ಎರಡು ಅಥವಾ ಅದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ

Published : Dec 10, 2022, 11:15 AM IST
ಎರಡು ಅಥವಾ ಅದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ

ಸಾರಾಂಶ

ಎಲ್ಲ ಉದ್ಯೋಗಿಗಳ ಬಳಿ ಇಪಿಎಫ್ ಖಾತೆ ಇದ್ದೇಇರುತ್ತದೆ. ಆದರೆ, ಕೆಲವರ ಬಳಿ ಎರಡೆರಡು ಇಪಿಎಫ್ ಖಾತೆಗಳಿರುತ್ತವೆ. ಈ ರೀತಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳಿದ್ರೆ ಅವುಗಳನ್ನು ವಿಲೀನಗೊಳಿಸೋದು ಉತ್ತಮ. ಹಾಗಾದ್ರೆ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ. 

Business Desk:ತಿಂಗಳ ವೇತನ ಪಡೆಯುವ ಎಲ್ಲ ಉದ್ಯೋಗಿಗಳೂ ಇಪಿಎಫ್ ಖಾತೆ ಹೊಂದಿರುತ್ತಾರೆ.  ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಈ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಉದ್ಯೋಗಿ ಹಾಗೂ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ತಮ್ಮ ಮೂಲ ವೇತನದಿಂದ ಇಪಿಎಫ್ ಖಾತೆಗೆ ಶೇ.12ರಷ್ಟು ಮೊತ್ತವನ್ನು ಕೊಡುಗೆ ನೀಡುತ್ತಾರೆ. ಇಪಿಎಫ್ ಖಾತೆಗೆ ಸರ್ಕಾರ ಪ್ರತಿ ವರ್ಷ ಬಡ್ಡಿ ಜಮೆ ಮಾಡುತ್ತದೆ. ಪ್ರಸ್ತುತ ಶೇ.8.1ರಷ್ಟು ಬಡ್ಡಿ ನೀಡಲಾಗುತ್ತಿದೆ. ಕೆಲವರು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಉದ್ಯೋಗ ಬದಲಾಯಿಸುವಾಗ ಅಥವಾ ಬೇರೆ ಯಾವುದೋ ಕಾರಣದಿಂದ ಎರಡು ಇಪಿಎಫ್ ಖಾತೆಗಳನ್ನು ಹೊಂದಿರುತ್ತಾರೆ. ಈ ರೀತಿ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳಿದ್ರೆ ಅವುಗಳನ್ನು ವಿಲೀನ ಮಾಡೋದು ಉತ್ತಮ. ಇದ್ರಿಂದ ನಿಮ್ಮ ಇಪಿಎಫ್ ಖಾತೆಯಲ್ಲಿ ಒಟ್ಟು ಎಷ್ಟು ಬ್ಯಾಲೆನ್ಸ್ ಇದೆ ಎಂದು ಪರಿಶೀಲಿಸಲು ಎರಡೆರಡು ಖಾತೆಗಳಿಗೆ ಲಾಗಿನ್ ಆಗೋದು ತಪ್ಪುತ್ತದೆ. ಗೊಂದಲವೂ ಇರೋದಿಲ್ಲ. ಈಗಂತೂ ಎರಡು ಇಪಿಎಫ್ ಖಾತೆಗಳನ್ನು ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲೇ ವಿಲೀನಗೊಳಿಸಬಹುದು. ಹಾಗಾದ್ರೆ ಇಪಿಎಫ್ ಖಾತೆಗಳನ್ನು ಏಕೆ ವಿಲಿನ ಮಾಡಬೇಕು? ಅದರಿಂದ ಆಗುವ ಪ್ರಯೋಜನಗಳೇನು? 

ಏಕೆ ವಿಲೀನಗೊಳಿಸಬೇಕು?
ನೀವು ಕಂಪನಿ (Company) ಬದಲಾಯಿಸುವಾಗ ಹಳೆಯ ಕಂಪನಿಯಲ್ಲಿದ್ದ ಇಪಿಎಫ್ (EPF) ಖಾತೆಯನ್ನು ಹೊಸ ಕಂಪನಿಗೆ ವರ್ಗಾಯಿಸಲು ಸಾಧ್ಯವಿದೆ. ಆದರೆ, ಕೆಲವರು ಹೊಸ ಕಂಪನಿ ಸೇರುವಾಗ ಹೊಸ ಇಪಿಎಫ್ (EPF) ಖಾತೆ ತೆರೆಯುತ್ತಾರೆ. ಹೀಗೆ ಮಾಡೋದ್ರಿಂದ ನಿಮ್ಮ ಹಳೆಯ ಇಪಿಎಫ್ (EPF) ಖಾತೆಯಲ್ಲಿರುವ ಹಣವನ್ನು ಹೊಸ ಖಾತೆಗೆ ವರ್ಗಾಯಿಸಲು ನೀವು ಎರಡೂ ಖಾತೆಗಳನ್ನು ವಿಲೀನಗೊಳಿಸೋದು ಅಗತ್ಯ. ಅಲ್ಲದೆ, ಖಾತೆಗಳ ವಿಲೀನದಿಂದ (Merge) ಇಪಿಎಫ್ ನಲ್ಲಿ ನೀವು ಒಟ್ಟು ಎಷ್ಟು ಹೂಡಿಕೆ (Invest) ಮಾಡಿದ್ದೀರಿ ಎಂಬುದನ್ನು ಸುಲಭವಾಗಿ ತಿಳಿಯಲು ಕೂಡ ಸಾಧ್ಯವಾಗುತ್ತದೆ. 

ತೆರಿಗೆದಾರರಿಗೆ ಶುಭ ಸುದ್ದಿ; ತೆರಿಗೆ ರೀಫಂಡ್ ನಿಯಮ ಬದಲಾಯಿಸಿದ ಐಟಿ ಇಲಾಖೆ

ವಿಲೀನಗೊಳಿಸೋದು ಹೇಗೆ?
ಹಂತ 1: ಇಪಿಎಫ್ಒ (EPFO) ಅಧಿಕೃತ ವೆಬ್ ಸೈಟ್ https://unifiedportal-mem.epfindia.gov.in ಭೇಟಿ ನೀಡಿ.
ಹಂತ 2: ಆ ಬಳಿಕ 'One Member One EPF account'ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಸ್ಕ್ರೀನ್ ಮೇಲೆ ಇಪಿಎಫ್ (EPF) ಖಾತೆಗಳ (Accounts) ವಿವರದ ಜೊತೆಗೆ ವೈಯಕ್ತಿಕ ಮಾಹಿತಿ (Personal information) ಕೂಡ ಕಾಣಿಸುತ್ತದೆ.
ಹಂತ 4: ನಿಮ್ಮ ಈ ಹಿಂದಿನ ಖಾತೆಯನ್ನು ಈಗಿನ ಖಾತೆಯೊಂದಿಗೆ ವಿಲೀನಗೊಳಿಸಲು ನಿಮ್ಮ ಹಳೆಯ ಅಥವಾ ಹೊಸ ಸಂಸ್ಥೆಯ ದೃಢೀಕರಣ ನೀಡಬೇಕಾಗುತ್ತದೆ. ವಿಲೀನ ಪ್ರಕ್ರಿಯೆ ಚುರುಕಾಗಿ ಆಗಲು ಪ್ರಸಕ್ತ ನೀವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ದೃಢೀಕರಣ ನೀಡೋದು ಉತ್ತಮ. ಹಳೆಯ ಸದಸ್ಯತ್ವ ಐಡಿ ಅಂದ್ರೆ ಈ ಹಿಂದಿನ ಪಿಎಫ್ ಖಾತೆ ಸಂಖ್ಯೆ ಅಥವಾ ಯುಎಎನ್ ನಮೂದಿಸಿ. 'Get Details'ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಹಳೆಯ ಇಪಿಎಫ್ ಖಾತೆಗೆ ಸಂಬಂಧಿಸಿದ ಮಾಹಿತಿಗಳು ಸ್ಕ್ರೀನ್ ಮೇಲೆ ಕಾಣಿಸುತ್ತವೆ. 
ಹಂತ 5: 'Get OTP'ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. 
ಹಂತ 6: ಈಗ ಒಟಿಪಿ (OTP) ನಮೂದಿಸಿದ್ರೆ ನಿಮ್ಮ ಮನವಿ (Request) ಸಲ್ಲಿಕೆ (Submit) ಆಗುತ್ತದೆ. 

ಡಿಜಿಟಲ್ ಪಾವತಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1

ನಿಮ್ಮಈಗಿನ ಉದ್ಯೋಗದಾತ ಸಂಸ್ಥೆ ಅನುಮೋದನೆ ಬಳಿಕ ಹಳೆಯ ಖಾತೆಯು ಹೊಸ ಖಾತೆಯೊಂದಿಗೆ ವಿಲೀನವಾಗುತ್ತದೆ. ಇನ್ನು ನೀವು ಹೂಡಿಕೆ ಅಥವಾ ವಿತ್ ಡ್ರಾ ಮಾಡದೆ 36 ತಿಂಗಳು ಪೂರ್ಣಗೊಂಡಿದ್ರೆ ಆಗ ನಿಮ್ಮ ಪಿಎಫ್ ಖಾತೆ ನಿಷ್ಕ್ರಿಯವಾಗಲಿದೆ. ನಿಮ್ಮ ಪಿಎಫ್ ಖಾತೆಗೆ ಹಣ ಜಮೆ ಆಗದೆ ಮೂರು ವರ್ಷಗಳ ತನಕ ಅದು ಸಕ್ರಿಯವಾಗಿರುತ್ತದೆ. ಆ ನಂತರ ಅದು ನಿಷ್ಕ್ರಿಯವಾಗುತ್ತದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ