ಭಾರತದ ಶ್ರೀಮಂತರ ಪಟ್ಟಿ; ಅಂಬಾನಿಗೆ ಕೈತಪ್ಪಿದ ಪಟ್ಟ, ಟಾಪ್ 10 ಲಿಸ್ಟ್‌ನಲ್ಲಿ 21 ವರ್ಷದ ಉದ್ಯಮಿ!

By Chethan Kumar  |  First Published Aug 29, 2024, 2:41 PM IST

ಹುರುನ್ ಇಂಡಿಯಾ ಸಂಸ್ಥೆ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ನಂ.1 ಸ್ಥಾನದಲ್ಲಿದ್ದ ಮುಕೇಶ್ ಅಂಬಾನಿ 2ನೇ ಸ್ಥಾನಕ್ಕೆ ಜಾರಿದ್ದಾರೆ.ಈ ಪಟ್ಟಿಯಲ್ಲಿ 21ರ ಹರೆಯ ಝೆಪ್ಟೋ  ಸಂಸ್ಥಾಪಕ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ.
 


ನವದೆಹಲಿ(ಆ.29) ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಇದೀಗ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಟಾಪ್ 10 ಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆಯಾಗಿದೆ. ಕಳೆದ ಬಾರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಮುಕೇಶ್ ಅಂಬಾನಿ ಈ ಬಾರಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹುರುನ್ ಇಂಡಿಯಾ 2024ರ ಪಟ್ಟಿ ಪ್ರಕಾರ ಗೌತಮ್ ಅದಾನಿ ಇದೀಗ ಭಾರತದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಾನಿ ಒಟ್ಟು ಆಸ್ತಿ ಬರೋಬ್ಬರಿ 11.6 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಹುರುನ್ ಇಂಡಿಯಾ ಕೆಲ ಮಹತ್ವದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಏಷ್ಯಾದಲ್ಲಿ ಭಾರತದ ಶ್ರೀಮಂತಿಕೆ ಹೆಚ್ಚಾಗುತ್ತಿದೆ ಎಂದು ವರದಿ ನೀಡಿದ್ದರೆ, ಚೀನಾದ ಶ್ರೀಮಂತಿಕೆ ಕುಸಿದಿದೆ ಎಂದಿದೆ. ಭಾರತೀಯರ ಸಂಪತ್ತು ಶೇಕಡಾ 29 ರಷ್ಟು ಹೆಚ್ಚಾಗಿದೆ. ಇದೇ ವೇಳೆ ಚೀನಾದ ಸಂಪತ್ತು ಶೇಕಡಾ 25 ರಷ್ಟು ಕುಸಿತ ಕಂಡಿದೆ ಎಂದು ಹುರುನ್ ಇಂಡಿಯಾ ವರದಿ ನೀಡಿದೆ.

Tap to resize

Latest Videos

undefined

ಮುಕೇಶ್ ಅಂಬಾನಿಗೆ ಬಿಗ್ ಶಾಕ್- 12ನೇ ಸ್ಥಾನ ಕುಸಿತ, ಹಿಂದಿಕ್ಕಿದ ಉದ್ಯಮಿ ಯಾರು?

ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಒಟ್ಟು ಆಸ್ತಿ 1,014,700 ಕೋಟಿ ರೂಪಾಯಿ. ಹೆಚ್‌ಸಿಎಲ್ ಟೆಕ್ನಾಲಜಿಯ ಶಿವನಾಡರ್ ಹಾಗೂ ಕುಟುಂಬ ಶ್ರೀಮಂತಿಕೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಶಿವನಾಡರ್ ಹಾಗೂ ಕುಟುಂಬದ ಒಟ್ಟು ಆಸ್ತಿ 314,000 ಕೋಟಿ ರೂಪಾಯಿ. ಇನ್ನು ಸೀರಮ್ ಇನ್ಸ್‌ಸ್ಟಿಟ್ಯೂಟ್ ಇಂಡಿಯಾ ಸಂಸ್ಥೆಯ ಸೈರಸ್ ಪೂನಾವಲ 4ನೇ ಶ್ರೀಮಂತ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಸನ್ ಫಾರ್ಮಾ ಕಂಪನಿಯ ಮುಖ್ಯಸ್ಥ ದಿಲೀಪ್ ಶಾಂಘ್ವಿ 5ನೇ ಸ್ಥಾನದಲ್ಲಿದ್ದರೆ.

ಇನ್ನು ಗೋಪಿಚಂದ್ ಹಿಂದುಜಾ ಕುಟುಂಬ, ರಾಧಾಕೃಷ್ಣ ದಮಾನಿ ಹಾಗೂ ಕುಟುಂಬವೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ವಿಶೇಷ ಅಂದರೆ ಟಾಪ್ 10 ಪಟ್ಟಿಯಲ್ಲಿ ಈ ಬಾರಿ 21 ವರ್ಷದ ಝೆಪ್ಟೋ ಸಹ ಸಂಸ್ಥಾಪಕ ಕೈವಲ್ಯ ವೊಹ್ರಾ ಹಾಗೂ ಮತ್ತೊರ್ವ ಸಹ ಸಂಸ್ಥಾಪಕ 22 ವರ್ಷದ ಆದಿತ್ ಪಲಿಚಾ ಕಾಣಿಸಿಕೊಂಡಿದ್ದಾರೆ. ಇನ್ನು 7,300 ಕೋಟಿ ರೂಪಾಯಿ ಆಸ್ತಿ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಅತ್ಯಂತ ಶ್ರೀಮಂತ ವ್ಯಕ್ತಿ ಯಾರು? ಮುಕೇಶ್ ಅಂಬಾನಿ, ಅದಾನಿ, ರತನ್ ಟಾಟಾ ಅಲ್ಲ!

ಶಾರುಖ್ ಖಾನ್ ಮಾಲೀಕತ್ವದ ರೆಡ್ ಚಿಲ್ಲಿಸ್ ಪ್ರೊಡಕ್ಷನ್ ಹೌಸ್ ಆದಾಯ ಡಬಲ್ ಆಗಿದೆ. ಇದರ ಜೊತೆಗೆ ಶಾರುಖ್ ಮಾಲೀಕತ್ವದ ಕೋಲ್ಕತಾ ನೈಟ್ ರೈಡರ್ಸ್‌ನಿಂದ ಹರಿದು ಬಂದ ಆದಾಯದಿಂದ ಶಾರುಖ್ ಖಾನ್ ಒಟ್ಟು ಆದಾಯ ಹೆಚ್ಚಾಗಿದೆ.

click me!