ವೈಯುಕ್ತಿ, ಕುಟುಂಬ ಸಂಪತ್ತು ಮುಖ್ಯವಲ್ಲ, ನಾನು ಸಾಮಾನ್ಯ ಟ್ರಸ್ಟಿ ಅಷ್ಟೆ:ಅಂಬಾನಿ ಸರಳತೆಗೆ ಮೆಚ್ಚುಗೆ!

By Chethan Kumar  |  First Published Aug 30, 2024, 11:06 AM IST

ನನ್ನ  ವೈಯುಕ್ತಿಕ ಸಂಪತ್ತು, ಕುಟುಂಬದ ಆಸ್ತಿ ಕುರಿತು ನಾನು ಪ್ರಾಮುಖ್ಯತೆ ನೀಡಲ್ಲ. ರಿಲಯನ್ಸ್ ಸಂಸ್ಥೆಯಲ್ಲಿ ನಾನೊಬ್ಬ ಸಾಮಾನ್ಯ ಟ್ರಸ್ಟಿ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಶ್ರೀಮಂತ ಉದ್ಯಮಿ ಮಾತುಗಳು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.


ಮುಂಬೈ(ಆ.30) ರಿಲಯನ್ಸ್ ದೊಡ್ಡ ಸಂಸ್ಥೆಯಲ್ಲಿ ನಾನು, ಕುಟುಂಬ ಸದಸ್ಯರು, ಉನ್ನತ ಮ್ಯಾನೇಜ್ಮೆಂಟ್ ಕಮಿಟಿ ಸದಸ್ಯರು ಸಾಮಾನ್ಯ ಟ್ರಸ್ಟಿಗಳು ಮಾತ್ರ. ವೈಯುಕ್ತಿಕ ಸಂಪತ್ತು, ಕುಟುಂಬದ ಸಂಪತ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಲ್ಲ ಎಂದು ರಿಲಯನ್ಸ್ ಗ್ರೂಪ್ ಚೇರ್ಮೆನ್ ಮುಕೇಶ್ ಅಂಬಾನಿ ಹೇಳಿದ್ದಾರೆ. ಮುಂಬೈನಲ್ಲಿ ನಡೆದ 47ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ಸಂಪತ್ತು, ಆಸ್ತಿ ಅಂತಸ್ತು ಎಲ್ಲವೂ ಮುಖ್ಯವಾಗುವುದಿಲ್ಲ. ಈ ದೊಡ್ಡ ಸಂಸ್ಥೆಯ ಜವಾಬ್ದಾರಿಯನ್ನು ಮುಂದಿನ ಪೀಳಿಗೆ ಹಸ್ತಾಂತರಿಸುವುದು ಅತೀ ಪ್ರಮುಖವಾಗ ಕೆಲಸ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. 

ಸಂಸ್ಥೆಗೆ ಉತ್ತಮ ಅಡಿಪಾಯ ಹಾಕಿ ಬಳಿಕ ಸಂಸ್ಥೆಯ ಜವಾಬ್ದಾರಿಗಳನ್ನು ಅದೇ ಗೌರವಯುತವಾಗಿ ಮುನ್ನಡೆಸಿಕೊಂಡು ಹೋಗುವುದು ಸವಾಲು. ಇದು ಪೀಳಿಗೆಯಿಂದ ಪೀಳಿಗೆಗೆ ಸರಾಗವಾಗಿ ನಡೆಸಿಕೊಂಡು ಹೋಗಲು ಅಡಿಪಾಯದ ಅವಶ್ಯಕತೆ ಇದೆ ಎಂದಿದ್ದಾರೆ. ರಿಲಯನ್ಸ್ ಪ್ರತಿ ಬಾರಿ ಹೊಸ ಸವಾಲುಗಳನ್ನು ಸ್ವೀಕರಿಸುತ್ತದೆ. ಉತ್ತಮ ನಾಯಕತ್ವದ ಮೂಲಕ ವ್ಯವಹಾರ ವಿಸ್ತರಿಸುವ ಸವಾಲುಗಳನ್ನು ರಿಲಯನ್ಸ್ ಪ್ರತಿ ಬಾರಿ ಅನ್ವೇಷಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

Latest Videos

undefined

ಭಾರತದ ಶ್ರೀಮಂತರ ಪಟ್ಟಿ; ಅಂಬಾನಿಗೆ ಕೈತಪ್ಪಿದ ಪಟ್ಟ, ಟಾಪ್ 10 ಲಿಸ್ಟ್‌ನಲ್ಲಿ 21 ವರ್ಷದ ಉದ್ಯಮಿ!

ಜಿಯೋ ಈಗಾಗಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆರಂಭಿಸಲು ತಯಾರಿ ನಡೆಸುತ್ತಿದೆ ಎಂದಿದ್ದಾರೆ. ಸಂಪೂರ್ಣ ಎಐ  ಒಳಗೊಂಡಿರುವ ತಂತ್ರಜ್ಞಾನ, ಅದಕ್ಕೆ ತಕ್ಕ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜಿಯೋ ಬ್ರೈನ್ ಅಡಿಯಲ್ಲಿ ಮಹತ್ವದ ಅಧ್ಯಾಯ ಆರಂಭಗೊಳ್ಳಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಜಾಮ್‌ನಗರದಲ್ಲಿ ಗಿಗಾವ್ಯಾಟ್-ಪ್ರಮಾಣದ ಆರ್ಟಿಫಿಶಿಯಲ್ ಇಂಟಲಿಜೆನ್ಸ್  ಡೇಟಾ ಕೇಂದ್ರ ಪ್ರಾರಂಭಕ್ಕೆ ರಿಲಯನ್ಸ್ ತಯಾರಿ ಮಾಡಿಕೊಂಡಿದೆ. ವಿಶೇಷ ಅಂದರೆ ಗ್ರೀನ್ ಪ್ರಾಜೆಕ್ಟ್ ಅಡಿಯಲ್ಲಿ ಈ ಯೋಜನೆ ಜಾರಿಯಾಗಲಿದೆ. ಹೀಗಾಗಿ ಪರಿಸರಕ್ಕೆ ಪೂರಕವಾಗಿ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಜಾಗತಿಕ ಮಟ್ಟದಲ್ಲಿ ಎಐ ಇಂಟರ್‌ಫೇಸ್ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದೇ ರಿಲಯನ್ಸ್ ಗುರಿಯಾಗಿದೆ ಎಂದಿದ್ದಾರೆ.  ಇದೇ ವೇಳೆ ರಿಲಯನ್ಸ್ ಇಂಡಸ್ಟ್ರಿ ಷೇರುದಾರರಿಗೆ 1:1 ಅನುಪಾತದಲ್ಲಿ ಬೋನಸ್ ಷೇರು ವಿತರಣೆಗೆ ಪ್ರಸ್ತಾಪ ಇಡಲಾಗಿದೆ. 

ಅತ್ಯಂತ ಶ್ರೀಮಂತ ವ್ಯಕ್ತಿ ಯಾರು? ಮುಕೇಶ್ ಅಂಬಾನಿ, ಅದಾನಿ, ರತನ್ ಟಾಟಾ ಅಲ್ಲ!
 

click me!