ಈಗ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಆಧಾರ್ ಕಾರ್ಡ್ ಹೊಂದಿರೋದು ಅನಿವಾರ್ಯ. ಶಾಲೆ ಅಡ್ಮಿಷನ್‌ನಿಂದ ಹಿಡಿದು ಸಾಲದವರೆಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಅಗತ್ಯ. ಈ ಆಧಾರ್ ಕಾರ್ಡ್ ನಿಂದಲೇ ನೀವು 50 ಸಾವಿರ ಸಾಲ ಪಡೆಯಬಹುದು.
ಭಾರತದಲ್ಲಿ ಆಧಾರ್ ಕಾರ್ಡ್ ಪ್ರಾಥಮಿಕ ಗುರುತಿನ ದಾಖಲೆ. ಸರ್ಕಾರದ ಸೌಲಭ್ಯ ಸೇರಿದಂತೆ ಅನೇಕ ಸೇವೆಗಳನ್ನು ಪಡೆಯಲು ಆಧಾರ್ ಅತ್ಯಗತ್ಯ. ಇದು ವೈಯಕ್ತಿಕ ಸಾಲ ತೆಗೆದುಕೊಳ್ಳಲುಲೂ ಸಹಕಾರಿ. ಆದಾಗ್ಯೂ, ಅನೇಕ ಜನರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಜನರು ತಮ್ಮ ಆಧಾರ್ ಕಾರ್ಡ್ ಕ್ರೆಡಿಟ್ ಕಾರ್ಡ್‌ನಂತೆ ಕೆಲಸ ಮಾಡುತ್ತದೆ ಎಂದು ಕೊಳ್ಳುತ್ತಾರೆ. ಆದರೆ ಇದು ಸಂಪೂರ್ಣ ತಪ್ಪು. ಆಧಾರ್ ಕಾರ್ಡ್ ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುವುದಿಲ್ಲ. ಆದರೂ ಆಧಾರ್ ಕಾರ್ಡ್ ಸಂಪೂರ್ಣ ಸಾಲ ಪ್ರಕ್ರಿಯೆಗೆ ಅಗತ್ಯವಾದ ದಾಖಲೆಯಾಗಿದೆ. ಸರಳ ಭಾಷೆಯಲ್ಲಿ ಹೇಳೋದಾದ್ರೆ ಆಧಾರ್ ಕಾರ್ಡ್ ಇಲ್ಲದೆ ಸಾಲ ಸಿಗೋದಿಲ್ಲ. ಹಾಗಾಗಿಯೇ ಆಧಾರ್ ಕಾರ್ಡ್ ನೀಡಿ ಪಡೆಯುವ ಸಾಲವನ್ನು ಆಧಾರ್ ಕಾರ್ಡ್ ಸಾಲ ಎಂದು ಕರೆಯಲಾಗುತ್ತದೆ. ಈ ಸಾಲದ ಮೂಲಕ ನೀವು 50000 ರೂಪಾಯಿವರೆಗೆ ಸಾಲ ಪಡೆಯಬಹುದು.
ಆಧಾರ್ ಕಾರ್ಡ್ (Aadhaar Card) ಮೂಲಕ ಸಾಲ ಪಡೆಯೋದು ಹೇಗೆ? : ಆಧಾರ್ ಕಾರ್ಡ್ ಚಾಲ್ತಿಯಲ್ಲಿ ಇರದ ಸಂದರ್ಭದಲ್ಲಿ ಜನರು ಸಾಲ (Loan) ಪಡೆಯಲು ವಿಳಾಸ, ಗುರುತಿನ ಚೀಟಿ ಸೇರಿ ಅನೇಕ ದಾಖಲೆಗಳನ್ನು ನೀಡಬೇಕಾಗಿತ್ತು. ಎಲ್ಲ ದಾಖಲೆ (Record) ಯನ್ನು ಕಲೆಹಾಕಿ, ಅದನ್ನು ಪರಿಶೀಲಿಸಿ ಸಾಲ ನೀಡುವವರೆಗೆ ತುಂಬಾ ಸಮಯ ಹಿಡಿಯುತ್ತಿತ್ತು. ಆದ್ರೆ ಆಧಾರ್ ಕಾರ್ಡ್ ಬಂದ್ಮೇಲೆ ಎಲ್ಲ ಕೆಲಸ ಸುಲಭ. ವೈಯಕ್ತಿಕ ಸಾಲ (Personal Loan) ಪಡೆಯಲು ಈಗ ಆಧಾರ್ ಅನಿವಾರ್ಯ. ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೂ ಸಾಲ ಪಡೆಯುವವರು ಬ್ಯಾಂಕ್ ಅಥವಾ ಹಣಕಾಸು ಕಂಪನಿಗೆ ಆಧಾರ್ ಕಾರ್ಡ್ ನೀಡಬೇಕು. ಯಾವುದೇ ವಿದ್ಯಾರ್ಥಿ ವಿದೇಶದಲ್ಲಿ ಶಿಕ್ಷಣ ಪಡೆಯಲು ಮುಂದಾಗಿದ್ದು, ಸಾಲ ಪಡೆಯಲು ನಿರ್ಧರಿಸಿದ್ದರೆ ಆತ ಆಧಾರ್ ಕಾರ್ಡ್ ನೀಡಬೇಕು. ಆಧಾರ್ ಕಾರ್ಡ್ ವಿದೇಶದಲ್ಲಿ ನಿಮ್ಮ ಪೌರತ್ವವನ್ನು ದೃಢಪಡಿಸುತ್ತದೆ. ಆಧಾರ್ ಕಾರ್ಡ್ ಇದ್ದಲ್ಲಿ ನಿಮಗೆ ಬೇಗ ಸಾಲ ಸಿಗುತ್ತದೆ. ಈ ಆಧಾರ್ ಕಾರ್ಡ್ ಸಹಾಯದಿಂದ ನೀವು 10 – 15 ಸಾವಿರವಲ್ಲ 50 ಸಾವಿರದವರೆಗೆ ಸಾಲ ಪಡೆಯಬಹುದು. ಬ್ಯಾಂಕ್ ಅಪ್ಲಿಕೇಷನ್ ಮೂಲಕವೇ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಶ್ರೀಮಂತಿಕೆಯ ತುತ್ತ ತುದಿಯಲ್ಲಿದ್ರೂ ಜನರಿಗೆ ಇವರು ಯಾರೆಂಬುವುದೇ ಗೊತ್ತಿಲ್ಲ!
ಅಪ್ಲಿಕೇಶನ್ ಬಳಸಿಕೊಂಡು ನೀವು ಯಾವಾಗ ಬೇಕಾದರೂ ತ್ವರಿತ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸಿದ ಸ್ವಲ್ಪ ಸಮಯದ ನಂತರ ಲೋನ್ ಅನುಮೋದಿಸಲಾಗುತ್ತದೆ. ಕೆಲವೇ ಗಂಟೆಗಳಲ್ಲಿ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿ ಯಾವುದೇ ಕಿರಿಕಿರಿ ಇರೋಲ್ಲ. ನೀವು ಆನ್ಲೈನ್ ನಲ್ಲಿ ದಾಖಲೆ ಅಪ್ಲೋಡ್ ಮಾಡಿದ್ರೆ ಅದನ್ನು ಪರಿಶೀಲಿಸಿ ಬ್ಯಾಂಕ್ ಸಾಲ ನೀಡುತ್ತದೆ.
ಆಧಾರ್ ಮೂಲಕ 50 ಸಾವಿರ ಸಾಲ ಪಡೆಯಲು ಅಗತ್ಯವಿರುವ ದಾಖಲೆ ಮತ್ತು ಷರತ್ತು : ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 21 ರಿಂದ 60 ವರ್ಷದೊಳಗಿರಬೇಕು. ಸಾಲದ ಅರ್ಜಿದಾರರ ಸಿಬಿಲ್ ಸ್ಕೋರ್ 750 ಅಥವಾ ಹೆಚ್ಚಿನದಾಗಿರಬೇಕು. ತಿಂಗಳಿಗೆ ನೀವು ಕನಿಷ್ಠ 15 ಸಾವಿರ ಸಂಬಳ ಪಡೆಯುತ್ತಿದ್ದರೆ ಈ ಸಾಲ ಪಡೆಯಬಹುದು. ನಿಮ್ಮ ಫೋನ್ ಸಂಖ್ಯೆ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರಬೇಕು. ಅರ್ಜಿದಾರರು ಆಧಾರ್ ಕಾರ್ಡ್, ಮೊಬೈಲ್ ನಂಬರ್, ಪಾನ್ ಕಾರ್ಡ್ ಮತ್ತು ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ನೀಡಬೇಕು.
ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ ಉದ್ಯೋಗಿಗಳ ಸರಾಸರಿ ಸಂಬಳ ಇಷ್ಟೊಂದಾ?
ಆಧಾರ್ ಕಾರ್ಡ್ ಮೂಲಕ ಪಡೆದ ಸಾಲದ ಮೇಲಿನ ಬಡ್ಡಿ ಭಿನ್ನವಾಗಿರೋದಿಲ್ಲ. ನೀವು ವೈಯಕ್ತಿಕ ಸಾಲಕ್ಕೆ ಪಾವತಿಸುವ ಬಡ್ಡಿಯನ್ನೇ ಇಲ್ಲಿಯೂ ಪಾವತಿಸಬೇಕು. ಈ ಬಡ್ಡಿ ದರವು ಶೇಕಡಾ 10.50 ರಿಂದ ಶೇಕಡಾ 14ರಷ್ಟಿರುತ್ತದೆ.