ತೆರಿಗೆದಾರರಿಗೆ ಶುಭ ಸುದ್ದಿ; ತೆರಿಗೆ ರೀಫಂಡ್ ನಿಯಮ ಬದಲಾಯಿಸಿದ ಐಟಿ ಇಲಾಖೆ

ಬಾಕಿ ಉಳಿದಿರುವ ತೆರಿಗೆಗೆ ರೀಫಂಡ್ ಮೊತ್ತದ ಹೊಂದಾಣಿಕೆಗೆ ಸಂಬಂಧಿಸಿದ ನಿಯಮಗಳಲ್ಲಿ ಆದಾಯ ತೆರಿಗೆ ಇಲಾಖೆ ಬದಲಾವಣೆ ಮಾಡಿದೆ.ಹಾಗಾದ್ರೆ ಏನೆಲ್ಲ ಬದಲಾವಣೆಗಳಾಗಿವೆ? ಇವು ತೆರಿಗೆದಾರನ ಮೇಲೆ ಹೇಗೆ ಪರಿಣಾಮ ಬೀರಲಿವೆ? 

Tax refund rules changed Income Tax Department gave big relief to taxpayers changed the rules of tax refund

ನವದೆಹಲಿ (ಡಿ.9): ಬಾಕಿ ಉಳಿದಿರುವ ತೆರಿಗೆಗೆ ರೀಫಂಡ್ ಮೊತ್ತದ ಹೊಂದಾಣಿಕೆಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಕೊಂಚ ಮಟ್ಟಿನ ನಿರಾಳತೆ ನೀಡಿದೆ.  ಇಂಥ ಪ್ರಕರಣಗಳಲ್ಲಿ ತೆರಿಗೆ ಅಧಿಕಾರಿಗಳು 21 ದಿನಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದರಿಂದ ವ್ಯಾಜ್ಯಗಳ ಪ್ರಮಾಣ ತಗ್ಗಲಿದೆ. ಮೌಲ್ಯಮಾಪನ ಅಧಿಕಾರಿಗೆ ಈ ಹಿಂದೆ ನೀಡಲಾಗಿದ್ದ 30 ದಿನಗಳ ಕಾಲಾವಕಾಶವನ್ನು 21 ದಿನಗಳಿಗೆ ಇಳಿಕೆ ಮಾಡಲಾಗಿದೆ ಎಂದು ಆದಾಯ ತೆರಿಗೆ (ವ್ಯವಸ್ಥೆಗಳ) ನಿರ್ದೇಶನಾಲಯ ತಿಳಿಸಿದೆ. ಒಂದು ವೇಳೆ ತೆರಿಗೆದಾರರು ರೀಫಂಡ್ ಮೊತ್ತವನ್ನು ಬಾಕಿ ತೆರಿಗೆಗೆ ಹೊಂದಾಣಿಕೆ ಮಾಡಲು ಒಪ್ಪದಿದ್ರೆ ಅಥವಾ ಅರ್ಧ ಒಪ್ಪಿಗೆ ನೀಡಿದ್ರೆ ಅಂಥ ಸಂದರ್ಭಗಳಲ್ಲಿ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ (ಸಿಪಿಸಿ) ಮೌಲ್ಯಮಾಪನ ಅಧಿಕಾರಿಗೆ ಈ ಪ್ರಕರಣವನ್ನು ನಿರ್ವಹಣೆ ಮಾಡುವಂತೆ ತಕ್ಷಣ ಸೂಚಿಸುತ್ತದೆ. ಆಗ ಮೌಲ್ಯಮಾಪನ ಅಧಿಕಾರಿ 21 ದಿನಗಳೊಳಗೆ ಸಿಪಿಸಿಗೆ ತನ್ನ ನಿರ್ಧಾರ ಸಲ್ಲಿಕೆ ಮಾಡಬೇಕು. ರೀಫಂಡ್ ಹೊಂದಾಣಿಕೆಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಮೌಲ್ಯಮಾಪನ ಅಧಿಕಾರಿ ತಪ್ಪು ನಿರ್ಧಾರ ಕೈಗೊಂಡಿರೋದ್ರಿಂದ ಅಥವಾ ಪ್ರತಿಕ್ರಿಯೆ ನೀಡದಿರುವ ಕಾರಣ ರೀಫಂಡ್ ತಪ್ಪು ಹೊಂದಾಣಿಕೆಗೆ ಕಾರಣವಾಗಿತ್ತು. ಇದ್ರಿಂದ ಅನಗತ್ಯ ವ್ಯಾಜ್ಯಗಳು ಸೃಷ್ಟಿಯಾಗಿದ್ದವು. ಹೀಗಾಗಿ ಹೊಸ ನಿಯಮದಿಂದ ವ್ಯಾಜ್ಯ ಪ್ರಕರಣಗಳು ತಗ್ಗುವ ನಿರೀಕ್ಷೆಯಿದೆ.

ನೀವು ಈ ಆರ್ಥಿಕ ಸಾಲಿನಲ್ಲಿ ನಿಮ್ಮ ವಾರ್ಷಿಕ ಆದಾಯದ ಮೇಲೆ ವಿಧಿಸಲ್ಪಡೋ ತೆರಿಗೆಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸಿದ್ರೆ ಆದಾಯ ತರಿಗೆ ರಿಟರ್ನ್ (ITR) ಸಲ್ಲಿಕೆ ಮಾಡಿದ ಬಳಿಕ ಆದಾಯ ತೆರಿಗೆ ಮರುಪಾವತಿಯನ್ನು (Refund) ಪಡೆಯಲು ಅರ್ಹರಾಗುತ್ತೀರಿ. ಈ ಬಗ್ಗೆ ನಿಮಗೆ ಆದಾಯ ತೆರಿಗೆ ಕಾಯ್ದೆ (Income Tax Act) 1961ರ ಸೆಕ್ಷನ್ 143 (1) ಅಡಿಯಲ್ಲಿ ನೋಟಿಸ್ (Notice) ಕಳುಹಿಸಲಾಗುತ್ತದೆ. ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡೆಸುತ್ತದೆ ಹಾಗೂ ಈ ಹಣ ತೆರಿಗೆದಾರರು ಐಟಿಆರ್ ನಲ್ಲಿ ನಮೂದಿಸಿರೋ ಬ್ಯಾಂಕ್ (Bank) ಖಾತೆಗೆ (Account) ಜಮಾ ಮಾಡಲಾಗುತ್ತದೆ.

ಬಾಸ್ ಹೀಗೂ ಇರ್ತಾರಾ?10 ಸಾವಿರ ಉದ್ಯೋಗಿಗಳಿಗೆ ಡಿಸ್ನಿಲ್ಯಾಂಡ್ ಪ್ರವಾಸ ಆಯೋಜಿಸಿದ ಸಿಟಾಡೆಲ್ ಸಿಇಒ!

2021-22ನೇ ಹಣಕಾಸು ಸಾಲಿನ ಪ್ರಾರಂಭದ ಐದು ತಿಂಗಳಲ್ಲಿ ಸುಮಾರು 1.97 ಕೋಟಿ ತೆರಿಗೆದಾರರು ಆದಾಯ ತೆರಿಗೆ ಇಲಾಖೆಯಿಂದ ಒಟ್ಟು 1.14ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ (ರೀಫಂಡ್) ಪಡೆದಿದ್ದಾರೆ. ನೀವು ಐಟಿಆರ್ ಸಲ್ಲಿಕೆ ಮಾಡಿದ್ರೆ ಆದಾಯ ತೆರಿಗೆ ಮರುಪಾವತಿ ಸ್ಟೇಟಸ್ ಅನ್ನು ಹೊಸ ಆದಾಯ ತೆರಿಗೆ ಪೋರ್ಟಲ್ (new income tax portal) ಅಥವಾ ಎನ್ ಎಸ್ ಡಿಎಲ್ (NSDL) ವೆಬ್ ಸೈಟ್ ಮೂಲಕ ಪರಿಶೀಲಿಸಬಹುದು. 

ಆದಾಯ ತೆರಿಗೆ ಪೋರ್ಟಲ್ ನಲ್ಲಿ ಪರಿಶೀಲಿಸೋದು ಹೇಗೆ?
ಹಂತ 1: www.incometax.gov.in ಭೇಟಿ ನೀಡಿ.  ನಿಮ್ಮ ಪ್ಯಾನ್ (PAN ) ಸಂಖ್ಯೆ ಹಾಗೂ ಪಾಸ್ ವರ್ಡ್ ( password)ಬಳಸಿ ನಿಮ್ಮ ಖಾತೆಗೆ ಲಾಗಿ ಇನ್ ಆಗಿ.
ಹಂತ 2: e-file ಆಯ್ಕೆ ಆರಿಸಿ. ಆ ಬಳಿಕ  e-file ಆಯ್ಕೆ ಅಡಿಯಲ್ಲಿರೋ 'Income tax returns'ಆಯ್ಕೆ ಮಾಡಿ. ನಂತರ 'View Filed
returns'ಆರಿಸಿ.

ಡಿಜಿಟಲ್ ಪಾವತಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1

ಹಂತ 3: ಆ ಬಳಿಕ ಅಂದಾಜು ವರ್ಷ (AY) ಆಯ್ಕೆ ಮಾಡಬೇಕು. 2020-21ನೇ ಆರ್ಥಿಕ ಸಾಲಿಗೆ ಅಂದಾಜು ವರ್ಷ 2021-22 ಆಗಿರುತ್ತದೆ. 
ಹಂತ 4:  ಆ ನಂತರ 'View Details'ಆಯ್ಕೆ ಮಾಡಿ. ಈಗ ನಿಮಗೆ ನಿಮ್ಮ ಐಟಿಆರ್ ಸ್ಟೇಟಸ್ ಕಾಣಿಸುತ್ತದೆ. 

Latest Videos
Follow Us:
Download App:
  • android
  • ios