Saving Rs 1 Lakh: ಭಾರತದಲ್ಲಿ 1 ಲಕ್ಷ ರೂಪಾಯಿ ಉಳಿತಾಯ ಮಾಡೋದು ಹೇಗೆ? ಲಕ್ಷಾಧಿಪತಿಯನ್ನಾಗಿ ಮಾಡೋ ಸೇವಿಂಗ್ ಟಿಪ್ಸ್

Published : Aug 07, 2025, 01:08 PM ISTUpdated : Aug 07, 2025, 02:42 PM IST
Money Saving

ಸಾರಾಂಶ

ಕಡಿಮೆ ಸಮಯದಲ್ಲಿ ಹಣ ಉಳಿಸಲು ಸೂಕ್ತ ಯೋಜನೆ ಮತ್ತು ಬಜೆಟ್ ಅಗತ್ಯ. ಆದಾಯ ಹೆಚ್ಚಿಸಿಕೊಳ್ಳುವುದು, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಸ್ಮಾರ್ಟ್ ಹೂಡಿಕೆಗಳು ಲಕ್ಷಾಧಿಪತಿಯಾಗಲು ಸಹಾಯ ಮಾಡುತ್ತವೆ.

ಹೊಸದಾಗಿ ಕೆಲಸ ಆರಂಭಿಸುವ ಜನರಗೆ ಹಣ ಉಳಿತಾಯ ಮಾಡೋದು ಸವಾಲಿನ ಕೆಲಸವಾಗಿದೆ. ಪ್ರಾಪರ್ ಪ್ಲಾನ್, ಶಿಸ್ತುಬದ್ಧ ಹಣಕಾಸಿನ ನಿಯಮಗಳನ್ನು ಅನುಸರಿಸುವ ಮೂಲಕ ಸೀಮಿತ ಆದಾಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಉಳಿಸಬಹುದಾಗಿದೆ. ಈ ರೀತಿಯ ವಿಧಾನಗಳನ್ನು ಅಳವಡಿಸಿಕೊಂಡ್ರೆ ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ನಿಮಗೆ ಹಣ ಎಲ್ಲಿಂದ ಮತ್ತು ಎಷ್ಟು ಬರುತ್ತಿದೆ ಮತ್ತು ಎಲ್ಲಿ ಇದು ಖರ್ಚು ಆಗುತ್ತೆ ಎಂಬದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ನಿಮ್ಮಲ್ಲಿರುವ ಹಣವನ್ನು ಹೂಡಿಕೆ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

ನೀವು ಕಡಿಮೆ ಸಮಯದಲ್ಲಿಯೇ 1 ಲಕ್ಷ ಗುರಿಯನ್ನು ತಲುಪಲು ಬಯಸಿದರೆ ತಿಂಗಳಿಗೆ ಕನಿಷ್ಠ 16,500 ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಮ್ಯೂಚುಯಲ್ ಫಂಡ್‌ ನಿಮಗೆ ಕಡಿಮೆ ಸಮಯದಲ್ಲಿಯೇ ಲಾಭವನ್ನು ನೀಡುತ್ತವೆ. ಆದ್ರೆ ಈ ರೀತಿಯ ಹೂಡಿಕೆ ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹಾಗಾಗಿ ಸದಾ ಜಾಗೃತರಾಗಿರಬೇಕು. ಹಾಗಾದ್ರೆ 1 ಲಕ್ಷ ರೂ ಹಣ ಉಳಿಸಲು ನೀವು ಮಾಡಬೇಕಾದ ಕೆಲಸಗಳೇನು ಎಂದು ನೋಡೋಣ ಬನ್ನಿ.

1.ಸ್ಪಷ್ಟವಾದ ಬಜೆಟ್ ಮಾಡಿಕೊಳ್ಳಿ

ಹಣ ಉಳಿತಾಯದ ಮೊದಲ ಹೆಜ್ಜೆಯೇ ಬಜೆಟ್ ರಚಿಸಿಕೊಳ್ಳುವುದು. ನಿಮ್ಮಲ್ಲಿರುವ ಹಣ ಎಲ್ಲಿ ಅತ್ಯಧಿಕವಾಗಿ ಖರ್ಚು ಆಗುತ್ತೆ ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಬಜೆಟ್ ಮಾಡಿಕೊಳ್ಳುವುದರಿಂದ ಅಗತ್ಯ ಮತ್ತು ಅನಗತ್ಯ ಖರ್ಚು ಎಂದು ವಿಂಗಡನೆ ಮಾಡಿಕೊಳ್ಳಬೇಕು. ಇದರಿಂದ ಯಾವ ಖರ್ಚುಗಳನ್ನು ಕಡಿತ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಬಹುದು. ಬಾಡಿಗೆ, ಬಿಲ್‌ಗಳು, ದಿನಸಿ, ಔಷಧಿ, ಸಾರಿಗೆ ಇವೆಲ್ಲವು ಅಗತ್ಯ ಖರ್ಚುಗಳು ಆಗಿರುತ್ತವೆ.

2.ಹಣ ಉಳಿತಾಯಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ

ಹಣ ಉಳಿತಾಯ ಮಾಡಿಕೊಳ್ಳಲು ಪ್ರತ್ಯೇಕ ಬ್ಯಾಂಕ್ ಖಾತೆ ಓಪನ್ ಮಾಡಿಕೊಳ್ಳಿ. ಪ್ರತಿ ತಿಂಗಳು ಈ ಖಾತೆಗೆ ನಿಗದಿತ ಮೊತ್ತವನ್ನು ವರ್ಗಾಯಿಸುವ ಅಭ್ಯಾಸ ರೂಢಿಸಿಕೊಳ್ಳಿ. ಸಂಬಳ ಜಮೆ ಆಗುತ್ತಿದ್ದಂತೆ ಸೇವಿಂಗ್ ಖಾತೆಗೆ ಹಣ ವರ್ಗಾಯಿಸಿ. ಈ ವರ್ಗಾವಣೆಯನ್ನು ಸ್ಥಿರ ವೆಚ್ಚವೆಂದು ಪರಿಗಣಿಸಿ. 6 ರಿಂದ 7 ತಿಂಗಳಲ್ಲಿಯೇ ದೊಡ್ಡ ಮೊತ್ತ ನಿಮ್ಮದಾಗುತ್ತದೆ.

3.ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ

ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ವಿವೇಚನೆಯಿಂದ ನಿಮ್ಮ ಹಣವನ್ನು ಖರ್ಚು ಮಾಡಬೇಕು. ಅಂದ್ರೆ ಹೊರಗೆ ಆಹಾರ ಸೇವನೆ, ಅತಿಯಾದ ಶಾಪಿಂಗ್, ಅನಗತ್ಯವಾಗಿ ಒಟಿಟಿ ಆಕ್ಸೆಸ್ ಪಡೆಯುವುದು, ಹೆಚ್ಚು ಮೊತ್ತ ಪಾವತಿಸಿ ಭಾಗಿಯಾಗುವ ಇವೆಂಟ್‌ಗಳಲ್ಲ ಭಾಗಿಯಾಗೋದನ್ನು ಕಡಿಮೆ ಮಾಡಿ. ಇದರಿಂದಲೂ ನಿಮ್ಮ ಹಣ ಉಳಿತಾಯವಾಗುತ್ತದೆ.

4.ಆದಾಯದ ಮೂಲಗಳ ಹೆಚ್ಚಳ

ಆದಾಯದ ಮೂಲಗಳು ಹೆಚ್ಚಾದ್ರೆ ಉಳಿತಾಯದ ಮೊತ್ತವೂ ಏರಿಕೆಯಾಗುತ್ತದೆ. ಮಾಸಿಕ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಪಾರ್ಟ್‌ ಟೈಮ್ ಜಾಬ್‌ ಅಂದ್ರೆ ಆನ್‌ಲೈನ್ ಕ್ಲಾಸ್, ಸ್ವಂತ ಬ್ಯುಸಿನೆಸ್ ಆರಂಭಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ. ಹೆಚ್ಚುವರಿ ಹಣವನ್ನು ಗಳಿಸುವುದು ನಿಮ್ಮ ಉಳಿತಾಯ ಗುರಿಯನ್ನು ವೇಗವಾಗಿ ತಲುಪಲು ಸಹಾಯ ಮಾಡುತ್ತದೆ

5. ಸಾಲ ಮಾಡಿಕೊಳ್ಳಬೇಡಿ, ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಎಚ್ಚರವಾಗಿರಿ!

ಯಾವುದೇ ಕಾರಣಕ್ಕೂ ಅನಗತ್ಯವಾಗಿ ಸಾಲ ಮಾಡಿಕೊಳ್ಳಬೇಡಿ. ಸಾಲ ಪಡೆಯುವ ಸಮಯ ಬಂದ್ರೂ ಬಡ್ಡಿದರ ಮತ್ತು ಎಷ್ಟು ಅವಧಿಯಲ್ಲಿ ಹಿಂದಿರುಗಿಸುತ್ತೇವೆ ಎಂಬುದರ ಬಗ್ಗೆಯೂ ಸ್ಪಷ್ಟವಾಗಿರಬೇಕು. ಹೆಚ್ಚಿನ ಬಡ್ಡಿಯ ಕ್ರೆಡಿಟ್ ಕಾರ್ಡ್ ಸಾಲ, ನಿಮ್ಮ ಉಳಿತಾಯ ಸಾಮರ್ಥ್ಯದಿಂದ ದೂರವಾಗಬಹುದು. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಕೆಗಾಗಿ ಸದಾ ಜಾಗರೂಕರಾಗಿರಬೇಕು.

6. ಅಲ್ಪಾವಧಿ ಹೂಡಿಕೆ

ಕಡಿಮೆ ಸಮಯದಲ್ಲಿ ಲಾಭ ಸಿಗಬೇಕಾದ್ರೆ ಅಲ್ಪಾವಧಿಯ ಹೂಡಿಕೆ ಆಯ್ಕೆ ಮಾಡಿಕೊಳ್ಳಿ. FDಗಳು ಖಾತರಿಯ ಆದಾಯ ನೀಡಿದರೂ ದೀರ್ಘಾವಧಿಯ ಹೂಡಿಕೆ ಆಗಿರುತ್ತವೆ. SIPಗಳು ಕೆಲವು ಅಪಾಯಗಳೊಂದಿಗೆ ಹೆಚ್ಚಿನ ಆದಾಯ ನೀಡುತ್ತವೆ. ನಿಮ್ಮ ಸಮಯಕ್ಕೆ ಹೊಂದಿಕೆಯಾಗುವ ಹೂಡಿಕೆಗಳನ್ನು ಆಯ್ಕೆ ಮಾಡಿಕೊಂಡು ಹೆಚ್ಚು ಲಾಭವನ್ನು ನಿಮ್ಮದಾಗಿಸಿಕೊಳ್ಳಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ