
ಯಾವುದೇ ಸೆಲೆಬ್ರಿಟಿ, ಆಟಗಾರ, ಸಿನಿಮಾ ಕಲಾವಿದರು ಆಟೋ ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಓಡಾಡ್ತಿದ್ದಾರೆ ಅಂದ್ರೆ ಅದು ದೊಡ್ಡ ಸುದ್ದಿಯಾಗುತ್ತೆ. ಅವರಿಗೆ ಪ್ರತ್ಯೇಕ ಭದ್ರತೆ ನೀಡುವ ಜೊತೆಗೆ ಜನರನ್ನು ಸಂಭಾಳಿಸೋದು ಪೊಲೀಸರಿಗೆ ಕಷ್ಟವಾಗ್ಬಹುದು. ಟಿವಿ, ಸಾಮಾಜಿಕ ಜಾಲತಾಣದಲ್ಲಿ ಬರುವ ಅವರ ಫೋಟೋ, ವಿಡಿಯೋಗಳೇ ಅವರನ್ನು ಹೆಚ್ಚು ಪ್ರಸಿದ್ಧರನ್ನಾಗಿ ಮಾಡಿರುತ್ತದೆ. ಅದೇ ನಿಮ್ಮ ಬಳಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ, ನೀವು ದೊಡ್ಡ ದೊಡ್ಡ ಕಂಪನಿ ಮಾಲೀಕರಾದ್ರೂ ನಿಮ್ಮ ಸಿಬ್ಬಂದಿಗೆ ನೀವು ಗೊತ್ತಿಲ್ಲ ಎಂದಾದ್ರೆ ನಿಮ್ಮನ್ನು ಅವರು ಹೇಗೆ ಗುರುತಿಸ್ತಾರೆ, ಜನ ಹೇಗೆ ನಿಮ್ಮ ಹಿಂದೆ ಬೀಳ್ತಾರೆ? ಪ್ರಸಿದ್ಧ ಕಂಪನಿ ಒಡೆಯರಾಗಿ ಕೋಟ್ಯಾಂತರ ರೂಪಾಯಿ ಹಣ ಇದೆ ಅಂದ್ಮೇಲೆ ಫೇಮಸ್ ಆಗೇ ಆಗ್ತಾರೆ, ಅವರ ಫೋಟೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತೆ ಅಂತಾ ನೀವು ವಾದಿಸಬಹುದು. ಆದ್ರೆ ಮಿಲಿಯನೇರ್ ಆಗಿಯೂ ಗುಪ್ತವಾಗಿರುವ ವ್ಯಕ್ತಿಗಳು ನಮ್ಮಲ್ಲಿದ್ದಾರೆ. ಅವರಲ್ಲಿ ಈಗ ನಾವು ಹೇಳಹೊರಟಿರುವ ವ್ಯಕ್ತಿ ಕೂಡ ಸೇರಿದ್ದಾರೆ.
ಬ್ರಿಟನ್ (Britain) ನ ಶ್ರೀಮಂತ ವ್ಯಕ್ತಿ ಮುಖವನ್ನೇ ಜನ ಸರಿಯಾಗಿ ನೋಡಿಲ್ಲ : ಹೌದು. ಮೈಕೆಲ್ ಪ್ಲಾಟ್ (Michael Platt), ಬ್ರಿಟನ್ ನ ಅತ್ಯಂತ ಶ್ರೀಮಂತ (rich) ವ್ಯಕ್ತಿ. ವಯಸ್ಸು 56 ವರ್ಷ. ಅಪಾರ ಸಂಪತ್ತಿದ್ರೂ ಸಮಾಜಕ್ಕೆ ಅವರು ಅಪರಿಚಿತರು. ಅವರ ಕಂಪನಿ ರಿಸೆಪ್ಷನ್ ಗೆ ಕೂಡ ಮೈಕೆಲ್ ಪ್ಲಾಟ್ ಯಾರು ಅನ್ನೋದು ತಿಳಿದಿಲ್ಲ. ಕೆಲ ಸಿಬ್ಬಂದಿಗೆ ಮಾಲೀಕರ ಹೆಸರೇ ಗೊತ್ತಿಲ್ಲ. ಮೈಕಲ್ ಪ್ಲಾಟ್, ಬ್ಲೂಕ್ರೆಸ್ಟ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಮಾಲೀಕರಾಗಿದ್ದಾರೆ. 2006ರಲ್ಲಿ ಟೈಮ್ಸ್ ಗೆ ಮೈಕಲ್ ಸಂದರ್ಶನ ನೀಡಿದ್ದರು. ಆ ಮೇಲೆ ಫೋಟೋ ಕ್ಲಿಕ್ಕಿಸದಂತೆ ಹೇಳಿದ್ದರು. ಮೈಕಲ್ ಫೋಟೋ ಮಾಧ್ಯಮಗಳಲ್ಲಿ ಬಿಡುಗಡೆಯಾಗಿ ಸುಮಾರು ಹತ್ತು ವರ್ಷ ಕಳೆದಿದೆ. ಮೈಕಲ್ ಇಮೇಲ್ ಗೆ ಕೂಡ ಉತ್ತರ ನೀಡೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳಿಲ್ಲ. ಅವರಿಗೆ ಫೋಟೋಶೂಟ್ ಇಷ್ಟವಿಲ್ಲ. ಗೌಪ್ಯತೆ ಕಾಪಾಡಿಕೊಳ್ಳಲು ಮೈಕಲ್ ಇಷ್ಟಪಡ್ತಾರೆ. ಪತ್ರಿಕೆ, ಮಾಧ್ಯಮಗಳಲ್ಲಿ ಫೋಟೋ ಬರೋದನ್ನು ಮೈಕಲ್ ದ್ವೇಷಿಸುತ್ತಾರೆ.
ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ ಉದ್ಯೋಗಿಗಳ ಸರಾಸರಿ ಸಂಬಳ ಇಷ್ಟೊಂದಾ?
2019ರಲ್ಲಿ ನ್ಯೂಯಾರ್ಕ್ ನಲ್ಲಿ ಆಟೋ ಒಂದನ್ನು ಹಿಡಿದು ಮೈಕಲ್ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಆಟೋ ಚಾಲಕ, ನೀವು ಏನು ಕೆಲಸ ಮಾಡುತ್ತೀರಿ ಎಂದು ಮೈಕಲ್ ಗೆ ಕೇಳಿದ್ದರು. ನಾನು ಜಗತ್ತಿನಲ್ಲಿ ಹೆಚ್ಚು ಸಂಪಾದನೆ ಮಾಡುವ ವ್ಯಕ್ತಿ ಎಂದು ಮೈಕಲ್ ಹೇಳಿದ್ದರು. ಈ ಮಾತು ಕೇಳಿ ಆಟೋ ಚಾಲಕ ದಂಗಾಗಿದ್ದ. ಮೈಕಲ್ ಈ ವಿಡಿಯೋ ವೈರಲ್ ಆಗಿತ್ತು. ಮೈಕಲ್ ತಮಾಷೆ ಮಾಡಿದ್ದಾರೆ ಎಂದು ಅವರ ಕಂಪನಿ ನಂತ್ರ ಪತ್ರಿಕಾ ಪ್ರಕಟಣೆ ನೀಡಿತ್ತು.
WWE ರೆಸ್ಲರ್ ಎರಿಕಾ ಹ್ಯಾಮಂಡ್ ಮದ್ವೆಯಾದ ಟೆಕ್ ಬಿಲಿಯನೇರ್ ಅಂಕುರ್ ಜೈನ್
ಮೈಕಲ್ ನಡೆದುಬಂದ ದಾರಿ : ಮೈಕಲ್ ಈ ಹಂತಕ್ಕೆ ಬರಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಮೈಕಲ್ ಗೆ 14 ವರ್ಷ ಇರುವಾಗ ಅವರ ಅಜ್ಜ ಅವರಿಗೆ 500 ಡಾಲರ್ ನೀಡಿದ್ದರು. ಇದನ್ನು ಅವರು ಬಂಡವಾಳಕ್ಕೆ ಬಳಸಿಕೊಂಡಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಗಣಿತ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದ ಮೈಕಲ್, ನಿರಂತರ ಹೂಡಿಕೆ (Investment) ಮೂಲಕ 30,000 ಡಾಲರ್ ಗಳಿಸಿದ್ದರು. ಅಕ್ಟೋಬರ್ 1987 ರಲ್ಲಿ ಅವರಿಗೆ ದೊಡ್ಡ ಆಘಾತವಾಯಿತು. ಅವರು ಗಳಿಸಿದ ಅರ್ಧದಷ್ಟು ಹಣ ನಷ್ಟವಾಯ್ತು. ಮೈಕಲ್ ಈ ಘಟನೆ ನಂತ್ರ ಧೈರ್ಯ ಕಳೆದುಕೊಳ್ಳಲಿಲ್ಲ. ಸತತ ಪರಿಶ್ರಮದ ನಂತ್ರ ಅವರು ಯಶಸ್ವಿಯಾಗಿದ್ದಾರೆ. ಈಗ ಮೈಕಲ್ ಆಸ್ತಿ 14 ಬಿಲಿಯನ್ ಪೌಂಡ್ ಆಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.