ಚಿಂತೆ ಬಿಡಿ, 2023ರ ವೇಳೆಗೆ ಭಾರತ ಶ್ರೀಮಂತ ರಾಷ್ಟ್ರ, HSBC ಅಧ್ಯಯನ ವರದಿ ಪ್ರಕಟ!

By Suvarna NewsFirst Published Aug 23, 2022, 7:40 PM IST
Highlights

ಆರ್ಥಿಕತೆ, ಸಬಲೀಕರಣ, ಉತ್ಪಾದನೆ, ರಫ್ತುಗಳಲ್ಲಿ ಭಾರತ ಹೊಸ ಹೊಸ ದಾಖಲೆ ಬರೆಯುತ್ತಿದೆ. ಇದರ ಪರಿಣಾಮ ಭಾರತ ಕೆಲವೇ ವರ್ಷಗಳಲ್ಲಿ ಭಾರತ ಶ್ರೀಮಂತ ರಾಷ್ಟ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಕುರಿತು HSBC ಅಧ್ಯಯನ ವರದಿಯನ್ನು ಪ್ರಕಟಿಸಿದೆ.

ನವದೆಹಲಿ(ಆ.23):  ವಿಶ್ವದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದೆ. ಈ ಹಿಂದಿನ ಭಾರತಕ್ಕೂ ಆಧುನಿಕ ಭಾರತಕ್ಕೂ ತುಂಬಾನೆ ವ್ಯತ್ಯಾಗಳಿವೆ. ವಿದೇಶಿಗರು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಹಾವಾಡಿಗರ ದೇಶ ಎಂದೇ ಗುರುತಿಸಿಕೊಂಡಿದ್ದ ಭಾರತ ಇದೀಗ ವಿಶ್ವಗುರುವಾಗುತ್ತಿದೆ. ಇದಕ್ಕೆ  HSBC ವರದಿ ಪುಷ್ಠಿ ನೀಡುತ್ತಿದೆ. HSBC ವರದಿ ಪ್ರಕಾರ 2030ರ ವೇಳೆ ಭಾರತ ಹೆಚ್ಚಿನ ಶ್ರೀಮಂತರನ್ನು ಹೊಂದಿದ ರಾಷ್ಟ್ರವಾಗಲಿದೆ ಎಂದಿದೆ. ಭಾರತದಲ್ಲಿರುವ ಶ್ರೀಮಂತರ ಸಂಖ್ಯೆ 2023ರ ವೇಳೆಗೆ 6 ಮಿಲಿಯನ್‌ಗೆ ಏರಿಕೆಯಾಗಲಿದೆ ಎಂದು HSBC ತನ್ನ ವರದಿಯಲ್ಲಿ ಹೇಳಿದೆ. ಇಷ್ಟೇ ಅಲ್ಲ ಈ ವರದಿಯಲ್ಲಿ ಮತ್ತೊಂದು ಅಂಶವನ್ನು ಉಲ್ಲೇಖಿಸಿದೆ. 2030ರ ವೇಳೆಗೆ ಭಾರತ ಅತೀ ವೇಗವಾಗಿ ಪ್ರಗತಿಹೊಂದು ಆರ್ಥಿಕತೆಯಾಗಲಿದೆ ಎಂದಿದೆ. 2030ರ ವೇಳೆಗೆ ಭಾರತದಲ್ಲಿ ಯುವಕರ ಸಂಖ್ಯೆ ದ್ವಿಗುಣಗೊಳ್ಳಲಿದೆ. ಇದರಿಂದ ಭಾರತ ಅತ್ಯಂತ ಶಕ್ತಿಯುತ ರಾಷ್ಟ್ರವಾಗಿ ಬೆಳೆದು ನಿಲ್ಲಿದೆ ಎಂದು ವರದಿಗಳು ಹೇಳುತ್ತಿವೆ.

ಭಾರತದಲ್ಲಿ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದೆ. ಸ್ಟಾರ್ಟ್ ಅಪ್ ಕ್ರಾಂತಿಯಾಗಿದೆ. ಆಧುನಿಕ ಜಗತ್ತನ್ನು ಆಳಲಿರುವ ಸ್ಟಾರ್ಟ್ ಆಪ್ ಕಂಪನಿಗಳ ತವರಾಗಿ ಭಾರತ ಹೊರಹೊಮ್ಮಿದೆ. ಇತ್ತ ಆರ್ಥಿಕತೆಯ ಪ್ರಗತಿ, ಹೊಸ ಉದ್ಯೋಗವಕಾಶಗಳು, ಆತ್ಮನಿರ್ಭರ ಭಾರತ್ ಅಡಿಯಲ್ಲಿ ಭಾರತ ಸ್ವಾವಲಂಬಿಯಾಗುತ್ತಿದೆ. ಇದರಿಂದ ಭಾರತದಲ್ಲಿ ಉತ್ಪಾದನೆ ಹೆಚ್ಚಾಗಿದೆ. ರಫ್ತುವಿನ ಪ್ರಮಾಣ ಹೆಚ್ಚಾಗಿದೆ. ರಫ್ತುವಿನ ಪ್ರಮಾಣ ಕಡಿಮೆಯಾಗಿದೆ.  ಎಲ್ಲವನ್ನೂ ಇತರ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ. ಇದರ ಪರಿಣಾಮ ಭಾರತ ಸಂಪತ್ತು ವೃದ್ಧಿಸುತ್ತಿದೆ ಎಂದು ವರದಿ ಹೇಳಿದೆ.

ಏಷ್ಯಾದ ಶ್ರೀಮಂತ ಪುರುಷ ಮಾತ್ರವಲ್ಲ, ಮಹಿಳೆ ಕೂಡ ಭಾರತೀಯರೆ;ಹುಯಿಯಾನ್ ಹಿಂದಿಕ್ಕಿದ ಸಾವಿತ್ರಿ ಜಿಂದಾಲ್

ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಏಷ್ಯಾದ ಅತ್ಯಂತ ಶ್ರೀಮಂತರು ಭಾರತದಲ್ಲಿದ್ದಾರೆ. ಇದೀಗ 2030ರ ವೇಳೆಗ ಭಾರತದಲ್ಲಿನ ಶ್ರೀಮಂತರ ಸಂಖ್ಯೆ 6 ಮಿಲಿಯನ್‌ಗೆ ಏರಿಕೆಯಾಗಲಿದೆ. ಎಂದಿದೆ. ಇಲ್ಲಿನ ಮಧ್ಯಮ ವರ್ಗದ ಕುಟುಂಬ ಮೇಲ್ತರಕ್ಕೆ ಏರಲಿದ್ದಾರೆ. ಬಡತನರೇಖೆಯಲ್ಲಿದ್ದ ಕುಟುಂಬಗಳು ಮಧ್ಯಮ ವರ್ಗಕ್ಕೆ ಬಡ್ತಿ ಪಡೆಯಲಿದ್ದಾರೆ. ಮಧ್ಯಮ ವರ್ಗ ಕುಟುಂಬಗಳು ಮೇಲ್ವರ್ಗಕ್ಕೆ ಬಡ್ತಿ ಪಡೆಯಲಿದ್ದಾರೆ ಎಂದು ವರದಿ ಹೇಳಿದೆ. ಆದರೆ ಭಾರತ ಸೇರಿದಂತೆ ಏಷ್ಯಾದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಳು ಇರಲಿದೆ ಎಂದಿದೆ.

ವಿಶ್ವದ ಅತೀ ಹೆಚ್ಚು ಮಿಲೇನಿಯರ್‌ಗಳನ್ನು ಹೊಂದಿದ ಹೆಗ್ಗಳಿಕೆಗೆ ಸಿಂಗಾಪುರ ಪಾತ್ರವಾಗಲಿದೆ.  ಸದ್ಯ ಗರಿಷ್ಠ ಮಿಲೆನಿಯರ್ ಹೊಂದಿರುವ ಆಸ್ಟ್ರೇಲಿಯಾವನ್ನು ಸಿಂಗಾಪುರ ಹಿಂದಿಕ್ಕಿಲಿದೆ.  ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ. ಇನ್ನುಳಿದ ಸ್ಥಾನದಲ್ಲಿ ಹಾಂಕಾಂಗ್, ತೈವಾನ್ ಸ್ಥಾನ ಪಡೆಯಲಿದೆ ಎಂದು ವರದಿ ಹೇಳಿದೆ.

click me!