ರಿಲಯನ್ಸ್ ಉದ್ಯಮದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಜಿಯೋ ಬಳಕೆದಾರರಿಗೆ 100GB ಉಚಿತ ಕ್ಲೌಡ್ ಸ್ಟೋರೇಜ್ ಘೋಷಿಸಿದ್ದಾರೆ. ಗ್ರಾಹಕರು ತಮ್ಮ ಫೋಟೋ, ವಿಡಿಯೋ ಮತ್ತು ಇತರ ಡಿಜಿಟಲ್ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಈ ಸೌಲಭ್ಯವನ್ನು ಬಳಸಬಹುದು.
ಮುಂಬೈ: ರಿಲಯನ್ಸ್ ಉದ್ಯಮದ ಸ್ಥಾಪಕ ಮುಕೇಶ್ ಅಂಬಾನಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಬಳಕೆದಾರಿಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ. ಇನ್ಮುಂದೆ ಜಿಯೋ ಬಳಕೆದಾರರಿಗೆ 100 GB ಉಚಿತ ಕ್ಲೌಡ್ ಸ್ಟೋರೇಜ್ ಸಿಗಲಿದೆ. ಗ್ರಾಹಕರು ತಮ್ಮ ಎಲ್ಲಾ ಫೋಟೋ ಮತ್ತು ವಿಡಿಯೋ, ಡಾಕ್ಯೂಮೆಂಟ್ ಸೇರಿದಂತೆ ಎಲ್ಲಾ ಡಿಜಿಟಲ್ ಕಂಟೆಂಟ್‌ಗಳನ್ನು ಇಲ್ಲಿ ಸೇವ್ ಮಾಡಿಕೊಳ್ಳಬಹುದು. ಇಲ್ಲಿ ಸೇವ್ ಮಾಡಿರುವ ಎಲ್ಲಾ ದಾಖಲೆಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ ಎಂದು ಮುಕೇಶ್ ಅಂಬಾನಿ ಹೇಳಿಕೆ ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ಕೆಲವರಿಗೆ ಇದಕ್ಕಿಂತಲೂ ಹೆಚ್ಚಿನ ಸ್ಟೋರೇಜ್ ಅವಶ್ಯಕತೆ ಇರುತ್ತದೆ. ಕೈಗೆಟಕುವ ದರದಲ್ಲಿ ಪ್ಲಾನ್‌ಗಳನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ಮುಕೇಶ್ ಅಂಬಾನಿ ಭರವಸೆ ನೀಡಿದ್ದಾರೆ. ಈ ದೀಪಾವಳಿಯಿಂದ Jio AI-Cloud ವೆಲ್‌ಕಮ್ ಆಫರ್ ಲಾಂಚ್ ಮಾಡುವ ಸಂಬಂಧ ಪ್ಲಾನಿಂಗ್ ಮಾಡಲಾಗುವುದು ಎಂದು ತಮ್ಮ ಮುಂದಿನ ಯೋಜನೆಗಳ ಮಾಹಿತಿಯನ್ನು ತೆರೆದಿಟ್ಟರು. ಕ್ಲೌಡ್ ಡೇಟಾ ಸಂಗ್ರಹಣೆ ಮತ್ತು ಡೇಟಾ-ಚಾಲಿತ AI ಸೇವೆಗಳು ಎಲ್ಲರಿಗೂ, ಎಲ್ಲೆಡೆ ಲಭ್ಯವಿರುತ್ತವೆ. Jio AI-Cloud ಸೇವೆಗಳು ಸಹ ಬೆಲೆಗಳು ಸ್ನೇಹಮಯಿ ಆಗಿರಲಿವೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಅನ್‌ಲಿಮಿಟೆಡ್ ಕಾಲಿಂಗ್ ಪ್ಲಾನ್ ಬಂದ್ ಆಗುತ್ತಾ? ಬಳಕೆದಾರರಿಗೆ ಶುರುವಾಯ್ತು ಹೊಸ ಟೆನ್ಷನ್!
ಇದೇ ವೇಳೆ ಮಾತನಾಡಿದ ಅಕಾಶ್ ಅಂಬಾನಿ, ಇಂದು ನಾವು Jio Home ಎಂಬ ಹೊಸ ಫೀಚರ್ ಪರಿಚಯಿಸಲು ಉತ್ಸುಕರಾಗಿದ್ದೇವೆ. ಈ ಹೊಸ ಆಯ್ಕೆ ನಿಮ್ಮ ಮನೆಯನ್ನು ಮೊದಲಗಿಂತಲೂ ಕೆನಕ್ಟೆಡ್, ಕನ್ವಿನಿಯೆಂಟ್ ಮತ್ತು ಸ್ಮಾರ್ಟ್ ಮಾಡಲಿದೆ. ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಡಿಜಿಟಲ್ ಹೋಮ್ ಸರ್ವಿಸ್‌ಗಳನ್ನು ಪರಿಚಯಿಸುತ್ತಿದೆ. ಇಂದು ಲಕ್ಷಾಂತರ ಜನರು ಅಲ್ಟ್ರಾ ಫಾಸ್ಟ್ ಇಂಟರ್‌ನೆಟ್, ಸಿಮ್‌ಲೆಸ್ ವಿಡಿಯೋ ಸ್ಟ್ರೀಮಿಂಗ್ ಮತ್ತು ಓಟಿಟಿ ಅಪ್ಲಿಕೇಶನ್ ಗಳ ಮನರಂಜನೆಯನ್ನು ಆನಂದಿಸುತ್ತಿದ್ದಾರೆ. ಜಿಯೋ ಹೋಮ್ ಬ್ರಾಡ್‌ಬ್ಯಾಂಡ್, ಜಿಯೋ ಸೆಟ್ ಟಾಪ್ ಬಾಕ್ಸ್ ಸುಧಾರಿತ ತಂತ್ರಜ್ಞಾನವಾಗಿದೆ. ಸಾಧ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಶಕ್ತಿಮೀರಿ ಪ್ರಯತ್ನಿಸೋದು ನಮ್ಮ ಜಿಯೋ ಸಂಸ್ಥೆಯ ಗುರಿಯಾಗಿದೆ ಎಂದು ಆಕಾಶ್ ಅಂಬಾನಿ ಹೇಳಿದರು.
ಅದಾನಿ ಒಡೆತನದ ಈ ಕಂಪನಿಯ ನೌಕರನ ತಿಂಗಳ ಸಂಬಳ 10 ಲಕ್ಷ ರೂ: ಇಲ್ಲಿ ಕೆಲಸ ಸಿಕ್ರೆ ಸ್ವರ್ಗಕ್ಕೆ ಮೂರೇ ಗೇಣು!