೆ ರಾಜಸ್ಥಾನದಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್  ಅವರು ಉದ್ಯಮಿ ಅದಾನಿ ಪಕ್ಕದಲ್ಲಿ ಕುಳಿತಿದ್ದರೂ ಸಹ, ಕಾಂಗ್ರೆಸ್ ಸಂಸದ ಹಾಗೂ ಪ್ರಸ್ತುತ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ (Rahul Gandhi) ಅವರು ಕೇಂದ್ರ ಸರ್ಕಾರದ ಬಂಡವಾಳಶಾಹಿ ಸ್ನೇಹಿತರ (capitalist friends) ಸಾಲವನ್ನು ಮನ್ನಾ ಮಾಡುವುದರ ಕುರಿತಾಗಿ  ಆರೋಪಿಸಿ ಟ್ವೀಟ್ ಮಾಡುವುದನ್ನು  ಮಾತ್ರ  ನಿಲ್ಲಿಸಿಲ್ಲ.
 

click me!