Business Idea: ಕಡಿಮೆ ಸಮಯದಲ್ಲಿ ಹೆಚ್ಚು ಲಾಭಗಳಿಸುವ ಮೆಡಿಕಲ್ ಸ್ಟೋರ್ ತೆರೆಯೋದು ಹೇಗೆ?

Published : Aug 07, 2025, 12:38 PM ISTUpdated : Aug 07, 2025, 12:41 PM IST
Medical Store

ಸಾರಾಂಶ

ಬ್ಯುಸಿನೆಸ್ ನಲ್ಲಿ ಆಸಕ್ತಿ ಇರುವವರಿಗೆ ಮೆಡಿಕಲ್ ಸ್ಟೋರ್ ಸೂಕ್ತ ಆಯ್ಕೆ. ಶೀಘ್ರ ಲಾಭ ನೀಡಬಲ್ಲ ಇದು ಸದಾ ಬೇಡಿಕೆಯಲ್ಲಿರುವ ವ್ಯವಹಾರ. ಅದನ್ನು ಹೇಗೆ ಶುರು ಮಾಡ್ಬೇಕು ಎಂಬ ಡಿಟೇಲ್ ಇಲ್ಲಿದೆ. 

ಖಾಯಿಲೆ ಜಾಸ್ತಿ ಆಗ್ತಿದ್ದಂತೆ ಔಷಧಿ (Medicine)ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಲ ಅನಾರೋಗ್ಯಕ್ಕೆ ಪ್ರತಿ ದಿನ ಮಾತ್ರೆ ಸೇವನೆ ಅನಿವಾರ್ಯ. ಹಾಗಾಗಿ ಮೆಡಿಕಲ್ ಸ್ಟೋರ್ (Medical Store) ಅಗತ್ಯ, ಅನಿವಾರ್ಯತೆ ಪ್ರತಿ ಊರಿಗಿದೆ. ನೀವು ಚಿಕ್ಕ ಪಟ್ಟಣದಲ್ಲಿ ಕೂಡ ಈ ಮೆಡಿಕಲ್ ಸ್ಟೋರ್ ಓಪನ್ ಮಾಡ್ಬಹುದು. ಇದು ಲಾಭಕರ ಹಾಗೂ ಸುರಕ್ಷಿತ ಬ್ಯುಸಿನೆಸ್ ಗಳಲ್ಲಿ ಒಂದು. ಈ ಮೆಡಿಕಲ್ ಸ್ಟೋರ್ ಬ್ಯುಸಿನೆಸ್ ಶುರು ಮಾಡೋಕೆ ನೀವು ಏನು ಓದಿರ್ಬೇಕು, ಹಾಗೆ ಒಂದು ಲೈಸೆನ್ಸ್ ಗೆ ನೀವು ಎಷ್ಟು ಸ್ಟೋರ್ ಓಪನ್ ಮಾಡ್ಬಹುದು ಎಂಬ ಮಾಹಿತಿ ಇಲ್ಲಿದೆ.

ಮೆಡಿಕಲ್ ಸ್ಟೋರ್ ಓಪನ್ ಮಾಡಲು ಯಾವ ವಿದ್ಯೆ ಅಗತ್ಯ? : ಮೆಡಿಕಲ್ ಸ್ಟೋರ್ ತೆರೆಯಲು, ನೀವು ಡಿ.ಫಾರ್ಮಾ (ಫಾರ್ಮಸಿಯಲ್ಲಿ ಡಿಪ್ಲೊಮಾ) ಅಥವಾ ಬಿ.ಫಾರ್ಮಾ (ಬ್ಯಾಚುಲರ್ ಆಫ್ ಫಾರ್ಮಸಿ) ಪದವಿಯನ್ನು ಪಡೆದಿರಬೇಕು. ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಗುರುತಿಸಲ್ಪಟ್ಟ ಕಾಲೇಜಿನಿಂದ ನೀವು ಈ ಪದವಿ ಪಡೆದಿದ್ದರೆ ಮಾತ್ರ ನಿಮಗೆ ಔಷಧಿ ಮಾರಾಟಕ್ಕೆ ಪರವಾನಗಿ ಸಿಗುತ್ತದೆ. ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡ ವಿದ್ಯಾರ್ಥಿಗಳು ಬಿ ಫಾರ್ಮಾ, ಎಂ ಫಾರ್ಮಾ ಅಥವಾ ಡಿ ಫಾರ್ಮಾ ಪದವಿಯನ್ನು ಪಡೆಯಬಹುದು.

ಒಂದ್ವೇಳೆ ನೀವು ಈ ಪದವಿ ಪಡೆಯದೆ ಮೆಡಿಕಲ್ ಸ್ಟೋರ್ ತೆರೆಯಲು ಬಯಸಿದ್ರೆ, ಬಿ-ಫಾರ್ಮಾ, ಡಿ-ಫಾರ್ಮಾ ಅಥವಾ ಎಂ-ಫಾರ್ಮಾದಲ್ಲಿ ಪದವಿ ಪಡೆದ ವ್ಯಕ್ತಿಯನ್ನು ಹುಡುಕಿ. ನೀವು ಆ ವ್ಯಕ್ತಿಯ ಹೆಸರಿನಲ್ಲಿ ಮೆಡಿಕಲ್ ಸ್ಟೋರ್ ಗೆ ಪರವಾನಗಿ ಪಡೆಯಬಹುದು. ಆದ್ರೆ ಯಾವಾಗ್ಲೂ ಆ ವ್ಯಕ್ತಿ ನಿಮ್ಮ ಮೆಡಿಕಲ್ ಸ್ಟೋರ್ ನಲ್ಲಿ ಇರುವ ನೋಡಿಕೊಳ್ಬೇಕು.

ಒಂದು ಪರವಾನಗಿಯೊಂದಿಗೆ ಎಷ್ಟು ವೈದ್ಯಕೀಯ ಅಂಗಡಿ ತೆರೆಯಬಹುದು? : ನೀವು ಒಂದು ಮೆಡಿಕಲ್ ಸ್ಟೋರ್ ಪರವಾನಗಿ ಹೊಂದಿದ್ದರೆ ಒಂದೇ ಮೆಡಿಕಲ್ ಸ್ಟೋರ್ ತೆರೆಯಬಹುದು. ಕೆಲವರು ಒಂದೇ ಪರವಾನಗಿಯೊಂದಿಗೆ 2-3 ಅಂಗಡಿಗಳನ್ನು ನಡೆಸುತ್ತಾರೆ. ಇದು ಕಾನೂನುಬಾಹಿರ. ತನಿಖೆಯಲ್ಲಿ ಸಿಕ್ಕಿಬಿದ್ದರೆ, ಪರವಾನಗಿಯನ್ನು ರದ್ದುಗೊಳಿಸುವ ಜೊತೆಗೆ ದಂಡ ವಿಧಿಸಲಾಗುತ್ತದೆ.

ಮೆಡಿಕಲ್ ಸ್ಟೋರ್ ಪರವಾನಗಿ ಪಡೆಯುವುದು ಹೇಗೆ? : ಅಗತ್ಯವಿರುವ ಪದವಿ ಮುಗಿಸಿದ ವ್ಯಕ್ತಿ ರಾಜ್ಯ ಔಷಧ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಅದರ ನಂತರ ನೀವು drugs standard control organization (ರಾಜ್ಯ ಔಷಧ ಪ್ರಮಾಣ ನಿಯಂತ್ರಣ ಸಂಸ್ಥೆ) ಸಂಪರ್ಕಿಸಬೇಕು. ಇಲ್ಲಿ ನೀವು ಪರವಾನಗಿಗಾಗಿ ಫಾರ್ಮ್ ಭರ್ತಿ ಮಾಡಬೇಕು ಮತ್ತು ಶುಲ್ಕವನ್ನು ಪಾವತಿಸಬೇಕು. ಮೆಡಿಕಲ್ ಸ್ಟೋರ್ ತೆರೆಯಲು ನೀವು ಒಟ್ಟು ನಾಲ್ಕು ರೀತಿಯ ನೋಂದಣಿಯನ್ನು ಪಡೆಯಬೇಕು. ಇವುಗಳಲ್ಲಿ ಮೊದಲನೆಯದು ಅಂಗಡಿ ನೋಂದಣಿ, ಎರಡನೆಯದು ವ್ಯಾಪಾರ ನೋಂದಣಿ, ಮೂರನೆಯದು GST ನೋಂದಣಿ ಮತ್ತು ನಾಲ್ಕನೆಯದು ಔಷಧ ಪರವಾನಗಿ. ಅಂಗಡಿ ನೋಂದಣಿಗಾಗಿ, ನೀವು ಅಂಗಡಿಯ ದಾಖಲೆಗಳನ್ನು ಹೊಂದಿರಬೇಕು.

ಅಂಗಡಿ ನಿಮ್ಮದಲ್ಲದಿದ್ದರೆ, ನೀವು ಅದರ ಬಾಡಿಗೆ ಪತ್ರವನ್ನುನೀಡಬೇಕು. ಇಷ್ಟೇ ಅಲ್ಲದೆ ಎರಡು ರೀತಿ ಔಷಧ ಪರವಾನಗಿ ಲಭ್ಯವಿದೆ. ನೀವು ಸಣ್ಣ ವೈದ್ಯಕೀಯ ಅಂಗಡಿಯನ್ನು ತೆರೆಯಲು ಬಯಸಿದರೆ ಚಿಲ್ಲರೆ ಔಷಧ ಪರವಾನಗಿಯನ್ನು ತೆಗೆದುಕೊಳ್ಳಬೇಕು. ನೀವು ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಅಂಗಡಿಯನ್ನು ತೆರೆಯಲು ಬಯಸಿದರೆ, ಸಗಟು ಔಷಧ ಪರವಾನಗಿ ಅಗತ್ಯವಿದೆ. ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಔಷಧ ಪರವಾನಗಿ ಸುಲಭವಾಗಿ ಸಿಗುತ್ತದೆ.

ಮೆಡಿಕಲ್ ಸ್ಟೋರ್ ತೆರೆಯುವ ಲಾಭ :

• ಔಷಧಿ ಮತ್ತು ಆರೋಗ್ಯ ಸಂಬಂಧಿತ ಉತ್ಪನ್ನಗಳಿಗೆ ಯಾವಾಗಲೂ ಬೇಡಿಕೆ ಇದೆ. ಇದು ಸ್ಥಿರವಾದ ಬ್ಯುಸಿನೆಸ್

• ಔಷಧಿಗಳು ಮತ್ತು ಇತರ ಆರೋಗ್ಯ ಉತ್ಪನ್ನಗಳ ಮೇಲೆ ಉತ್ತಮ ಲಾಭವಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸುವ ವ್ಯವಹಾರ.

• ಈ ವ್ಯವಹಾರದಲ್ಲಿ ಬಹಳ ಕಡಿಮೆ ಅಪಾಯವಿದೆ. ಮೆಡಿಕಲ್ ಸ್ಟೋರ್ ಲಾಭ ಆರಂಭಿಕ ಹೂಡಿಕೆಗಿಂತ ಹೆಚ್ಚಾಗಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ