ಹೈದರಾಬಾದ್‌ನ (Hyderabad) ಉದ್ಯಮಿಯೊಬ್ಬರು (Businessman) ತಾವು ಖರೀದಿಸಿದ ಹೊಸ ಖಾಸಗಿ ಹೆಲಿಕಾಪ್ಟರ್‌ಗೆ ಪೂಜೆ ಮಾಡುವ ಸಲುವಾಗಿ ಹೆಲಿಕಾಪ್ಟರ್ ಅನ್ನೇ ದೇಗುಲದ ಬಳಿ ತರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಹೈದರಾಬಾದ್: ಹೊಸದಾಗಿ ಕಾರು ಬೈಕ್, ಆಟೋ ಲಾರಿ ಮುಂತಾದವುಗಳನ್ನು ಖರೀದಿಸಿದಾಗ ಬಳಸುವ ಮೊದಲು ಆ ವಾಹನವನ್ನು ದೇಗುಲದ ಬಳಿ ತೆಗೆದಕೊಂಡು ಹೋಗಿ ಅಥವಾ ವಾಹನ ಇದ್ದಲ್ಲಿಗೆ ಅರ್ಚಕರನ್ನು ಕರೆಸಿ ಹೊಸ ವಾಹನಕ್ಕೆ ಪೂಜೆ ಮಾಡುವುದನ್ನು ನೀವೆಲ್ಲರೂ ನೋಡಿರಬಹುದು, ಮಾಡಿರಲೂಬಹುದು. ಆದರೆ ಹೆಲಿಕಾಪ್ಟರ್‌ಗೆ ಪೂಜೆ ಮಾಡಿದ್ದನ್ನು ಎಲ್ಲಾದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ನೋಡಿ. ಹೈದರಾಬಾದ್‌ನ (Hyderabad) ಉದ್ಯಮಿಯೊಬ್ಬರು (Businessman) ತಾವು ಖರೀದಿಸಿದ ಹೊಸ ಖಾಸಗಿ ಹೆಲಿಕಾಪ್ಟರ್‌ಗೆ ಪೂಜೆ ಮಾಡುವ ಸಲುವಾಗಿ ಹೆಲಿಕಾಪ್ಟರ್ ಅನ್ನೇ ದೇಗುಲದ ಬಳಿ ತರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಬೊನ್ನಿಪಲ್ಲಿ ಶ್ರೀನಿವಾಸ್ ರಾವ್ ಎಂಬುವವರೇ ಹೀಗೆ ತಮ್ಮ ಹೆಲಿಕಾಪ್ಟರ್ ಅನ್ನು ಮೊದಲ ಪೂಜೆಗಾಗಿ ದೇಗುಲದ ಬಳಿ ಕರೆ ತಂದಿರುವ ಉದ್ಯಮಿ. ಪ್ರತಿಮಾ ಗ್ರೂಪ್ (Prathima Group) ಎಂಬ ಸಂಸ್ಥೆಯ ಮಾಲೀಕರಾಗಿರುವ ಶ್ರೀನಿವಾಸ್ ರಾವ್ (Srinivas Rao) ಅವರು ವಾಹನ ಪೂಜೆಗಾಗಿ ತಮ್ಮ ಹೊಸ ಹೆಲಿಕಾಪ್ಟರ್ ACH-135 ನ್ನು ಯದದ್ರಿಯ (Sri Lakshmi Narasimha Swamy temple in Yadadri) ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದ ಬಳಿ ಕರೆ ತಂದಿದ್ದಾರೆ. ಹೈದರಾಬಾದ್‌ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಯದದ್ರಿಯ ದೇಗುಲಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಶ್ರೀನಿವಾಸ್ ರಾವ್ ಅವರು ದೇಗುಲದ ಅರ್ಚಕರ ಮೂಲಕ ಹೆಲಿಕಾಪ್ಟರ್‌ಗೆ ವಿಶೇಷ ಪೂಜೆ ಮಾಡಿದ್ದಾರೆ. ಉದ್ಯಮಿ ಹಾಗೂ ಅವರ ಕುಟುಂಬದವರು ಈ ಪೂಜೆಯಲ್ಲಿ (Pooja) ಭಾಗಿಯಾಗಿದ್ದರು. ಮೂವರು ಅರ್ಚಕರ ಪೌರೋಹಿತ್ಯದಲ್ಲಿ ಈ ಹೊಸ ಹೆಲಿಕಾಪ್ಟರ್‌ಗೆ ಯದದ್ರಿಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ಮೊದಲ ಪೂಜೆ ನಡೆಯಿತು. ಹೆಲಿಕಾಪ್ಟರ್ ಮುಂದೆ ಅರ್ಚಕರು ಎಲ್ಲಾ ವಿಧಿ ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದರು. ಈ ಹೆಲಿಕಾಪ್ಟರ್‌ನ ಮೌಲ್ಯ 5.7 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಕೊಟ್ಟ ಮಾತನ್ನು ಈಡೇರಿಸಿದ ರಾಹುಲ್ ಗಾಂಧಿ, ಮೂವರು ಯುವತಿಯರಿಗೆ ಹೆಲಿಕಾಪ್ಟರ್ ರೈಡ್!
ಭಾರತದಲ್ಲಿ ಹೊಸದಾಗಿ ತಂದ ವಾಹನಗಳಿಗೆ ಮೊದಲು ಪೂಜೆ ಮಾಡುವ ಸಂಪ್ರದಾಯವಿದೆ. ಈ ಸಂಪ್ರದಾಯವನ್ನು ಬಹುತೇಕ ಎಲ್ಲರೂ ಪಾಲಿಸುತ್ತಾರೆ. ದೀಪಾವಳಿ ಅಥವಾ ನವರಾತ್ರಿಯ ಸಮಯದಲ್ಲಿ ವರ್ಷಕ್ಕೊಂದು ಸಲ ತಮ್ಮ ನೆಚ್ಚಿನ ವಾಹನಕ್ಕೆ ವಿಶೇಷ ಪೂಜೆ ಮಾಡಲಾಗುತ್ತದೆ. ಇದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಆದರೆ ಆದರೆ ಹೆಲಿಕಾಪ್ಟರ್‌ಗೆ ಪೂಜೆ ಮಾಡಿದ್ದನ್ನು ಯಾರು ಇದುವರೆಗೆ ಕೇಳಿರಲಿಕ್ಕಿಲ್ಲ. ಆದರೆ ಉದ್ಯಮಿ ಶ್ರೀನಿವಾಸ್ ಅವರು ಹೆಲಿಕಾಪ್ಟರ್‌ಗೂ ಪೂಜೆ ಸಲ್ಲಿಸುವ ಮೂಲಕ ಸಂಪ್ರದಾಯ ಸಂಸ್ಕೃತಿಯನ್ನು ಒಂದು ಹೆಜ್ಜೆ ಮೇಲೆ ಏರಿಸಿದ್ದು, ಇದೇ ಕಾರಣಕ್ಕೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸಾಕಷ್ಟು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಹೆಲಿಕಾಪ್ಟರ್‌ಗೆ ಅರ್ಚಕರು ಪೂಜೆ ಸಲ್ಲಿಸುತ್ತಿರುವ 21 ಸೆಕೆಂಡ್‌ಗಳ ಈ ವಿಡಿಯೋವನ್ನು @lateefbabla ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಶ್ರೀನಿವಾಸ್ ಮಾಲೀಕತ್ವದ ಪ್ರತಿಮಾ ಗ್ರೂಪ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯ ಒದಗಿಸುವ ಸಂಸ್ಥೆಯಾಗಿದೆ .
Travel Tips: ಹೆಲಿಕಾಪ್ಟರ್ ಸೌಲಭ್ಯವಿರುವ ಧಾರ್ಮಿಕ ಸ್ಥಳಗಳಿವು
Boinpally Srinivas Rao, the proprietor of the Prathima business, bought an Airbus ACH 135 and used it for the "Vahan" puja at the Yadadri temple dedicated to Sri Lakshmi Narasimha Swamy. Costing $5.7M, the opulent helicopter. pic.twitter.com/igFHMlEKiY
— Mohd Lateef Babla (@lateefbabla)